ಪಡಿತರ ವಿತರಣೆ

No comments

       ಮಡಿಕೇರಿ  ಟೈಮ್ಸ್ ಆಫ್ ಕೂರ್ಗ್:-ಕೋವಿಡ್-19 ರ ಸಂಬಂಧ ಮುಂಜಾಗ್ರತಾ ಕ್ರಮವಾಗಿ ದೇಶಾದ್ಯಂತ ಲಾಕ್‍ಡೌನ್ ಆಗಿದ್ದು, ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಎ.ಎ.ವೈ ಮತ್ತು ಬಿ.ಪಿ.ಎಲ್ ಪಡಿತರ ಚೀಟಿಯನ್ನು ಹೊಂದಿರುವ  ಒಟ್ಟು 1,09,407 ಕುಟುಂಬಗಳ 3,37,658 ಫಲಾನುಭವಿಗಳಿಗೆ ಮತ್ತು ಜಿಲ್ಲೆಯಲ್ಲಿರುವ ರಾಜ್ಯದ ಇತರೆ ಜಿಲ್ಲೆಗಳ ಪಡಿತರ ಚೀಟಿದಾರರಿಗೆ ಮುಂಗಡವಾಗಿ ಏಪ್ರಿಲ್ ಮತ್ತು ಮೇ ಎರಡು ತಿಂಗಳ ಪಡಿತರವನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವತಿಯಿಂದ ನ್ಯಾಯಬೆಲೆ ಅಂಗಡಿಗಳ ಮೂಲಕ ಪೂರೈಸಲಾಗುತ್ತಿದೆ. ಪಡಿತರ ಚೀಟಿದಾರರು ಇದರ ಸದುಪಯೋಗ ಪಡೆದುಕೊಳ್ಳಲು ಜಿಲ್ಲಾಡಳಿತ ಕೋರಿದೆ.

No comments

Post a Comment