ವಿರಾಜಪೇಟೆ : ಅಕ್ರಮ ಗಾಂಜಾ ಮಾರಾಟ - ಆರೋಪಿ ಬಂಧನ

No comments

ವಿರಾಜಪೇಟೆ (Times Of Coorg) :  ದಿನಾಂಕ 03-10-2020 ರಂದು ವಿರಾಜಪೇಟೆ ನಗರ ಠಾಣಾಧಿಕಾರಿಯವರಿಗೆ  ಬಂದ ಮಾಹಿತಿ ಆದಾರದ ಮೇರೆಗೆ  ವಿರಾಜಪೇಟೆ ನಗರದ ನಿಸರ್ಗಲೇಔಟ್ ನ ಹತ್ತಿರ ವ್ಯಕ್ತಿಯೋರ್ವ KA-12-Q-0818ರ ಪಲ್ಸರ್ ಮೋಟಾರು ಸೈಕಲ್ನ್ನು ನಿಲ್ಲಿಸಿಕೊಂಡು ಗಿರಾಕಿಗಳಿಗೆ ಗಾಂಜವನ್ನು ಸರ್ಕಾರದ ಪರವಾನಗಿ ಇಲ್ಲದೇ ಅಕ್ರಮವಾಗಿ ಮಾರಾಟ ಮಾಡುತ್ತಿರುವುದನ್ನು ಪತ್ತೆಹಚ್ಚಿ ದಾಳಿ ಮಾಡಿದ್ದು,   ಆರೋಪಿ ವಿರಾಜಪೇಟೆ ನೆಹರುನಗರದ ನಿವಾಸಿ ಶಂಶುದ್ದೀನ್ ಎಂಬಾತನನ್ನು ಮಾಲು ಸಮೇತವಾಗಿ ಬಂಧಿಸಿ  ಮೋಟಾರ್ ಸೈಕಲನ್ನು ವಶಕ್ಕೆ ಪಡೆದು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕಾರ್ಯಾಚರಣೆಯಲ್ಲಿ  ವಿರಾಜಪೇಟೆ ನಗರ ಠಾಣಾಧಿಕಾರಿ ವೀಣಾ ನಾಯಕ್, ಎ.ಎಸ್.ಐ ಎಂ.ಎಸ್.ಸುಬ್ರಮಣಿ, ಹಾಗು ಸಿಬ್ಬಂದಿಗಳು ಭಾಗಿಯಾಗಿದ್ದರು.

No comments

Post a Comment