ಹಣ ಪಡೆದು ವಾಹನ ಸಂಚಾರಕ್ಕೆ ಅವಕಾಶ ಕೊಟ್ಟ ಪೊಲೀಸ್​ ಅಧಿಕಾರಿಗಳು ಅಮಾನತು

No comments
ಮಡಿಕೇರಿ (Times Of Coorg) : ಕೇರಳ -ಕೊಡಗು ಗಡಿಭಾಗದ ಚೆಕ್​ಪೋಸ್ಟ್​ನಲ್ಲಿ ವಾಹನ ಸಂಚಾರ ನಿರ್ಬಂಧಿಸಿದ್ರೂ, ಹಣ ಪಡದು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ವಿರಾಜಪೇಟೆಯ ಮೂವರು ಪೊಲೀಸ್​ ಸಿಬ್ಬಂದಿ ವಾಹನ ಚಾಲಕರ ಬಳಿ ಹಣ ಪಡೆಯುತ್ತಿದ್ದ ವೀಡಿಯೋ ವೈರಲ್​ ಆಗಿತ್ತು.

ಇದೀಗ ಆ ಮೂವರು ಸಿಬ್ಬಂದಿಯನ್ನ ಅಮಾನತು ಮಾಡಿ ಎಸ್​ಪಿ ಡಿ.ಪಿ ಸುಮನ್​ ಆದೇಶ ಹೊರಡಿಸಿದ್ದಾರೆ. ಮಾರ್ಚ್​​ 25ರಂದು ಘಟನೆ ನಡೆದಿದ್ದು, ವೀಡಿಯೋ ವೈರಲ್​ ಆಗಿತ್ತು. ಮೂವರಲ್ಲಿ ಒಬ್ಬರು ಎಎಸ್​ಐ ಸೇರಿದಂತೆ ಇಬ್ಬರು ಸಿಬ್ಬಂದಿಯನ್ನ ಅಮಾನತು ಮಾಡಲಾಗಿದೆ.

No comments

Post a Comment