ದ.ಕ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಮಲಾರ್ ಗೆ ಅಲ್ ಫಿಲಾ ಸನ್ಮಾನ
ಉಳ್ಳಾಲ (ದಕ್ಷಿಣ ಕನ್ನಡ) :ಶಿಕ್ಷಣ ಇಲಾಖೆಯ ವತಿಯಿಂದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಾದ ಟಿಪ್ಪು ಸುಲ್ತಾನ್ ವಿದ್ಯಾ ಸಂಸ್ಥೆ ಮುಖ್ಯ ಶಿಕ್ಷಕ ಎಂ,ಹೆಚ್ ಮಲಾರ್ ರವರನ್ನು ಅವರ ಹಳೆ ವಿದ್ಯಾರ್ಥಿಗಳಿಂದ ಸ್ಥಾಪಿತವಾದ ಅಲ್ ಫಿಲಾ ಅಸೋಸಿಯೇಸನ್ ವತಿಯಿಂದ ಸನ್ಮಾನಿಸಲಾಯಿತು. ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷರಾದ ಕೆ ಎಂ,ಕೆ, ಮಂಜನಾಡಿಯವರ ಅಧ್ಯಕ್ಷತೆಯಲ್ಲಿ, ಕೋಟೆಪುರ ಪ್ರಂಡ್ಸ್ ಅಧ್ಯಕ್ಷ ಶಮೀರ್ ಕೆ ಎಫ್ ಸಿ ಯವರು ಸನ್ಮಾನಿಸಿದರು. ಅಲ್ ಫಿಲಾ ಅಸೋಸಿಯೇಷನ್ ವತಿಯಿಂದ ಈ ಸಂದರ್ಭದಲ್ಲಿ ಟಿಪ್ಪು ಸುಲ್ತಾನ್ ವಿದ್ಯಾ ಸಂಸ್ತೆಗೆ ಲ್ಯಾಬ್ ಟ್ಯಾಪ್ ಕೊಡುಗೆಯಾಗಿ ನೀಡಲಾಯಿತು ಮತ್ತು ಮಾಜಿ ಸಂಚಾಲಕರಾದ ದಿ/ ಮಹಮ್ಮದ್ ಶಾಫಿಯವರ ಮಕ್ಕಳು ಕುಡಿಯುವ ನೀರಿನ ಫಿಲ್ಟರ್ ನೀಡಿದರು.
ಅಲ್ ಫಿಲಾದ ಕಾರ್ಯದರ್ಶಿ ಇಸ್ಮಾಯಿಲ್ ರವರು ಸ್ವಾಗತಿಸಿದ ಸನ್ಮಾನ ಸಭೆಯಲ್ಲಿಸದಸ್ಯರಾದ ಶಮೀರ್,ಇಮ್ರಾನ್,ಹಾಶಿರ್,ರಿಫಾನ್,ಬಾಷಿಕ್,ಉಪಸ್ಥಿತರಿದ್ದರು ಉಪಾಧ್ಯಕ್ಷರಾದ ರಶೀದ್ ರವರು ವಂದಿಸಿ ಕೋಶಾಧಿಕಾರಿ ಮಹಮ್ಮದ್ ಪಾಝಿಲ್ ಕಾರ್ಯಕ್ರಮ ನಿರೂಪಿಸಿದರು

No comments
Post a Comment