ರಾಜ್ಯ ಸುದ್ದಿ (Times Of Coorg): ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮೇ 3 ರ ವರೆಗೆ ಮದ್ಯ ಮಾರಾಟಕ್ಕೆ ನಿಷೇಧ ಮುಂದುವರಿಸಿ ಅಬಕಾರಿ ಇಲಾಖೆ ಆದೇಶ ಹೊರಡಿಸಿದೆ. ಈ ಹಿಂದಿನ ಆದೇಶದ ಪ್ರಕಾರ ಏಪ್ರಿಲ್ 20 ಮಧ್ಯರಾತ್ರಿಯ ವರೆಗೆ ಮದ್ಯ ಮಾರಾಟಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಮದ್ಯ ಮಾರಾಟ ಹಾಗೂ ಉತ್ಪಾದನಾ ಘಟಕಗಳು ಏಪ್ರಿಲ್ 20 ರ ಮಧ್ಯ ರಾತ್ರಿಯವರೆಗೆ ಕಾರ್ಯನಿರ್ವಹಿಸಬಾರದು ಎಂದು ಹಿಂದಿನ ಆದೇಶದಲ್ಲಿತ್ತು. ಏಪ್ರಿಲ್ 20 ಬಳಿಕ ಲಾಕ್‌ಡೌನ್ ವಿನಾಯಿತಿಯಲ್ಲಿ ಮಧ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಅಬಕಾರಿ ಇಲಾಖೆ ಇದೀಗ ಹೊಸತೊಂದು ಆದೇಶವನ್ನು ಹೊರಡಿಸಿದ್ದು ಮೇ 3 ರ ವರೆಗೆ ಮದ್ಯ ಮಾರಾಟಕ್ಕಿರುವ ನಿರ್ಬಂಧವನ್ನು ಮುಂದುವರಿಸಿ ಅಬಕಾರಿ ಇಲಾಖೆ ಆದೇಶ ಹೊರಡಿಸಿದೆ.
No comments
Post a Comment