ಕುಶಾಲನಗರ (Times Of Coorg): ಅಸಹಾಯಕ ಸ್ಥಿತಿಯಲ್ಲಿ ಲಾಕ್ ಡೌನ್ ನಡುವೆ ಕೇರಳಕ್ಕೆ ನಡೆದುಕೊಂಡು ಹೋಗುತ್ತಿದ್ದ ವಯೋವೃದ್ಧರೊಬ್ಬರಿಗೆ ಆಶ್ರಯ ದೊರೆತ ಮಾನವೀಯ ಪ್ರಕರಣವಿದು. ಮುತ್ತು ಎಂಬ ವಯೋವೃದ್ಧ ಕುಶಾಲನಗರದಿಂದ 7ನೇ ಹೊಸಕೋಟೆ ಮಾರ್ಗವಾಗಿ ನಡೆದುಕೊಂಡು ಬರುತಿದ್ದ ಸಂದರ್ಭ ಅವರನ್ನು ಸ್ಥಳೀಯ ಮಾಧ್ಯಮ ವರದಿಗಾರರಾಧ ರವಿಚಂದ್ರ ಮತ್ತು ರಾಹುಲ್ ರವರು ವಿಚಾರಿಸಲಾಗಿ, ಕೇರಳ ಮೂಲದ ವ್ಯಕ್ತಿ ಎಂದು ತಿಳಿಸಿದ್ದು ,
ಸಂಬಂಧಿಕರು ಇಲ್ಲದ ಕಾರಣ ಊಟ ತಿಂಡಿ ಸಿಗದೇ ಕೇರಳಕ್ಕೆ ನಡೆದುಕೊಂಡು ಹೋಗುತ್ತಿರುವುದಾಗಿ ಹೇಳಿಕೆ ನೀಡಿದರು. ತದನಂತರ ಮದ್ಯಾಹ್ನದ ಭೋಜನ ಕೊಡಿಸಿ, ಮಡಿಕೇರಿಯ ವಿಕ್ರಂ ಜಾದೂಗಾರ್ ರವರಿಗೆ ವಿಷಯ ತಿಳಿಸಲಾಯಿತು. ಅವರು ಡಾ: ಅನನ್ಯ ಭಟ್ ರವರ ಸಲಹೆ ಮೇರೆಗೆ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲು ಸಲಹೆ ನೀಡಿದರು. ಸುಂಟಿಕೊಪ್ಪ ಠಾಣಾಧಿಕಾರಿ ತಿಮ್ಮಪ್ಪನವರು ಸ್ಥಳಕ್ಕೆ ಆಗಮಿಸಿ ಪ್ರಾಥಮಿಕ ತನಿಖೆ ನಡೆಸಿ, ಸ್ಥಳೀಯ ಆಶಾ ಕಾರ್ಯಕರ್ತೆ ಕವಿತಾರವರೊಂದಿಗೆ, 7ನೇ ಹೊಸಕೋಟೆ ನಿವಾಸಿ ರಿಜೇಶ್ ಎಂಬುವವರ ವಾಹನದಲ್ಲಿ ಸುಂಟಿಕೊಪ್ಪದ ಸರಕಾರಿ ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ತಪಾಸಣೆಗೊಳಪಡಿಸಲಾಯಿತು. ತದನಂತರ ವಯೋವೃದ್ಧ ಮುತ್ತು ರವರನ್ನು ಜಿಲ್ಲಾ ಆಸ್ಪತ್ರೆ ಕೋವಿಡ್ ವಿಭಾಗಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಯಿತು.
ಈ ಸಮಯದಲ್ಲಿ 7ನೇ ಹೊಸಕೋಟೆ ನಿವಾಸಿ ರಿಜೇಶ್, ಆಶಾ ಕಾರ್ಯಕರ್ತೆ ಕವಿತಾ, ಮಡಿಕೇರಿಯ ಜಾದೂಗಾರ ವಿಕ್ರಂ ರವರು ಮಾನವೀಯತೆ ಮೆರೆದು ವ್ಯಕ್ತಿಯನ್ನು ಸುರಕ್ಷಿತ ಸ್ಥಳಕ್ಕೆ ಸೇರಿಸುವಲ್ಲಿ ಸಹಕರಿಸಿದರು.
No comments
Post a Comment