ಪೊನ್ನಂಪೇಟೆ (Times Of Coorg) : ಶ್ರೀ ರಾಮಕೃಷ್ಣ ಆಶ್ರಮ ಪೊನ್ನಂಪೇಟೆ ಇದರ ವತಿಯಿಂದ ಇಂದು (19.04 .2020) ಇಂದು ಎಂ ಜಿ ನಗರದ 200 ಬಡ ಕುಟುಂಬಗಳಿಗೆ ರಾಮಕೃಷ್ಣ ಮಠದ ಪೂಜ್ಯ ಸ್ವಾಮಿಜಿಗಳಾದ ಶ್ರೀ ಬೋದ ಸ್ವರೂಪಾನಂದ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಆಹಾರ ಕಿಟ್ ವಿತರಣೆ ಮಾಡಲಾಯಿತು
ಕೋರೋಣ ಮಹಾಮಾರಿಯಿಂದ ಲೋಕ್ ಡೌನ್ ಹಿನ್ನಲೆಯಲ್ಲಿ ಸಂಕಷ್ಟದಲ್ಲಿ ಇರುವ ಬಡ ಜನತಗೆ ಆಶ್ರಮದಿಂದ ನೀಡಿದ ಆಹಾರ ಪದಾರ್ಥಗಳು ಬಡ ಕುಟುಂಬಗಳಿಗೂ ಹಾಗೂ ಮಧ್ಯಮ ವರ್ಗದವರಿಗೂ ನೆರವಾಗಿದೆ ಎಂದು ಸಾರ್ವಜನಿಕರು ಅಭಿಪ್ರಾಯ ಪಟ್ಟಿದ್ದಾರೆ
ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೊಕಳೆರ ಸುಮಿತ ಸದಸ್ಯರುಗಳಾದ ಆಲೀರ ರಶೀದ್ ಮತ್ತು ಎಂಜಿ ನಗರ ನಿವಾಸಿಗಳಾದ ವಿಜು ಅವಿನಾಶ್ ಸಂದೀಪ್ ವಿನೋದ್ ಉಮೇಶ್ ಹಾಗೂ ದರ್ಶನ್ ಹಾಜರಿದ್ದರು.
No comments
Post a Comment