ಕುಶಾಲನಗರದಲ್ಲಿ ಕರೂನಾ ವೈರಸ್ ಪತ್ತೆ ಎಂದು ಸುಳ್ಳು ಸುದ್ದಿ , ಆತಂಕದಿಂದ ದೂರವಿರಲು ಆರೋಗ್ಯ ಇಲಾಖೆ ಮನವಿ

No comments
ಕುಶಾಲನಗರ 𝐓𝐎𝐂:- ಕುಶಾಲನಗರದ ರಸೂಲ್ ಬಡಾವಣೆಯಲ್ಲಿ ವ್ಯಕ್ತಿಯೊಬ್ಬರಿಗೆ ಕರೂನಾ ವೈರಸ್ ಪತ್ತೆಯಾಗಿದೆ ಎಂದು ಯಾರೋ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಇನ್ನಿತರ ಕಡೆಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ನಗರದ ಜನತೆಯಲ್ಲಿ ಆತಂಕ ಮೂಡಿಸಿರುವುದುರ ಜೊತೆಗೆ ಆರೋಗ್ಯ ಇಲಾಖೆಗೆ ಮುಜುಗರವಾಗುವಂತೆ ಮಾಡಿರುವುದು ಕಂಡುಬಂದಿದ್ದು ಆರೋಗ್ಯ ಇಲಾಖೆಯ ಹಿರಿಯ ವೈದ್ಯಾಧಿಕಾರಿಗಳು ಇಂತಹಾ ಕಿಡಿಗೇಡಿಗಳ ಸುಳ್ಳುಸುದ್ದಿ ಗೆ ಯಾರು ಕೂಡ ಕಿವಿಗೊಡಬಾರದು ಮತ್ತು ಹೆದರಬಾರದು ಎಂದು ಸುಳ್ಳು ಸುದ್ದಿ ಹಬ್ಬಿಸಿದವರ ಮೇಲೆ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮಾಧ್ಯಮದ ಮೂಲಕ ಸಾರ್ವಜನಿಕರಿಗೆ ತಿಳಿಸಿದ್ದಾರೆ. ಸುಖಾಸುಮ್ಮನೆ ಇಂತಹ ಅಪಪ್ರಚಾರದಿಂದ ನೆಮ್ಮದಿಯ ಆರೋಗ್ಯಕರ ಜೀವನ ಸಾಗಿಸುತ್ತಿರುವ ಜನತೆಯಲ್ಲಿ ಆತಂಕ ಮೂಡಿಸುವುದು ಸರಿಯಲ್ಲ. ಪ್ರಜ್ಞಾವಂತ ನಾಗರಿಕರು ಇಂತಹ ಸುಳ್ಳು ಸುದ್ದಿಗೆ ಕಿವಿಗೊಡದಂತೆ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮನವಿ ಮಾಡಿದ್ದಾರೆ.

No comments

Post a Comment