ವರದಿ :ಝಕರಿಯ ನಾಪೋಕ್ಲು
ನಾಪೋಕ್ಲು (web@timesofcoorg): ನಾಪೋಕ್ಲು ವಿನಿಂದ ಎಮ್ಮೆಮಾಡು ಗ್ರಾಮ ಪಂಚಾಯಿತಿಗೆ ಒಳಪಡುವ ಕೂರುಳಿ ಪರಂಬು ಗ್ರಾಮಕ್ಕೆ ಹೋಗುವ ರಸ್ತೆಯು ತೀರಾ ಹದಗೆಟ್ಟು ರಸ್ತೆ ಮಧ್ಯದಲ್ಲಿ ಕೆರೆಯಂತಹ ಗುಂಡಿಗಳು ಗೋಚರಿಸುತ್ತಿದ್ದು ಸಾರ್ವಜನಿಕರಿಗೆ ನಡೆಯಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಈ ಗ್ರಾಮಕ್ಕೆ ಯಾವುದೇ ವಾಹನಗಳು ಬರಲು ಹಿಂದೇಟು ಹಾಕುತ್ತಿದ್ದು ಇದರಿಂದ ಗ್ರಾಮಸ್ಥರು ಪರದಾಡುವಂತಾಗಿದೆ.
ಅಲ್ಲದೇ ತೀರಾ ಗುಂಡಿಬಿದ್ದ ಈ ರಸ್ತೆಯನ್ನು ದುರಸ್ತಿ ಪಡಿಸಲು ಮಳೆಗಾಲಕ್ಕೆ ಮುಂಚಿತವಾಗಿ ಸಂಬಂಧಿಸಿದವರಲ್ಲಿ ಮನವಿ ಮಾಡಿಕೊಂಡಿದ್ದರರೂ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ಇಂದು ಈ ರಸ್ತೆಯು ಗುಂಡಿಬಿದ್ದು ಕೆಸರು ನೀರಿನಿಂದ ಕೆರೆಯಂತ್ತಾಗಿದೆ ಎಂದು ಗ್ರಾಮಸ್ಥರಾದ ಚಿಯಕಪೂವಂಡ ಮಂಜು (ಕಟ್ಟಿ )ಮೂಸ ಕೂರುಳಿ, ಕನ್ನಡಿಯಂಡ ಹಸೈನಾರ್, ಅಹಮದ್ ನೆರೂಟ್, ಸಿ. ಎಂ. ಹಂಸ ದೂರಿದ್ದು. ಕೂಡಲೇ ಹದಗೆಟ್ಟ ರಸ್ತೆಯ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಸಂಬಂಧಪಟ್ಟ ಇಲಾಖೆಯವರನ್ನು ಒತ್ತಾಯಿಸಿದ್ದು ತಪ್ಪಿದರೆ ಗ್ರಾಮಸ್ಥರ ಮತ್ತು ಸಂಘ ಸಂಸ್ಥೆಗಳ ಸಹಕಾರದಿಂದ ರಸ್ತೆತಡೆ ನಡೆಸಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಈ ರಸ್ತೆಯಲ್ಲಿ ಸಂಚರಿಸಲು ಆಟೋ ರಿಕ್ಷಾ ಚಾಲಕರ ಪರದಾಟ
ಈ ರಸ್ತೆ ಹಲವಾರು ವರ್ಷಗಳಿಂದ ಪಾಳು ಬಿದ್ದಿದ್ದು ಇಲ್ಲಿ ಜನರಿಗೆ ನಡೆಯಲಾರದ ಪರಿಸ್ಥಿತಿ ಇದೆ.ಅದೇರೀತಿ ಆಟೋ ರಿಕ್ಷಾಗಳು ಸಹ ಈ ವಿಭಾಗಕ್ಕೆ ಬರಲು ಅಸಾಧ್ಯವಾಗಿದ್ದು ಸಂಬಂಧಪಟ್ಟ ಇಲಾಖೆಯವರು ಕೂಡಲೇ ದುರಸ್ಥಿ ಪಡಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು.
ಹಂಸ
ಆಟೋ ಚಾಲಕ ಎಮ್ಮೆಮಾಡು
No comments
Post a Comment