ಅಬ್ಬಾಸ್ ಹಾಜಿ ಕೊಡ್ಲಿಪೇಟೆ ನಿಧನ : ಪ್ರಮುಖರ ಸಂತಾಪ

No comments

ಸೋಮವಾರಪೇಟೆ (Times Of Coorg) : ಕೊಡ್ಲಿಪೇಟೆಯ ಅಬ್ಬಾಸ್ ಹಾಜಿ ಇಂದು ನಿಧನ ಹೊಂದಿದ್ದಾರೆ. ಕೊಡ್ಲಿಪೇಟೆ ಹ್ಯಾಂಡ್ ಪೋಸ್ಟ್ ಮಸ್ಜಿದುನ್ನೂರ್ ಜುಮಾ ಮಸೀದಿಯ ಮಾಜಿ ಅಧ್ಯಕ್ಷ ಹಾಲಿ ಉಪಾಧ್ಯಕ್ಷ, ಕೊಡಗು ಜಿಲ್ಲಾ ವಕ್ಫ್ ಬೋರ್ಡ್ ಮಾಜಿ ಸದಸ್ಯರು, ಮಡಿಕೇರಿ ರೇಂಜ್ ಮಾಜಿ ಅಧ್ಯಕ್ಷರು, ಕಾಂಗ್ರೆಸ್ ಕೊಡ್ಲಿಪೇಟೆ ಹೋಬಳಿ ಅಧ್ಯಕ್ಷ, ಮುಂತಾದ ಧಾರ್ಮಿಕ ಸಾಮಾಜಿಕ ಸಂಘಸಂಸ್ಥೆಗಳ ಸ್ಥಾನಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿದ್ದರು. ಸಂಘಸಂಸ್ಥೆಗಳಿಗೆ ಉಪಕಾರಿಯಾದ ಅಬ್ಬಾಸ್ ಹಾಜಿಯವರ ವಿಯೋಗ ತುಂಬಲಾರದ ನಷ್ಟವೆಂದು ಪ್ರಮುಖರು ಸಂತಾಪ ವ್ಯಕ್ತಪಡಿಸಿದ್ದಾರೆ. ಒಂದು ಪುತ್ರಿ, ಮೂವರು ಪುತ್ರರನ್ನು ಅಗಲಿದ್ದಾರೆ.

No comments

Post a Comment