ಸೋಮವಾರಪೇಟೆ : ಭಾರತ ಕಮ್ಯುನಿಸ್ಟ್ ಪಕ್ಷದ ವತಿಯಿಂದ ಸೂರಿಗಾಗಿ ಸಮರ ಹೋರಾಟಕ್ಕೆ ಚಾಲನೆ

No comments


ಸೋಮವಾರಪೇಟೆ (Times Of Coorg) : ಸಿಪಿಐ ಪಕ್ಷದ ನೇತೃತ್ವದಲ್ಲಿ ರಾಜ್ಯ ದ್ಯಂತ ನಡೆಸುತ್ತಿರುವ ಸೂರಿಗಾಗಿ ಸಮರ ಹೋರಾಟಕ್ಕೆ ರಾಜ್ಯ ಕಾರ್ಯದರ್ಶಿ ಸ್ವಾತಿ ಸುಂದರೇಶ್ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಉದ್ಗಾಟಿಸಿದರು .

ನಂತರ ಮಾತನಾಡಿದ ಅವರು ಸ್ವಾತಂತ್ರ್ಯ ಬಂದು 74ವರ್ಷ ವಾದರು ಬಡಪಾಯಿಗಳಿಗೆ   ವಾಸಿಸಲು ಒಂದು ಸೂರಿಲ್ಲದೆ ತೋಟದ ಲೈನ್ ಮನೆಗಳಲ್ಲಿ,ನದಿದಡಗಳಲ್ಲಿ,ಬಾಡಿಗೆ ಮನೆಗಳಲ್ಲಿ ತಮ್ಮ ಜೀವನ ಸವೆಸುತ್ತಿದ್ದು,ಇತೀಚಿನ ದಿನಗಳಲ್ಲಿ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಇರುವ ಮನೆಯನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ .

ಲಕ್ಷಾಂತರ ಹೆಕ್ಟೇರ್ ಸರ್ಕಾರಿ ಭೂಮಿಯನ್ನು ಭಲಾಢ್ಯರು ಒತ್ತುವರಿ ಮಾಡಿಕೊಂಡಿದ್ದರು ಹಾಗು ಪಾಳು ಬಿದ್ದಿದ್ದರು ಬಡಪಾಯಿಗೆ ಸರ್ಕಾರ ವಿತ್ತರಿಸುತ್ತಿಲ್ಲ ಕೂಡಲೇ ಬಡಪಾಯಿ ಗಳಿಗೆ ನಿವೇಶನ ಹಾಗೂ ಮನೆ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಸರಕಾರವನ್ನು ಒತ್ತಾಯಿಸಿದರು‌.
ಸೋಮವಾರ ಪೇಟೆ ತಾಲೋಕಿನ  ಐಗೂರು ಪಂಚಾಯತಿ,ಬೇಗೂರುಪಂಚಾಯಿತಿ ಹಾಗೂ ಕಿರಗಂದೂರು ಪಂಚಾಯಿತಿಗಳಲ್ಲಿ ಧರಣಿ ನಡೆಸಿ ಮನವಿ ಸಲ್ಲಿಸಲಾಯಿತು .

ಕಾರ್ಯಕ್ರಮದ ಅಧ್ಯಕ್ಷರಾದ ಜಿಲ್ಲಾ ಕಾರ್ಯದರ್ಶಿ ಕೆ.ವಿ ಸುನೀಲ್ ಮಾತನಾಡಿ ಇಂದು ಕೊಡಗಿ ಕಾಫಿ ತೋಟದ ಲೈನ್ ಮನೆಗಳಲ್ಲಿ ತಲತಲಾಂತರದಿಂದ ಜೀವಿಸುತ್ತಿರುವ ಕಾರ್ಮಿಕ ತನ್ನ ಮುಪ್ಪಿನ ಸಮಯದಲ್ಲಿ ಇರಲು ಒಂದು ಸೂರಿಲ್ಲದೆ ತನ್ನ ಜೀವನವನ್ನು ಅಂತ್ಯಕಾಣುತ್ತಿರುವುದು ಬೇಸರದ ಸಂಗತಿ ಈ ಸಮಸ್ಯೆಯನ್ನು ಹೋಗಲಾಡಿಸುವ ದೃಷ್ಟಿಯಿಂದ ಭಾರತ ಕಮ್ಯುನಿಸ್ಟ್ ಪಕ್ಷ. CPI ರಾಜ್ಯ ವ್ಯಾಪಿ ನಿವೇಶನ ಹೋರಾಟದ ಭಾಗವಾಗಿ ಕೊಡಗು ಜಿಲ್ಲೆಯಲ್ಲಿ ಸೋಮವಾರಪೇಟೆಯಿಂದ ಮಡಿಕೇರಿ ಯವರೇಗೆ 3ದಿನಗಳ ಪಾದಯಾತ್ರೆಯನ್ನು ನಡೆಸಲು ತೀರ್ಮಾನ ಕೈಗೊಳ್ಳಲಾಗಿತ್ತು ಕೊರೋನಾ ಸಮಸ್ಯೆಯಿಂದ  ಪಂಚಾಯತ್ ಮಟ್ಟದಲ್ಲಿ ಪ್ರತಿಭಟನೆ ಕೈಗೊಂಡು ಸೋಮವಾರ ಮಡಿಕೇರಿಯಲ್ಲಿ ಸಮಾವೇಶ ಗೊಳ್ಳಲಿದೆ ಅಂದರು.

ಪ್ರತಿಭಟನೆಯಲ್ಲಿ ಎಐಟಿಯುಸಿ ನ ಜಿಲ್ಲಾಧ್ಯಕ್ಷ ಹೆಚ್.ಎಂ.ಸೋಮಪ್ಪ.ಉಪಾಧ್ಯಕ್ಷ ಮಣಿ.ಕುಮಾರ್.ಜಯಪ್ಪ ಹಾನಗಲ್ ವಿ.ಆರ್ ರಜಿನಿಕಾಂತ್.ಗೋಪಾಲ್ ,ಮುಂತಾದವರು ಉಪಸ್ಥಿತರಿದ್ದರು.




No comments

Post a Comment