ಜನಜಾಗೃತಿ ಸಭೆಯ ನೆಪದಲ್ಲಿ ಕೊಡಗಿನಲ್ಲಿ ಕೋಮು ಗಲಭೆ ಸೃಷ್ಟಿಸಲು ಯತ್ನಿಸುತ್ತಿರುವ ಹಿಂದು ಜಾಗರಣ ವೇದಿಕೆ : ಕಾರ್ಯಕ್ರಮಕ್ಕೆ ಅನುಮತಿ ನೀಡದಂತೆ ಪಿಎಫ್ಐ ಆಗ್ರಹ

No comments

ಮಡಿಕೇರಿ,October 7:- ಹಿಂದೂ ಜಾಗರಣ ವೇದಿಕೆ ಸಂಘಟನೆ ವತಿಯಿಂದ ನಾಳೆ ಹಮ್ಮಿಕೊಂಡಿರುವ ಜನಜಾಗೃತಿ ಸಭೆ ಎಂಬ ಕಾರ್ಯಕ್ರಮವು ಜಿಲ್ಲೆಯಲ್ಲಿ ಸಂಘಪರಿವಾರವು ಕೋಮು ಗಲಭೆ ನಡೆಸಲು ಯತ್ನಿಸುತ್ತಿರುವುದರ ಷಡ್ಯಂತರದ ಭಾಗವಾಗಿದೆ.ಹಾಗಾಗಿ ಈ ಕಾರ್ಯಕ್ರಮಕ್ಕೆ ಅನುಮತಿ ನೀಡಿ ಸಮಾಜದ ಶಾಂತಿ ಕದಡಲು ಅವಕಾಶ ಮಾಡಿ ಕೊಡಬಾರದೆಂದು ಪಾಪ್ಯುಲರ್ ಫ್ರಂಟ್ ಕೊಡಗು ಜಿಲ್ಲಾಧ್ಯಕ್ಷರಾದ ಶೌಕತ್ ಅಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಳೆದ ಹಲವಾರು ಸಮಯಗಳಿಂದ ಜಿಲ್ಲೆಯಲ್ಲಿ ಒಂದಿಲ್ಲೊಂದು ವಿಚಾರದಲ್ಲಿ ಸಂಘಪರಿವಾರ ಗಲಭೆ ನಡೆಸಲು ಪ್ರಯತ್ನಿಸುತ್ತಲೇ ಇದೆ.

ಐದು ದಿನಗಳ ಹಿಂದೆ ಮಾದಾಪುರ ಸಮೀಪದ  ಗರಗಂದೂರಿನಲ್ಲಿ ಸಂಘಪರಿವಾರ ನಡೆಸಿದ ಗಲಭೆಯು ಮಾಸುವ ಮುನ್ನವೇ ಇದೀಗ ಮತ್ತೊಮ್ಮೆ ಹಿಂದೂ ಜಾಗರಣ ವೇದಿಕೆಯಿಂದ ಮಾದಾಪುರದಲ್ಲಿ ಜನಜಾಗೃತಿ ಸಭೆ ಅನ್ನುವ ಹೆಸರಿನಲ್ಲಿ ಮತ್ತೊಮ್ಮೆ ಗಲಭೆಯ ಸಂಚನ್ನು ನಡೆಸಲು ಮುಂದಾಗಿದ್ದಾರೆ.

ಇಂತಹ ಜನಜಾಗೃತಿ ಸಭೆ ಈ ಹಿಂದೆ ಕೊಡಗಿನ ಮಡಿಕೇರಿ, ಸಿದ್ದಾಪುರ ಮತ್ತು ಗೋಣಿಕೊಪ್ಪ ಭಾಗದಲ್ಲಿ ನಡೆಸಿ ಜನರ ಭಾವನೆಯನ್ನ ಕೆರಳಿಸುವ ಭಾಷಣವನ್ನು ಮಾಡಿ ಸಭೆ ಮುಗಿಸಿ ಹಿಂತಿರುಗಿ ಹೋಗುವ ವೇಳೆ ಗಲಾಟೆಯಾದ ಅದೆಷ್ಟೋ ಚರಿತ್ರೆ ಕೊಡಗಿನ ಇತಿಹಾಸದಲ್ಲಿದೆ.

ಆದ್ದರಿಂದ ಸಂಘಪರಿವಾರದ ಗೂಂಡಾಗಳಿಂದ ಈಗಾಗಲೇ ರೋಸಿ ಹೋಗಿರುವ ಮಾದಾಪುರ ವ್ಯಾಪ್ತಿಯ ಜನರಲ್ಲಿ ನಾಳೆ ನಡೆಯುವ ಜನಜಾಗೃತಿ ಸಭೆಯಿಂದ ಒಂದು ರೀತಿಯ ಭಯದ ಸನ್ನಿವೇಶ ನಿರ್ಮಾಣವಾಗಿರುತ್ತದೆ. ಕಳೆದ ಕೆಲವು ವರ್ಷಗಳಿಂದ ನಿರಂತರ ಅನೈತಿಕ ಪೊಲೀಸ್ ಗಿರಿಯನ್ನ ಮಾಡುತ್ತಾ ಸಮಾಜದ ಸ್ವಾಸ್ಥ್ಯಕೆಡಿಸುವ ಇಂತಹ ಶಕ್ತಿಗಳ ಬಗ್ಗೆ ಪೊಲೀಸ್ ಇಲಾಖೆ  ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಇವರ ಈ ರೀತಿಯ ಸಭೆ ಸಮಾವೇಶಗಳಿಗೆ ಪೊಲೀಸ್ ಇಲಾಖೆಯಿಂದ  ಅನುಮತಿ ನೀಡಬಾರದು ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕೊಡಗು ಜಿಲ್ಲಾಧ್ಯಕ್ಷರಾದ ಶೌಕತ್ ಅಲಿ ಆಗ್ರಹಿಸಿದ್ದಾರೆ.

ಹಾಗೂ ಒಂದು ವೇಳೆ ಅನುಮತಿ ನೀಡಿ  ಏನಾದರೂ ಅಹಿತಕರ ಘಟನೆ ನಡೆದರೆ ಮುಂದಾಗುವ ಎಲ್ಲಾ ಅನಾಹುತಗಳಿಗೂ ಪೊಲೀಸ್ ಇಲಾಖೆ ಹಾಗು ಜಿಲ್ಲಾಡಳಿತವೇ ನೇರ ಹೊಣೆಯಾಗಿರಲಿದೆ ಎಂದು ಶೌಕತ್ ಅಲಿ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.


No comments

Post a Comment