ಸಿದ್ದಾಪುರ ಆರೋಗ್ಯ ಕೇಂದ್ರದ ವತಿಯಿಂದ ಮನೆ ಮನೆಗೆ ತೆರಳಿ ಕೊವಿಡ್ ೧೯ ಜಾಗೃತಿ

No comments
ವರದಿ : ಕರಡಿಗೋಡು ಕೃಷ್ಣ ಸಿದ್ಧಾಪುರ
ಸಿದ್ದಾಪುರ ( Times Of Coorg) : ಅಂಬೇಡ್ಕರ್ ನಗರದಲ್ಲಿ ಕೊರೊನಾ ಕುರಿತು ಮನೆ -ಮನೆಗೆ ತೆರಳಿ ಆರೋಗ್ಯ  ಜಾಗೃತಿಯನ್ನು ಸಿದ್ದಾಪುರ ಅರೋಗ್ಯ ಕೇಂದ್ರದ ವತಿಯಿಂದ ನಡೆಸಲಾಯಿತು.

ಈ ಸಂದರ್ಭದಲ್ಲಿ ಪ್ರತಿಯೊಂದು ಕುಟುಂಬ ಸದಸ್ಯರನ್ನು ಥರ್ಮಲ್ ಸ್ಕೆನರ್ ಮುಖಾಂತರ ಪರಿಶೀಲಿಸಿದ ಅರೋಗ್ಯ ಸಹಾಯಕರು ಕೊರೊನಾ ವೈರಸ್ ಹರಡದಂತೆ ತಡೆಯುವ ಕುರಿತು  ಅಗತ್ಯ ಸಲಹೆಗಳನ್ನು ನೀಡಿದರು ಗ್ರಾಮಸ್ಥರಿಗೆ ಹೆಚ್ಚು ಜನಸಂದಣಿ ಇರುವ ಪ್ರದೇಶದಲ್ಲಿ ಅಂತರ ಕಾಯ್ದುಕೊಂಡು ನಿಲ್ಲುವುದು,ಕೈಗಳನ್ನು ಚೆನ್ನಾಗಿ ತೊಳೆಯುವಂತೆ ಸೂಚಿಸಲಾಯಿತು.
ಸಾರ್ವಜನಿಕವಾಗಿ ಸಂಚರಿಸುವಾಗ ಮಾಸ್ಕ್ ಧರಿಸುವಂತೆ,ಕೆಮ್ಮುವಾಗ,
ಸೀನುವಾಗ,ಕರವಸ್ತ್ರದಿಂದ
 ಬಾಯಿ, ಮುಗನ್ನು ಮುಚ್ಚಿಕೊಳ್ಳುವಂತೆ ಕರೆನೀಡಿದರು.

ಈ ಸಂದರ್ಭದಲ್ಲಿ ಅರೋಗ್ಯ ಸಹಾಯಕ ಸುದರ್ಶನ್, ಕಿರಿಯ ಆರೋಗ್ಯ ಸಹಾಯಕಿ ಸುನಿತಾ ಆಶಾ ಕಾರ್ಯಕರ್ತೆಯರಾದ ಸವಿತ,ಮಾಶೀಲಾಹಾಜರಿದ್ದರು.

No comments

Post a Comment