ಕುಶಾಲನಗರ (Times Of Coorg) : ಲಾಕ್ ಡೌನ್ ನಿಯಮ ಉಲ್ಲಂಘಿಸಿ ಜಿಲ್ಲೆಯಿಂದ ತಮಿಳುನಾಡು ರಾಜ್ಯಕ್ಕೆ 38 ಜನ ಕಾರ್ಮಿಕರನ್ನು ಕಂಟೈನರ್ ಲಾರಿಯೊಂದರಲ್ಲಿ ಸಾಗಿಸುತ್ತಿದ್ದುದನ್ನು ಕುಶಾಲನಗರ ಗಡಿಯ ಕೊಪ್ಪ ಚೆಕ್ ಪೋಸ್ಟ್ ನಲ್ಲಿ ಪತ್ತೆ ಹಚ್ಚಿದ ಕುಶಾಲನಗರ ಪೊಲೀಸರು ತಮಿಳುನಾಡು ಮೂಲದ ಲಾರಿ ಚಾಲಕ, ಲಾರಿ ಕ್ಲೀನರ್ ಹಾಗು ಕಂಟೈನರ್ ಲಾರಿಯನ್ನು ವಶಕ್ಕೆ ಪಡೆದು ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.
ದಿನಾಂಕ 22-4-2020 ರಂದು 02-00 ಗಂಟೆ ಸಮಯದಲ್ಲಿ ಕುಶಾಲನಗರ ಕಡೆಯಿಂದ ಮೈಸೂರು ಕಡೆಗೆ ಹೋಗುತ್ತಿದ್ದ ಕಂಟೈನರ್ ಲಾರಿಯೊಂದನ್ನು ಕೊಪ್ಪ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕುಶಾಲನಗರ ಪಟ್ಟಣ ಪೊಲೀಸ್ ಠಾಣೆ ಅಧಿಕಾರಿ ಮತ್ತು ಸಿಬ್ಬಂದಿಗಳು ತಡೆದು ಪರಿಶೀಲಿಸಿದ ಸಂದರ್ಭದಲ್ಲಿ ಕಂಟೈನರ್ ಲಾರಿಯಲ್ಲಿ 18 ಮಂದಿ ಗಂಡಸರು, 16 ಮಂದಿ ಹೆಂಗಸರು ಮತ್ತು 4 ಮಂದಿ ಮಕ್ಕಳು ಸೇರಿ ಒಟ್ಟು 38 ಜನರನ್ನು ತುಂಬಿಸಿಕೊಂಡು ತಮಿಳುನಾಡಿಗೆ ಪ್ರಯಾಣಿಸುತ್ತಿದ್ದುದು ಪತ್ತೆಯಾಗಿರುತ್ತದೆ.
ಸದರಿ ಕಾರ್ಮಿಕರನ್ನು ಸೋಮವಾರಪೇಟೆ ತಾಲೋಕಿನ ಎಡವಾರೆ ಗ್ರಾಮದ ತಂಗವಳ್ಳಿ ಎಸ್ಟೇಟ್ ನಿಂದ ಮೇನೇಜರ್ ಯು.ಬಿ. ಸುರೇಶರವರ ಅನುಮತಿಯ ಮೇರೆ ತಮಿಳುನಾಡು ನೋಂದಣಿಯ ಕಂಟೈನರ್ನಲ್ಲಿ ತುಂಬಿಕೊಂಡು ಕುಶಾಲನಗರ-ಮೈಸೂರು ಮಾರ್ಗವಾಗಿ ತಮಿಳುನಾಡಿಗೆ ಹೋಗುತ್ತಿರುವುದು ತಿಳಿದು ಬಂದಿದ್ದು, ಲಾಕ್ಡೌನ್ ಜಾರಿಯಲ್ಲಿದ್ದ ಸಂದರ್ಭದಲ್ಲಿ ಲಾಕ್ಡೌನ್ ನಿಯಮಗಳನ್ನು ಉಲ್ಲಂಘಿಸಿ ಕಾರ್ಮಿಕರನ್ನು ಜಿಲ್ಲೆಯಿಂದ ತಮಿಳುನಾಡಿಗೆ ಸಾಗಿಸುತ್ತಿದ್ದ ಲಾರಿ ಚಾಲಕ ತಮಿಳುನಾಡಿನ ಮೂಲದ ಹುಸೈನ್ ಹಾಗು ಲಾರಿ ಕ್ಲೀನರ್ ಪಿ.ಬಾಲಚಂದ್ರ ಎಂಬವರ ಮೇಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
No comments
Post a Comment