ಕೊಡ್ಲಿಪೇಟೆ (web@timesofcoorg.in) :ಸ್ಥಳಿಯ ಸೆಂಟ್ ಆ್ಯನ್ಸ್ ಆಂಗ್ಲ ಮಾದ್ಯಮಶಾಲೆ ಶಾಲೆಯ ವಿದ್ಯಾರ್ಥಿ ಕೊಡ್ಲಿಪೇಟೆ ನಿವಾಸಿಗಳಾದ ಬಸೀರ್ ಅಹಮ್ಮದ್ ಹಾಗೂ ಗುಲ್ಸರ್ ಭಾನು ದಂಪತಿಗಳ ಪುತ್ರ ಅರ್ಮಾನ್ ಎಸ್ಸೆಸ್ಸೆಲ್ಸಿ ಯಲ್ಲಿ 625 ಕ್ಕೆ 617 ಅಂಕ ಪಡೆದು ಕೊಡ್ಲಿಪೇಟೆಗೆ ಟಾಪರ್ ಆಗಿ ಹೊರ ಹೊಮ್ಮಿದ್ದು ಜಿಲ್ಲೆಯಲ್ಲಿ ಐದನೆ ಸ್ಥಾನ ಪಡೆದು ಕೀರ್ತಿ ತಂದಿದ್ದಾರೆ,
ತನ್ನ ಸಾಧನೆಗೆ ಶಿಕ್ಷಕರು,ಮನೆಯವರ ಸಹಕಾರ ಕಾರಣ.ಮುಂದೆ ಎಂಜಿನಿಯರಿಂಗ್ ಮಾಡುವ ಇಂಗಿತ ವ್ಯಕ್ತಪಡಿಸಿದರು.ಹುಟ್ಟುವಾಗಲೆ ಬಲಗೈ ಸ್ವಾಧಿನ ಕಳೆದುಕೊಂಡಿರುವ ವಿದ್ಯಾರ್ಥಿ ಎಡಗೈಯಲ್ಲೆ ಎಲ್ಲಾ ಕೆಲಸವನ್ನು ಮಾಡುತ್ತಾರೆ.ವಿಶೇಷ ಚೇತನ ಎಂಬ ಕಿಳರಿಮೆಯನ್ನು ಬದಿಗಿಟ್ಟು ಸಾಧನೆ ಮಾಡಲು ಮುಂದಾಗಿರುವ ಆರ್ಮಾನ್.ಸಾಧಿಸುವ ಛಲವೊಂದಿದ್ದರೆ ಏನನ್ನು ಬೇಕಾದರು ಸಾಧಿಸಬಹುದು. ಕೆಲವರು ನೂರೊಂದು ಕಾರಣ ಹೇಳಿ ಸಾದನೆಯಿಂದ ಹಿಂದುಳಿಯುತ್ತಾರೆ. ಆದರೆ ಎಡಗೈಯಲ್ಲೆ ಪರೀಕ್ಷೆ ಬರೆದ ವಿದ್ಯಾರ್ಥಿ ಅರ್ಮಾನ್ ನಾನು ವಿಶೇಷ ಚೇತನವಾಗಿದ್ದರು ಸಾಧನೆ ಮಾಡಲು ಇದು ತೊಡಕಾಗಿಲ್ಲ.ಚೇಸ್ ಕ್ರೀಡೆ ನನಗೆ ತುಂಬಾ ಇಷ್ಟ ಮುಂದೆ ಈ ಕ್ರೀಡೆಯ ಬಗ್ಗೆಯು ಗಮನಹರಿಸುತ್ತೇನೆ ಇದರಲ್ಲೂ ಕೂಡ ಸಾಧನೆ ಮಾಡಬೇಕೆಂದಿದ್ದೆನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

No comments
Post a Comment