ಪೊಲೀಸ್ ತಪ್ಪಿನಿಂದಾಗಿ ಮಗುವೊಂದು ಮೃತಪಟ್ಟಿರುವುದಾಗಿ ಸುಳ್ಳು ಸುದ್ದಿ : ಕೊಡಗು ಪೋಲಿಸ್ ಇಲಾಖೆ ಸ್ಪಷ್ಟನೆ

No comments
ಮಡಿಕೇರಿ ( Times Of Coorg) : ಪೊಲೀಸ್ ತಪ್ಪಿನಿಂದಾಗಿ ಮಗುವೊಂದು ಮೃತಪಟ್ಟಿರುವುದಾಗಿ ಸುಳ್ಳು ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಡಿತ್ತು ‌. ಈ ಕುರಿತು ಕೊಡಗು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಸುಮನ್ ಡಿ ಪನ್ನೇಕರ್ ತಮ್ಮ ಫೇಸ್ಬುಕ್ ಪುಟದಲ್ಲಿ ಸ್ಪಷ್ಟೀಕರಣ ನೀಡಿದ್ದು" ಈ ಮಗುವಿನ ತಂದೆಯನ್ನು ಸಂಪರ್ಕಿಸಿ ಸತ್ಯಾಸತ್ಯತೆಯನ್ನು  ಪರಿಶೀಲಿಸಲಾಗಿದೆ. ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ , ಕೆಲವು ಕಿಡಿಗೇಡಿಗಳು ಪೋಲಿಸ್ ತಪ್ಪಿನಿಂದಾಗಿ ಮಗು ಮೃತಪಟ್ಟಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಇದಕ್ಕೂ ಪೋಲಿಸ್ ಇಲಾಖೆಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

[ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುದ್ದಿಗಳನ್ನು ಅದು ಸತ್ಯವೇ ಎಂದು ತಿಳಿಯದೇ ಹರಡಬೇಡಿ. ]

No comments

Post a Comment