ತರಕಾರಿ ಆಮದಿಗೆ ಆಡಳಿತಾಧಿಕಾರಿಗಳಿಂದ ಬಿಗಿ ಕಾನೂನು | ಮಾರುಕಟ್ಟೆ ಸಮಿತಿಗಳಿಂದ ಭಾರಿ ವಿರೋಧ

ವರದಿ : ರಂಜಿತ್ ಕವಲಪಾರ
ವಿರಾಜಪೇಟೆ (Times Of Coorg) : ವಾಹನ ದಟ್ಟಣೆಯನ್ನು ಕಡಿಮೆಗೊಳಿಸುವ ಸಲುವಾಗಿ ಹಾಗು ವಾಹನಗಳಲ್ಲಿ  ಸಾಗಿಸುವ ಪ್ರಯಾಣಿಕರ ಸಂಖ್ಯೆಯನ್ನು ನಿಗ್ರಹಿಸುವ ಸಲುವಾಗಿ ಗೋಣಿಕೊಪ್ಪಲಿನ ಕೃಷಿ ಮಾರುಕಟ್ಟೆ ಸಭಾಂಗಣದಲ್ಲಿ ವಿರಾಜಪೇಟೆ ತಾಲೂಕಿನ ತಹಶಿಲ್ದಾರ್ ನಂದೀಶ್ ಕುಮಾರ್'ರವರ ಅಧ್ಯಕ್ಷತೆಯಲ್ಲಿ  ಇಂದು 'ಕೇವಲ ಭಾರಿವಾಹನಗಳಲ್ಲಿ ಮಾತ್ರ ತರಕಾರಿ ಆಮದಿಗೆ ಅವಕಾಶ ನೀಡಿ ಸಣ್ಣ ಪುಟ್ಟ ಗೂಡ್ಸ್ ವಾಹನಗಳಿಗೆ ಪರವಾನಿಗೆ ನೀಡದಂತೆ ಹಾಗು ಈ ಹಿಂದೆ ನೀಡಿರುವ ಪರವಾನಿಗೆಯನ್ನು ತಡೆಹಿಡಿಯುವಂತೆ' ತೆಗೆದುಕೊಂಡಿರುವ ನಿರ್ಧಾರಕ್ಕೆ. ಜಿಲ್ಲೆಯ ವಿವಿಧ ಮಾರುಕಟ್ಟೆ ಸಮಿತಿಗಳು ಭಾರಿ ವಿರೋಧ ವ್ಯಕ್ತಪಡಿಸುತ್ತಿದ್ದು. ಕೂಡಲೇ ನಿರ್ಧಾರವನ್ನು ಬದಲಿಸುವಂತೆ ಆಗ್ರಹಿಸಿದೆ.

ಕೊಡಗಿನ ಸಣ್ಣ ಪ್ರಮಾಣದ ವ್ಯಾಪಾರಸ್ಥರು ಅದರಲ್ಲೂ ತರಕಾರಿ ವ್ಯಾಪಾರಸ್ಥರು. ಎರಡೋ, ಮೂರೋ ಟನ್'ಗಳಷ್ಟು ತರಕಾರಿಗಳನ್ನು ಹುಣಸೂರು, ಪಂಚವಳ್ಳಿ, ಕೆ.ಆರ್ ನಗರದಂತಹ ಹಳ್ಳಿ ಪ್ರದೇಶಗಳಿಂದ ರೈತರ ಬಳಿ ನೇರವಾಗಿ ಖರೀದಿಸಿ ಆರ್. ಎಂ.ಸಿ ನಿರ್ಧಾರಿಸುವ ಬೆಲೆಗೆ ಈ ಹಿಂದೆ ಮಾರಾಟ ಮಾಡುತ್ತಿತ್ತು. ಈ ಸಣ್ಣ ಪ್ರಮಾಣದ ಮಾರಾಟಗಾರರು ಪಿಕಪ್, ಟಾಟಾ ಏಸ್'ನಂತಹ ಸಣ್ಣ ಗೂಡ್ಸ್ ಗಾಡಿಗಳನ್ನು ಬಳಸಿಕೊಂಡು ತರಕಾರಿಗಳನ್ನು ಹೊರ ಜಿಲ್ಲೆಗಳಿಂದ ಆಮದು ಮಾಡುತ್ತಿತ್ತು. 

