ಕೊಡ್ಲಿಪೇಟೆ - ವಿವಿಧ ಅಂಗನವಾಡಿ ಕೇಂದ್ರಗಳ ಪೋಷಣ್ ಅಭಿಯಾನ
ಕೊಡ್ಲಿಪೇಟೆ (Times Of Coorg) :
ಕಲ್ಲಳ್ಲಿ . ದೊಡ್ಡಕೊಡ್ಲಿ . ಕಿರಿಕೊಡ್ಲಿ . ಹಂಪಾಪುರ . ನವಗ್ರಾಮ .ಮಸೀದಿ ಬೀದಿ ಯ ಅಂಗನವಾಡಿಗಳು ಸಂಯುಕ್ತವಾಗಿ ಕಲ್ಲಳ್ಳಿ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನ ಕಾರ್ಯಕ್ರಮ ವನ್ನು ಏರ್ಪಡಿಸಲಾಗಿತ್ತು .
ಕೊಡ್ಲಿಪೇಟೆ ಗ್ರಾಮ ಪಂಚಾಯತಿ ಅಭಿವೃದ್ಧಿ ಆದಿಕಾರಿ ಹರೀಶ್ ಕಾರ್ಯಕ್ರಮ ವನ್ನು ಉದ್ಬಾಟಿಸಿ
ಸರ್ಕಾರವು ವಿವಿಧ ಕಾರ್ಯಕ್ರಮಗಳನ್ನು ಜಾರೊಗೊಳಿಸುತ್ತಿದ್ದು ಆಯಾಯ ಇಲಾಖೆಗಳ ಮೂಲಕ ಜಾರಿಗೊಳಿಸಿತ್ತಿದ್ದು ಜನರು ಯೋಜನೆಗಳ ಸದುಪಯೋಗ ಪಡೆದುಕೊಳ್ಳುಬೇಕು.ಕರೋನಾ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲರೂ ತಮಗೆ ತಾವೇ ಇನ್ನೂ ಹೆಚ್ಚಿನ ಜಾಗ್ರತೆ ವಹಿಸಬೆಕೆಂದರು.
ಆರೋಗ್ಯ ಇಲಾಖೆಯ ಬಿ.ಹೆಚ್.ಇ.ಓ. ಮಂಜುಳಾ ಗರ್ಬಿಣಿ ಬಾಣಂತಿಯರು ಹಾಗೂ ಮಕ್ಕಳು ಯಾವ ಪೌಷ್ಟಿಕಾಂಶ ಯುಕ್ತ ಆಹಾರವನ್ನು ಸೇವಿಸಬೇಕೆಂದು ವಿವರಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಲ್ಲಳ್ಳಿ ಅಂಗನವಾಡಿ ಶಿಕ್ಷಕಿ ಪಿ.ಎಸ್.ಮಂಜುಳಾ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೆಶನದ ಮೇರೆಗೆ ಸರ್ಕಾರದ ಪೋಷಣ್ ಅಭಿಯಾನ ಯೋಜನೆಯಡಿಯಲ್ಲಿ
ಈ ಕಾರ್ಯಕ್ರಮ ವನ್ನು ಆಯೋಜಿಸಿದ್ದಾಗಿ ತಿಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ವಂದನಾ ಆರ್. ಪ್ರಾರ್ಥಿಸಿದರು, ದೊಡ್ಡಕೊಡ್ಲಿ ಅಂಗನವಾಡಿ ಶಿಕ್ಷಕಿ
ಪರ್ಜಾನ ಪರ್ವಿನ್ ಸ್ವಾಗತಿಸಿದರು.
ಹಂಪಾಪುರ ಅಂಗನವಾಡಿ ಶಿಕ್ಷಕಿ ಗುಣಮಣಿ ನಿರೂಪಿಸಿ ವಂದಿಸಿದರು.
ಗ್ರಾಮ ಪಂಚಾಯತಿ ಹಿಂದಿನ ಹಿರಿಯ ಸದಸ್ಯರಾದ ಕೆ.ಆರ್.ಚಂದ್ರಶೇಖರ್ ,ಅಂಗನವಾಡಿ ಶಿಕ್ಷಕಿಯರಾದ
ಶಾರದಮ್ಮ ದೊಡ್ಡಕೊಡ್ಲಿ ,ನವೀನಾ ಕಿರಿಕೊಡ್ಲಿ ,
ರೆಹಾನ ಭಾನು ಮಸೀದಿ ಬೀದಿ,ಆಶಾ ಕಾರ್ಯಕರ್ತೆಯರಾದ ಯಶೋದಾ .ಕಲಾವತಿ.
ಅಂಗನವಾಡಿ ಸಹಾಯಾಕಿ ಯಾಸ್ಮಿನ್ ತಾಜ್ ಹಾಗೂ
ಗರ್ಬಿಣಿ .ಬಾಣಯಂತಿಯರು.ಗ್ರಾಮಸ್ಥರು ಹಾಜರಿದ್ದರು

No comments
Post a Comment