ಅತ್ಯಾಚಾರಿಗಳನ್ನು ನಿರ್ಭಯ ಅತ್ಯಾಚಾರಿಗಳ ರೀತಿಯೇ ಗಲ್ಲಿಗೇರಿಸಿ : ಚೊಕ್ಕಂಡಹಳ್ಳಿ ಮಜೀದ್

No comments
ವಿರಾಜಪೇಟೆ :                                     ಉತ್ತರ ಪ್ರದೇಶದ ಹತ್ರಾಸ್ ನಲ್ಲಿ 19 ವರ್ಷದ ದಲಿತ ಸಮುದಾಯಕ್ಕೆ ಸೇರಿದ ಬಾಲಕಿಯನ್ನ ಸಾಮೂಹಿಕವಾಗಿ ಅತ್ಯಾಚಾರವೆಸಗಿದ ಕಾಮುಕ ನರ ರಾಕ್ಷಸರ ಕೃತ್ಯವನ್ನು ಇಡೀ ದೇಶವೇ ಖಂಡಿಸುತ್ತಿದ್ದು ಕೃತ್ಯ ಎಸಗಿದ ಅತ್ಯಾಚಾರಿಗಳನ್ನು ನಿರ್ಭಯ ಅತ್ಯಾಚಾರಿಗಳ ರೀತಿಯಲ್ಲಿಯೇ  ಗಲ್ಲಿಗೇರಿಸಬೇಕೆಂದು ವಿರಾಜಪೇಟೆ ತಾಲ್ಲೂಕು ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಚೊಕ್ಕಂಡಹಳ್ಳಿ ಮಜೀದ್ ಒತ್ತಾಯಿಸಿದ್ದಾರೆ.  ಕಾಮುಕ ಪಿಶಾಚಿಗಳು ಅವಳ ನಾಲಿಗೆಯನ್ನು ಕತ್ತರಿಸಿ, ಅಂಗಾಗಗಳ ಮೂಳೆಗಳನ್ನು ಮುರಿದು ಉಸಿರುಗಟ್ಟಿ ಸಾಯಿಸಲು ಪ್ರಯತ್ನಿಸಿದ್ದಾರೆ. 15 ದಿನಗಳಿಂದ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ಮಾಡಿದರೂ ಎಳೆ ಜೀವ ಉಳಿಯಲಿಲ್ಲ. ವಿಕೃತ ಕಾಮಿಗಳ ಅಟ್ಟಹಾಸಕ್ಕೆ ಬಾಲಕಿಯ ಕುಟುಂಬಸ್ಥರು ಮತ್ತು ಉತ್ತರ ಪ್ರದೇಶದಾದ್ಯಂತ ವ್ಯಾಪಕ ಪ್ರತಿಭಟನೆ ನಡೆಯುತ್ತಿದ್ದರೂ ಅಲ್ಲಿಯ ಸರಕಾರ ಮಾತ್ರ  ಅತ್ಯಾಚಾರಿಗಳನ್ನು ಬಂಧಿಸುವಲ್ಲಿ ವಿಫಲವಾಗಿದೆ. ಹೆತ್ತವರಿಗೆ ಶವವನ್ನೂ ನೀಡದೆ ಅಲ್ಲಿಯ ಪೋಲೀಸ್ ಅಧಿಕಾರಿಗಳು  ಸುಟ್ಟು ಹಾಕಿದ್ದಾರೆ  ಇದರ ಹಿಂದಿನ ಮರ್ಮ ಕಾಮುಕ ರಾಕ್ಷಸರ ರಕ್ಷಣೆಯೇ ಎಂಬ ಅನುಮಾನ. ಉತ್ತರ ಪ್ರದೇಶ ಸರಕಾರ ದಲಿತ ಅಮಾಯಕ ಹೆಣ್ಣುಮಗಳ ನೆರವಿಗೆ ಬಾರದಿರುವುದು ನಿಜಕ್ಕೂ ನೋವಿನ ಸಂಗತಿ. ಈ ಭಯಾನಕ ಅತ್ಯಾಚಾರ ಮತ್ತು ಕೊಲೆಗೆ ಇಡೀ ನಾಗರೀಕ ಸಮಾಜ ಹಾಗೇ ಮನುಷ್ಯ ಕುಲವೇ ತಲೆ ತಗ್ಗಿಸುವಂತಾಗಿದೆ. ನಾಲ್ವರು ಆರೋಪಿಗಳಿಗೆ ನಿರ್ಭಯ ಕೊಲೆಹಂತಕರಿಗೆ ನೀಡಿದ ಶಿಕ್ಷೆಯನ್ನೇ ನೀಡಿ ಗಲ್ಲಿಗೇರಿಸಬೇಕೆಂದು ಒತ್ತಾಯಿಸಿದರು 

No comments

Post a Comment