ಕೆಲವು ಸೇವಾ ಘಟಕಗಳು ಇದೇ ರೀತಿ ತರಕಾರಿಗಳನ್ನು ತರಿಸಿಕೊಂಡು ಗ್ರಾಹಕರಿಗೆ ನೀಡುತ್ತಿತ್ತು. ಆದರೆ ಇದೀಗ ಆಡಳಿತ ಹೊರಡಿಸಿರುವ ಆದೇಶದಂತೆ ಎರಡು ಟನ್, ಮೂರು ಟನ್ ತರಕಾರಿ ತರುತ್ತಿದ್ದ ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ಹಾಗು ಹಲವು ಸೇವಾ ಘಟಕಗಳಿಗೆ ವ್ಯಾಪಾರ ಮಾಡುವುದು ಅಸಾಧ್ಯ ಸ್ಥಿತಿ ಉಂಟಾಗಿದೆ. ಆಡಳಿತ ಹೇಳುವ ಹಾಗೆ ದೊಡ್ಡ ( ಲಾರಿ) ವಾಹನಗಳಲ್ಲಿ ಮಾತ್ರ ತರಕಾರಿ ಆಮದಿಗೆ ಅವಕಾಶ ಕೊಡುವುದಾದರೆ ಅಷ್ಟೊಂದು ಬಾಡಿಗೆ ಹಾಗು ಬಂಡವಾಳ ಹಾಕಿ ತರಕಾರಿ ತರಿಸಿಕೊಳ್ಳುವ ಆರ್ಥಿಕ ಸ್ಥಿತಿ ಇಲ್ಲದ ಸಣ್ಣ ಪುಟ್ಟ ವ್ಯಾಪಾರಸ್ಥರು ನಿಸ್ಸಾಹಯಕರಾಗುತ್ತಾರೆ. ಅವರು ಹೇಳುವಂತೆ ನಾಲ್ಕು, ಐದು ವ್ಯಾಪಾರಸ್ಥರು ಒಟ್ಟುಗೂಡಿ ತರಕಾರಿ ತರೆಸಿಕೊಳ್ಳುವುದು ಅಷ್ಟೊಂದು ಸುಲಭ ಸಾಧ್ಯವು ಅಲ್ಲ, ಹೆಚ್ಚಾಗಿ ಪರಸ್ಪರ ವ್ಯಾಪಾರಸ್ಥರಲ್ಲಿ ಒಂದಾಣಿಕೆ ಇರುವುದಿಲ್ಲ ಹಾಗು ತರಿಸುವ ತರಕಾರಿ ಪ್ರಮಾಣದಲ್ಲಿ ವ್ಯತ್ಯಾಸವಿರುತ್ತದೆ. ಇದು ಗೊಂದಲಕ್ಕೆ ನಾಂದಿಹಾಡಿದಂತಾಗುತ್ತದೆ.

   ಅದು ಅಲ್ಲದೆ ಇದರಿಂದಾಗಿ ನೇರವಾಗಿ ರೈತರ ಬಳಿಯಿಂದ ತರಕಾರಿ ತರುವುದು ಅಸಾಧ್ಯವಾಗಿ ಒಂದೆಡೆ ಹಳ್ಳಿಗಾಡಿನ ರೈತರ ಹೊಟ್ಟೆಗೆ ನೇರವಾಗಿ ಹೊಡೆದಂತೆ ಆಗುತ್ತದೆ. ಈಗ ಹೊರಡಿಸಿರುವ ಆದೇಶದಂತೆ ನೇರವಾಗಿ ಮೈಸೂರಿನ ಆರ್ ಎಂ ಸಿ ಗೆ ಹೋಗಿ ತರಕಾರಿ ಖರೀದಿಸಲು ಅವಕಾಶ ಇರುತ್ತದೆ ಅಷ್ಟೇ ಹಾಗು ಲಾರಿಯಲ್ಲಾದರು ಮೂರು ಜನಕ್ಕೆ ಮಾತ್ರ ಹೋಗಿ ಬರಲು ಅವಕಾಶವಿದ್ದು. ಆಯಾ ವ್ಯಾಪಾರಿಗಳಿಗೆ ನೇರವಾಗಿ ಹೋಗಿ ತಮಗೆ ಬೇಕಾದ ತರಕಾರಿಗಳನ್ನು ಆಯ್ಕೆಮಾಡಿಕೊಳ್ಳುವ  ಸ್ವತಂತ್ರವೂ ಈ ಮೂಲಕ ಇಲ್ಲದಾಗುತ್ತೆ.

ಈ ರೀತಿಯ ಗೊಂದಲ ಹಾಗು ಸಣ್ಣ ವ್ಯಾಪಾರಿಗಳಿಗೆ ತೊಂದರೆ ಉಂಟಾಗುವಂತಹ ಈ ಆದೇಶವನ್ನು ಗೋಣಿಕೊಪ್ಪ ಹಾಗು ವಿರಾಜಪೇಟೆಯ ಮಾರುಕಟ್ಟೆ ಸಮಿತಿ ಖಂಡಿಸಿದ್ದು. ಇದೇ ಆದೇಶ ಮಡಿಕೇರಿಯಲ್ಲಿಯೂ ಆಗಲಿರುವುದನ್ನು ಮನಗಂಡ ಮಡಿಕೇರಿಯ ಮಾರುಕಟ್ಟೆ ಸಮಿತಿಯೂ ಈ ನಿರ್ಣಯವನ್ನು ತೀವ್ರವಾಗಿ ಖಂಡಿಸುತ್ತಿದ್ದಾರೆ.
ಒಂದೊ ಆರ್ ಎಂ ಸಿಯಿಂದ ಜಿಲ್ಲಾಡಳಿತವೇ ನೇರವಾಗಿ ತರಕಾರಿಗಳನ್ನು ತಂದು ಆಯಾ ಮಾರುಕಟ್ಟೆ ಪ್ರದೇಶದ ವರ್ತಕರಿಗೆ ನೀಡುವಂತೆ. ಇಲ್ಲವಾದರೆ ಹಿಂದಿನ ಪಾಸ್'ನಲ್ಲಿಯೇ ತರಕಾರಿಯನ್ನು ತರಲು ಅವಕಾಶ ನೀಡುವಂತೆ  ಮಾರುಕಟ್ಟೆ ಸಮಿತಿ ಮಾದ್ಯಮದ ಮೂಲಕ ಒತ್ತಾಯಿಸಿದೆ.

   ಸಣ್ಣ ಪ್ರಮಾಣದ ವಾಹದಲ್ಲಿ ದಿನಕ್ಕೆ‌ ಕನಿಷ್ಠ ಒಂದು ಬಾರಿ ಸರಕು ಸಾಗಾಣಿಕೆಗೆ ಅವಕಾಶ ನೀಡುವಂತೆ ಆಗ್ರಹಿಸುತ್ತಿದ್ದಾರೆ.