ವಿರಾಜಪೇಟೆ : ವಾಹನ ಪಾಸ್ ಪಡೆದು ದುರುಪಯೋಗಪಡಿಸಿಕೊಂಡ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು

No comments
ವಿರಾಜಪೇಟೆ (Times Of Coorg) : ಕೋವಿಡ್ 19 ನಿಯಂತ್ರಣ ಸಂಬಂಧ ರಾಜ್ಯದಲ್ಲಿ ಲಾಕ್ ಡೌನ್ ಇದ್ದು ಜಿಲ್ಲೆ ಗಡಿಗಳನ್ನು ಮುಚ್ಚಿದ್ದು ತುರ್ತು ವೈದ್ಯಕೀಯ ಚಿಕಿತ್ಸೆಯಂತಹ  ಅನಿವಾರ್ಯ ಸಂದರ್ಭಗಳಲ್ಲಿ ವಾಹನ ಪಾಸ್ ಗಳನ್ನು ಇಲಾಖಾ ವತಿಯಿಂದ ನೀಡಲಾಗುತ್ತಿದೆ. ಅದರೆ ಕೆಲವು ವ್ಯಕ್ಕಿಗಳು ಇದನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವು ನಡೆಯುತ್ತಿದೆ. ಇದಕ್ಕೆ ಪುಷ್ಟಿ ಎಂಬಂತೆ  ವಿರಾಜಪೇಟೆ ನಗರದ ತೆಲುಗರ ಬೀದಿಯ ನಿವಾಸಿಯೊಬ್ಬರು ಗರ್ಭಿಣಿ ಪುತ್ರಿ ತಪಾಸಣೆಗೆ ಕರೆದೊಯ್ಯಬೇಕೆಂದು  ಸುಳ್ಳು ಹೇಳಿ ವಿರಾಜಪೇಟೆ ಪೊಲೀಸರಿಂದ ವಾಹನ ಪಾಸ್ ಪಡೆದು ಚಾಲಕನ ಜೊತೆ ಬೆಂಗಳೂರಿಗೆ ಹೋಗಿ ಅಲ್ಲಿಂದ ರಾತ್ರೋ ರಾತ್ರಿ 3 ಮಂದಿಯನ್ನು ವಿರಾಜಪೇಟೆಗೆ ಕರೆ ತಂದಿದ್ದಾರೆ .

ಈ ವಿಷಯಕ್ಕೆ ಸಂಬಂಧಿಸಿದಂತೆ ವೀರಾಜಪೇಟೆ ಪೊಲೀಸರು ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ. ಈ ರೀತಿ ಸುಳ್ಳು ಮಾಹಿತಿ ನೀಡಿ ವಾಹನ ಪಾಸ್ ಪಡೆದು ದುರುಪಯೋಗ ಪಡಿಸುತ್ತಿರುವ ಪ್ರಕರಣಗಳು ಇನ್ನು ಮುಂದೆ ನಡೆದರೆ  ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿ ಎಚ್ಚರಿಸಲಾಗಿದೆ. 

No comments

Post a Comment