ಕುಶಾಲನಗರ (web@timesofcoorg.in): ಸಮಸ್ತ ಕೇರಳ ಸುನ್ನೀ ವಿದ್ಯಾಭ್ಯಾಸ ಮಂಡಳಿ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ದಾರುಲ್ ಉಲೂಮ್ ಫಾದಿಲಾ ಮಹಿಳಾ ಶರೀಯತ್ ಕಾಲೇಜು, ಕಳೆದ ಜೂನ್ ತಿಂಗಳ 23 ರಿಂದ 25 ರವರಿಗೆ ನಡೆದ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ 100 ರಷ್ಟು ಫಲಿತಾಂಶ ಪಡೆದು ವಿಶೇಷ ಸಾಧನೆ ಮಾಡಿದೆ.
ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಪ್ರಥಮ ಹಾಗೂ ದ್ವಿತೀಯ ವರ್ಷದ ಪಿಯುಸಿ ತರಗತಿಗಳೊಂದಿಗೆ ಧಾರ್ಮಿಕ ಸಮನ್ವಯ ಶಿಕ್ಷಣ ನೀಡುತ್ತಾ ಜಿಲ್ಲೆಗೆ ಅಭಿಮಾನ ತಂದಿದೆ ಈ ವಿದ್ಯಾ ಸಂಸ್ಥೆ.
ಕಂಪ್ಯೂಟರ್ ತರಬೇತಿ, ಕಲೆ, ಕ್ಯಾಲಿಗ್ರಫಿ, ಹೋಮ್ ಸೈನ್ಸ್ ನಂತಹ ವಿಶೇಷ ತರಗತಿಗಳು ಹಾಗೂ ಕುರ್ ಆನ್, ಕರ್ಮ ಶಾಸ್ತ್ರ ಮತ್ತು ಧಾರ್ಮಿಕ ಚರಿತ್ರೆಗಳನ್ನು ಬೋಧಿಸುತ್ತಾ, ಲೌಕಿಕ ಶಿಕ್ಷಣದೊಂದಿಗೆ ಧಾರ್ಮಿಕ ಶಿಕ್ಷಣವನ್ನು ಜೊತೆಯಾಗಿ ನೀಡುತ್ತಾ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಈಗಾಗಲೇ ಎರಡನೇ ವರ್ಷದ ಬ್ಯಾಚ್ ದಾಖಲಾತಿ ಸಹ ಆರಂಭವಾಗಿದೆ. ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಸಾಧನೆಗೆ ಕಾರಣರಾದ ಎಲ್ಲಾ ವಿದ್ಯಾರ್ಥಿನಿಯರನ್ನು ಹಾಗೂ ಶಿಕ್ಷಕರನ್ನು ಆಡಳಿತ ಮಂಡಳಿಯವರು ಅಭಿನಂದಿಸಿದ್ದಾರೆ.

No comments
Post a Comment