ಚೆಟ್ಟಳ್ಳಿಯಲ್ಲಿ ಅರಣ್ಯಾಧಿಕಾರಿ ರಂಜನ್‍ಮೇಲೆ ಚಿರತೆದಾಳಿ : ಕಾರ್ಯಚರಣೆಗೂ ಸಿಗದ ಚಿರತೆ 

No comments


ಚೆಟ್ಟಳ್ಳಿ: ಖಾಸಗಿ ತೋಟವೊಂದರಲ್ಲಿ ಉರಳಿಗೆa ಸಲುಕಿದ ಚಿರತೆಯನ್ನು ಬಿಡಿಸಲು ಮುಂದಾದಾಗ ಕುಶಾಲನಗರ ವಲಯ ಆನೆಕಾಡು ಉಪವಲಯ ಅರಣ್ಯಾಧಿಕಾರಿ ಕನ್ನಂಡರಂಜನ್ ಮೇಲೇರಗಿ ಕಚ್ಚಿಗಾಯಗೊಳಿಸಿ ಅಪಾಯದಿಂದ ಪಾರಾದಘಟನೆ ಚೆಟ್ಟಳ್ಳಿ ವ್ಯಾಪ್ತಿಯಲ್ಲಿ ನಡೆದಿದೆ. ಚೆಟ್ಟಳ್ಳಿ ಸಮೀಪದ ಶುಂಠಿಕೊಪ್ಪ ರಸ್ತೆ ಹಾದುಹೋಗುವ ರಸ್ತೆಯ ಬದಿಯ ಖಾಸಗೀ ತೋಟವೊಂದರಲ್ಲಿ ಉರುಳಿಗೆ ಸಿಲುಕಿಕೊಂಡ ಚಿರತೆಯನ್ನು ಕಂಡ ತೋಟದ ಮಾಲೀಕರು ಉಪವಲಯ ಅರಣ್ಯಾಧಿಕಾರಿ ಕನ್ನಂಡರಂಜನ್ ಗೆ ಮಾಹಿತಿ ನೀಡಿzರು. ಅರಣ್ಯಾಧಿಕಾರಿಗಳು ಹಾಗು ಸಿಬ್ಬಂದಿಗಳೊಂದಿಗೆ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಉರುಳಲ್ಲಿ ಸಿಲಿಕಿರುವ ಚಿರತೆಯನ್ನು ಬಿಡಿಸಲು ಮುಂದಾಗುತಿದ್ದಂತೆ ಉರಳಿನೊಂದಿಗೆ ಅರಣ್ಯ ಅಧಿಕಾರಿ,ಸಿಬ್ಬಂದಿಗಳ ಹಾಗು ಸುತ್ತಲಿನ ತೋಟದ ಮಾಲಿಕ ಮೇಲೆರಗಿತು. ಎಲ್ಲರು ಗಾಬರಿಯಿಂದ ಓಡುತಿದ್ದಂತೆ ಅರಣ್ಯ ಅಧಿಕಾರಿ ರಂಜನ್ ಕಾಲುಜಾರಿ ಬೀಳುತಿದ್ದಂತೆ ಉರುಳನ್ನು ತುಂಡರಿಸಿ ಮೇರೆಗಿ ಕಾಲಇನ ಭಾಗ ಹಾಗು ಕೈಯನ್ನು ಕಚ್ಚಿದ ರಭಸಕ್ಕೆ ರಂಜನ್ ಚಿರತೆಯನ್ನು ತಳ್ಳಿದರು. 


ಗಾಳಗೆ ಬಲವಾದ ಗಾಯವಾದರಿಂದ ಸಮೀಪದ ಚೆಟ್ಟಳ್ಳಿ ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ಉಪವಲಯ ಅರಣ್ಯಾಧಿಕಾರಿ ವಿಲಾಸ್ ಹಾಗು ತೋಟದ ಮಾಲಿಕರು ಕರೆತಂದರು. ವೈಧ್ಯಾಧಿಕಾರಿಗಳಾದ ಡಾ.ಯಶೋಧಾ ಕಾಲಿಗೆ ನಾಲಕ್ಕು ಹೊಲಿಗೆ ಹೊಲಿಗೆ ಹಾಕಲಾಗಿ ಪ್ರಥಮ ಚಿಕ್ಸಿತೆ ನೀಡಿರುÀವ ಬಗ್ಗೆ ತಿಳಿದ್ದಾರೆ. ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತ ಮಂಜುನಾಥ್ ಚೆಟ್ಟಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷೆ ವತ್ಸಲಾರವರು ಆಸ್ಪತ್ರೆಗೆ ಆಗಮಿಸಿ ರಂಜನ್ ರವರ ಯೋಗಕ್ಷೇಮ ವಿಚಾರಿಸಿದರು. ವಲಯಾರಣ್ಯಾಧಿಕಾರಿ ಅರುಣ್ ಸಹಕಾರದೊಂದಿಗೆ ಮೈಸೂರಿನ ಕೊಲಂಬಿಯಏಷ್ಯಾ ಆಸ್ಪತ್ರೆಯಲ್ಲಿ ಹೆಚ್ಚಿನಚಿಕ್ಸಿತೆ ಪಡೆಯುತಿದ್ದಾರೆ. ಅರಣ್ಯ ಮೇಲಧಿಕಾರಿಗಳಾ ಆರೆಫ್‍ಓ ಅನನ್ಯಕುಮಾರ್ ಎಸಿಎಫ್ ನೆಹರು ವೈಧ್ಯಾಧಿಕಾರಿ ಡಾ.ಮುಜೀಬ್ ಹಾಗು ಅರಣ್ಯ ಸಿಬ್ಬಂದಿಗಳು ಘಟನಾ ಸ್ಥಳವಾದ ಕಾಫಿತೋಟದಲ್ಲಿ ಉರುಳಲಿ ಸಿಲುಕಿದ್ದ ಚಿರತೆಯನ್ನು ಬಂಧಿಸಲು ಇಲ್ಲವೆ ಕಾಡಿಗಟ್ಟಲು ಕಾರ್ಯಾಚರಣೆನಡೆಸಿದರು ಚಿರತೆಯ ಸುಳಿವು ಸಿಗದೆ ಹಿಂದಿರುಗಿದರು.

No comments

Post a Comment