ಪೊನ್ನಂಪೇಟೆ TOC:- ಕಳೆದ ಫೆ.14 ರಂದು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರಗಾಮಿಗಳಿಂದ ಹತರಾದ 42 ವೀರ ಸೈನಿಕರಿಗೆ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಪಕ್ಷದ ವತಿಯಿಂದ ನುಡಿನಮನ ಸಲ್ಲಿಸಲಾಯಿತು.
ಗೋಣಿಕೊಪ್ಪಲುವಿನ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಮೀದೇರಿರ ನವೀನ್ ನವರ ಅಧ್ಯಕ್ಷತೆಯಲ್ಲಿ ನಡೆದ ನುಡಿನಮನ ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ ವೀರ ಸೇನಾನಿ ಗಳ ಬಗ್ಗೆ ಮಾತನಾಡಿದರು.
ಒಂದು ನಿಮಿಷ ಮೌನಾಚರಣೆ ನಡೆಸಿದರು. ಬಲಿದಾನವನ್ನು ಸ್ಮರಿಸಿದರು.
ಈ ಸಂದರ್ಭ ಕೆ.ಪಿ.ಸಿ.ಸಿ.ಮಾಜಿ ಕಾರ್ಯದರ್ಶಿ ಶಾಯಿದ್,ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಉಸ್ಮಾನ್, ಕೊಡಗು ಡಿಸಿಸಿ ಕಾರ್ಯದರ್ಶಿ ಅಬ್ದುಲ್ ರೆಹಮಾನ್ ಬಾಪು,ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ರಶೀದ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಬಾಲಕೃಷ್ಣ,ಪಕ್ಷದ ಮುಖಂಡರಾದ ಅಬ್ದುಲ್ ಜಲೀಲ್,ಅಂಕಿತ್ ಪೊನ್ನಪ್ಪ, ಪ್ರಮೋದ್ ಗಣಪತಿ, ಅಜಿತ್ ಅಯ್ಯಪ್ಪ,ಆಪಟೀರ ಟಾಟು ಮೊಣ್ಣಪ್ಪ,ಎ.ಜೆ.ಬಾಬು,ಗ್ರಾಮ ಪಂಚಾಯಿತಿ ಸದಸ್ಯರಾದ ಯಾಶ್ಮಿನ್,ನಜೀರ್, ಶಾಯೀನ್,ಸುಲೈಕಾ ರಾಜಶೇಖರ, ಪಕ್ಷದ
ಕಾರ್ಯಕರ್ತರಾದ ಕರ್ಣರಾಜ್,ತಂಬಿ,ಶಾಜೀರ್,ಆಲೀರ ರಶೀದ್, ಮತ್ತಿತರರು ಸಭೆಯಲ್ಲಿ ಹಾಜರಿದ್ದರು.
No comments
Post a Comment