ಕೊಡ್ಲಿಪೇಟೆ : ಕೊವಿಡ್ -19 ಕುರಿತು ಜನ ಜಾಗ್ರತಿ ಮತ್ತು ಮಾಸ್ಕ್ ವಿತರಣೆ

No comments
ವರದಿ : ಹನೀಫ್ ಕೊಡ್ಲಿಪೇಟೆ
ಕೊಡ್ಲಿಪೇಟೆ (Times Of Coorg) : ಕೊಡ್ಲಿಪೇಟೆ ವಿದ್ಯಾಸಂಸ್ಥೆ ಹಾಗೂ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ನೋವೆಲ್ ಕೊರೋನಾ ವ್ಯೆರಸ್ ಕುರಿತು ಕರಪತ್ರ ವಿತರಣೆ & ದ್ವನಿ ವರ್ದಕದ ಮೂಲಕ ಕೊರೋನಾ ಗೀತೆಯನ್ನು ಹಾಡುವ ಮೂಲಕ  ಜನ ಜಾಗ್ರತಿ ಹಾಗೂ ವಿದ್ಯಾಸಂಸ್ಥೆಯ ಅದ್ಯಕ್ಷರು ಹಿರಿಯ ವಕೀಲರಾದ ಹೆಚ್.ಎಸ್. ಚಂದ್ರಮೌಳಿರವರು ನೀಡಿರುವ ಮಾಸ್ಕ್ ಗಳನ್ನು  ವಿದ್ಯಾಸಂಸ್ಥೆ ಯಿಂದ ಆರಂಬಿಸಿ ಹ್ಯಾಂಡ್ ಪೋಸ್ಟ್ ಜಂಕ್ಷನ್  ಮೂಲಕ ದೊಡ್ಡಾಕುಂದ 
ಕೆರಗನಹಳ್ಳಿ .ಕಡೇಪೇಟೆ .ಕೊಡ್ಲಿಪೇಟೆ ಯ ಮುಖ್ಯಬೀದಿಗಳಲ್ಲಿ ಸಾಗಿ ಬಸ್ ನಿಲ್ದಾಣ ದಲ್ಲಿ ಸಾರ್ವಜನಿಕ ರಿಗೆ ವಿತರಿಸಿ ಜಾಗ್ರತಿ ಮೂಡಿಸಲಾಯಿತು. ಸಾಮಾಜಿಕ ಅಂತರವನ್ನು ಕಾಪಾಡುವಂತೆ ಪತ್ಯೆಕವಾಗಿ ತಿಳಿಸಲಾಯಿತು.

ಈ ಸಂದರ್ಭದಲ್ಲಿ ವಿದ್ಯಾಸಂಸ್ಥೆಯ ಗೌರವಾದ್ಯಕ್ಷರಾದ ಎಸ್.ಎಸ್.ನಾಗರಾಜ್, ಉಪಾಧ್ಯಕ್ಷರಾದ ಶಂಬುಲಿಂಗಪ್ಪ, ಖಜಾಂಜಿ ಡಾ.ಉದಯ್ ಕುಮಾರ್, ಕಾರ್ಯದರ್ಶಿ ಪರಮೇಶ್ , ನಿರ್ದೆಶಕರಾದ ಯತೀಶ್ .ಬಿ.ಕೆ, ಕೊಡ್ಲಿಪೇಟೆ ಹೊಬಳಿ ಉಪ ತಹಶಿಲ್ದಾರ್ ಪುರುಶೊತ್ತಮ್ , ಪೊಲೀಸ್ ಉಪಠಾಣೆ ಆರಕ್ಷಕ ನಿರೀಕ್ಷಕರಾದ ಶ್ರಿನಿವಾಸ್, ಹೆಡ್ ಕಾನ್ಸಟೇಬಲ್ ಡಿಂಪಲ್ , ಪದವಿ ಕಾಲೇಜಿನ  ಪ್ರಾಂಶುಪಾಲರಾದ ನಿರಂಜನ್. ಪದವಿಪೂರ್ವ ಕಾಲೇಜಿನ 
ಜಗದೀಶ್ ಬಾಬು, ಪ್ರೌಢಶಾಲಾ ಮುಖ್ಯೊಪದ್ಯಯರಾದ ಅಬ್ದುಲ್ ರಬ್ಬ್, ಶಿಕ್ಷಕರಾದ
ಆಭಿಲಾಷ್, ಯು‌.ಡಿ.ಮಂಜುನಾಥ್, ಸಿಬ್ಬಂದಿ ಗಳಾದ
ಶಾಂತಕುಮಾರ್, ಮಂಜೆಗೌಡ ಪ್ರಮುಖರಾದ ಹನೀಪ್ ಬ್ಯಾಡಗೊಟ್ಟ ಹಾಜರಿದ್ದರು.



No comments

Post a Comment