ಕೊಡಗು: ಎತ್ತು ಮಾರಾಟಕ್ಕೆ ತೆರಳಿದ ವ್ಯಕ್ತಿಯ ಮೃತದೇಹ 5 ನೆ ದಿನ ಪತ್ತೆ.

No comments
ಸಂಶಯಾಸ್ಪದ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆಗೆ ವಿವಿಧ ಸಂಘಟನೆಗಳ ಒತ್ತಾಯ

ವಿರಾಜಪೇಟೆ (Times Of Coorg): ಎತ್ತು ಖರೀದಿಗೆಂದು ಮನೆಯಿಂದ ತೆರಳಿದ ವ್ಯಕ್ತಿಯ ಮೃತದೇಹ 5 ನೆ ಪತ್ತೆಯಾಗಿದೆ.

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಗುಂಡಿಕೆರೆ ನಿವಾಸಿ ಎಂ.ಎಂ. ಮೂಸಾ (65) ಎಂಬವರು ವ್ಯವಸಾಯಗಾರರಾಗಿದ್ದು ಎಪ್ರಿಲ್ ‌7 ರಂದು ತನ್ನ ಮನೆಯಿಂದ ಎತ್ತು ಖರೀದಿಗೆಂದು ಬಿಟ್ಟಂಗಾಲ ಗ್ರಾಮಕ್ಕೆ ತೆರಳಿದ್ದರು. ಸಂಜೆಯಾದರೂ ಮನೆಗೆ ಹಿಂತಿರುಗಿ ಬಾರದೆ ಇದ್ದಾಗ ಕುಟುಂಬಸ್ಥರ ಹುಡುಕಾಟದ ನಂತರ ಮೂಸಾ ಮನೆಯವರು ವಿರಾಜಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಎಪ್ರಿಲ್ 10 ರಂದು ಮೂಸಾ ಅವರ ಗ್ರಾಮದ ಯುವಕರು ಪೊಲೀಸರ ಅನುಮತಿಯೊಂದಿಗೆ ಮೂಸಾ ಅವರ ಹುಡುಕಾಟಕ್ಕಾಗಿ ಬಿಟ್ಟಂಗಾಲದ ಬಾಳುಗೋಡಿಗೆ ತೆರಳಿದ ಸಂದರ್ಭ ಯುವಕರ ಮೇಲೆ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಹಾಗೂ ಈ ವಿಚಾರ ತಿಳಿದು ಸ್ಥಳಕ್ಕೆ ತೆರಳಿದ ಬೇಟೋಳಿ‌ ಗ್ರಾಮ ಪಂಚಾಯತಿ ಸದಸ್ಯ ಫಾರೂಕ್ ಅವರ ಮೇಲೂ ಇದೇ ಗುಂಪು ಹಲ್ಲೆ ನಡೆಸಿದ್ದರು. ಬಳಿಕ ಫಾರೂಕ್ ಅವರನ್ನು ವಿರಾಜಪೇಟೆ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಬಿಟ್ಟಂಗಾಲ ಸಮೀಪದಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದ ಮೂಸಾ ಅವರ ಮೃತದೇಹ‌ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ವಿರಾಜಪೇಟೆ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

ತನಿಖೆಗೆ ಇತ್ತಾಯ: ಮೂಸಾ ಅವರನ್ನು ಹುಡುಕಲು ಪೊಲೀಸರ ಅನುಮತಿಯೊಂದಿಗೆ ತೆರಳಿದವರ ಮೇಲೆ ಹಾಗೂ ಬೇಟೋಳಿ ಗ್ರಾಮ ಪಂಚಾಯತಿ ಸದಸ್ಯ ಫಾರೂಕ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವವರನ್ನು ಕೂಡಲೇ ಪತ್ತೆ ಹಚ್ಚಿ ಬಂಧಿಸಬೇಕೆಂದು ವಿವಿಧ ಸಂಘಟನೆಗಳು ಒತ್ತಾಯಿಸಿದೆ. ದೈಹಿಕ ಹಲ್ಲೆ ಮಾಡಿರುವವರ ಮೇಲೆ ಕಟ್ಟುನಿಟ್ಟಿನ ಕಾನೂನು ಕ್ರಮಕೈಗೊಳ್ಳಬೇಕು. ಇದಕ್ಕೆ ಪೂರಕ ಎಂಬಂತೆ ಸಮಾಜಿಕ ಜಾಲತಾಣಗಳಲ್ಲಿ ಸಂಘಪರಿವಾರದವರು ಪ್ರಚೋದನಕಾರಿ ಸಂದೇಶವನ್ನು ಹರಿಯಬಿಡುತ್ತಿದೆ. ಇದೀಗ ಎಪ್ರಿಲ್ 11 ರಂದು ಮೂಸಾ ಅವರ ಮೃತದೇಹ‌ ಬಿಟ್ಟಂಗಾಲದಲ್ಲಿ ಪತ್ತೆಯಾಗಿದೆ. ಈ ಘಟನೆಯ ಬಗ್ಗೆ ಪೊಲೀಸರು ಯಾವುದೇ ಒತ್ತಡಕ್ಕೆ ಮಣಿಯದೆ ಸತ್ಯಾಸತ್ಯತೆಯನ್ನು ಬಯಲಿಗೆಳೆಯಬೇಕು.  ಜಿಲ್ಲೆಯಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸಲು ಪ್ರಯತ್ನಿಸುತ್ತಿರುವವರ ಮೇಲೆ ಇಲಾಖೆ ಕ್ರಮ ಕೈಗೊಳ್ಳಬೇಕು. ಮೂಸಾ ಅವರ ಸಂಶಯಾಸ್ಪದ ಸಾವಿನ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಬೇಕೆಂದು ಪಿ.ಎಫ್.ಐ ಕೊಡಗು ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್, ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷ ಟಿ.ಹೆಚ್. ಅಬೂಬಕ್ಕರ್ ಒತ್ತಾಯಿಸಿದ್ದಾರೆ.

No comments

Post a Comment