ಇದರ ಪರಿಣಾಮ ಜನರು ಕೆಲಸವಿಲ್ಲದೆ ತಮಗೆ ಬೇಕಾದ ನಿತ್ಯೋಪಯೋಗಿ ವಸ್ತುಗಳಿಗಾಗಿ ಕಷ್ಟಪಡುವ ಸನ್ನಿವೇಶ ನಿರ್ಮಾಣವಾಗಿದೆ.
ಈ ಸಂದರ್ಭದಲ್ಲಿ ಹಲವಾರು ಸಂಘ, ಸಂಸ್ಥೆಗಳು , ದಾನಿಗಳಿ, ಜನರಿಗಾಗಿ ಅಗತ್ಯ ವಸ್ತುಗಳ ಕಿಟ್ ಹಾಗೂ ಇನ್ನಿತರ , ಸೇವೆಗಳನ್ನು ಮಾಡುತ್ತಿರುವುದು ಶ್ಲಾಘನೀಯ ವಿಚಾರವಾಗಿದೆ.
ಆದರೆ ಫಲಾನುಭವಿಗಳ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಅವರ ಸ್ವಾಭಿಮಾನಕ್ಕೆ ಧಕ್ಕೆ ಉಂಟಾಗುವಂತೆ ಮಾಡದೇ, ತಮ್ಮ ಸೇವೆ ಕೇಲವ ಪ್ರಚಾರದ ಉದ್ದೇಶವಿಲ್ಲದೆ ನಿಸ್ವಾರ್ಥದಿಂದ ಕೂಡಿದ್ದಾಗಲಿ ಎಂದು ಎಸ್.ಕೆ.ಎಸ್.ಎಸ್.ಎಫ್ ವಿರಾಜಪೇಟೆ ವಲಯ ಅಧ್ಯಕ್ಷರಾದ ಸಹದ್ ಫೈಝಿ ಚೋಕಂಡಳ್ಳಿ ಮನವಿ ಮಾಡಿದ್ದಾರೆ.
ಹಾಗೂ ಭಾರತೀಯರೆಲ್ಲರೂ ಒಗ್ಗಟ್ಟಾಗಿ ಈ ಮಹಾಮಾರಿಯ ವಿರುದ್ಧ ಹೋರಾಡಿ ವಿಜಯಿಗಳಾಗೋಣ ಎಂದು ಸಹದಿ ಫೈಝಿ ತಿಳಿಸಿದರು