ನಾಪೋಕ್ಲು ಪಟ್ಟಣದಲ್ಲಿ ಬೆಂಕಿ ಅವಘಡ : ಲಾರಿ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ
ವರದಿ: ಹಾರಿಸ್ ನಾಪೋಕ್ಲು
ನಾಪೋಕ್ಲು (Times Of Coorg): ನಾಪೋಕ್ಲು ಪಟ್ಟಣದ ಪಾತ್ರೆ ಅಂಗಡಿಯಲ್ಲಿ ಸಣ್ಣ ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಬೆಂಕಿ ಹೊತ್ತುಕೊಂಡಿದೆ. ಕೂಡಲೇ ಅಂಗಡಿ ಮಾಲೀಕ ಬೆಂಕಿ ಹತ್ತಿಕೊಂಡ ಸಿಲಿಂಡರನ್ನು ಅಂಗಡಿಯ ಹೊರಭಾಗಕ್ಕೆ ಹಾಕಿದ್ದು,ಕೂಡಲೇ ಸುತ್ತುವರೆದ ಅಕ್ಕಪಕ್ಕದ ಅಂಗಡಿ ಮಾಲೀಕರು ಸಾರ್ವಜನಿಕರು ಬೆಂಕಿ ನಂದಿಸಲು ನೀರು ಮತ್ತು ಗೋಣಿಚೀಲಗಳನ್ನು ಹಾಕಿ ಎಷ್ಟೇ ಪ್ರಯತ್ನ ಪಟ್ಟರು ಬೆಂಕಿ ಆರಿಸಲು ಸಾಧ್ಯವಾಗಲಿಲ್ಲ.
ಅಷ್ಟರಲ್ಲೇ ಪಟ್ಟಣದಲ್ಲಿ ಈ ರಸ್ತೆಯಲ್ಲಿ ವಾಹನ ಸಂಚರಿಸಲು ಆಗದ ಕಾರಣ ವಾಹನದಟ್ಟಣೆ ಕೂಡ ಹೆಚ್ಚಾಗಿತ್ತು. ಘಟನೆಯ ಅಲ್ಪ ಸಮಯದ ಹಿಂದೆ ನಾಪೋಕ್ಲು ಭಾಗಕ್ಕೆ ಉಸ್ತುವಾರಿ ಸಚಿವರು ಆಗಮಿಸಿದ್ದು,
ಉಸ್ತುವಾರಿ ಸಚಿವರ ವಾಹನ ಈ ರಸ್ತೆಯಲ್ಲಿ ಹಾದುಹೋಗಿ ಕೇವಲ ನಿಮಿಷಗಳು ಆಗಿತ್ತು.
ಈ ಸಂದರ್ಭ ಈ ಅಂಗಡಿಯ ಪಕ್ಕದಲ್ಲೇ ಟ್ರಾಫಿಕ್ ಜಾಮ್ ಆಗಿದ್ದರಿಂದ ಎಮ್ಸಾಂಡ್ ತುಂಬಿದ ಲಾರಿ ಸಿಕ್ಕಿಹಾಕಿಕೊಂಡಿದೆ. ಚಾಲಕನ ತಕ್ಷಣ ಸಮಯಪ್ರಜ್ಞೆಯಿಂದ
ಎಂ ಸ್ಯಾಂಡ್ ಬೆಂಕಿಯ ಮೇಲೆ ಸುರಿದು ಬೆಂಕಿ ನಂದಿಸಿದರು
ಈ ಸಂದರ್ಭ ಸಮಯಪ್ರಜ್ಞೆ ಮೆರೆದು ಬಾರಿ ಅನಾಹುತವನ್ನು ತಪ್ಪಿಸಿದ ಲಾರಿ ಚಾಲಕನನ್ನು ಸ್ಥಳೀಯರು ಪ್ರಶಂಸಿಸಿದರು.




No comments
Post a Comment