ಮಡಿಕೇರಿ ಆ.28(ಕರ್ನಾಟಕ ವಾರ್ತೆ):-ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಪ್ರತಿಷ್ಟಿತ ಪರ್ವತಾರೋಹಣ ಶಾಲೆಯಲ್ಲಿ ಬೇಸಿಕ್ ಪರ್ವತಾರೋಹಣ ವಿಶೇಷ ತರಬೇತಿ ಶಿಬಿರವು ರಾಜ್ಯದ ಪರಿಶಿಷ್ಟ ಪಂಗಡ, ಪರಿಶಿಷ್ಟ ವರ್ಗದ ಸದೃಢ 18 ರಿಂದ 35 ವರ್ಷ ಒಳಪಟ್ಟ ಯುವಕ, ಯುವತಿಯರಿಗೆ ಹಿಮಾಲಯ ತಪ್ಪಲಿನಲ್ಲಿ ಏರ್ಪಡಿಸಲಾಗುವುದು. ಈ ತರಬೇತಿ ಶಿಬಿರದಲ್ಲಿ ಭಾಗವಹಿಸಲು ದೈಹಿಕ ಪರೀಕ್ಷೆಯು ಸೆಪ್ಟೆಂಬರ್ 3 ರಂದು ಬೆಳಗ್ಗೆ 7 ಗಂಟೆಗೆ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 080-22210454, 9448038220 ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಜಯಲಕ್ಷ್ಮಿ ಬಾಯಿ ಅವರು ತಿಳಿಸಿದ್ದಾರೆ.
ಸೆ.3 ರಂದು ವಿಶೇಷ ತರಬೇತಿ ಶಿಬಿರದಲ್ಲಿ ಭಾಗವಹಿಸಲು ದೈಹಿಕ ಪರೀಕ್ಷೆ
ಮಡಿಕೇರಿ ಆ.28(ಕರ್ನಾಟಕ ವಾರ್ತೆ):-ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಪ್ರತಿಷ್ಟಿತ ಪರ್ವತಾರೋಹಣ ಶಾಲೆಯಲ್ಲಿ ಬೇಸಿಕ್ ಪರ್ವತಾರೋಹಣ ವಿಶೇಷ ತರಬೇತಿ ಶಿಬಿರವು ರಾಜ್ಯದ ಪರಿಶಿಷ್ಟ ಪಂಗಡ, ಪರಿಶಿಷ್ಟ ವರ್ಗದ ಸದೃಢ 18 ರಿಂದ 35 ವರ್ಷ ಒಳಪಟ್ಟ ಯುವಕ, ಯುವತಿಯರಿಗೆ ಹಿಮಾಲಯ ತಪ್ಪಲಿನಲ್ಲಿ ಏರ್ಪಡಿಸಲಾಗುವುದು. ಈ ತರಬೇತಿ ಶಿಬಿರದಲ್ಲಿ ಭಾಗವಹಿಸಲು ದೈಹಿಕ ಪರೀಕ್ಷೆಯು ಸೆಪ್ಟೆಂಬರ್ 3 ರಂದು ಬೆಳಗ್ಗೆ 7 ಗಂಟೆಗೆ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 080-22210454, 9448038220 ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಜಯಲಕ್ಷ್ಮಿ ಬಾಯಿ ಅವರು ತಿಳಿಸಿದ್ದಾರೆ.

No comments
Post a Comment