ಕೊಟ್ಟಮುಡಿ ಮರ್ಕಝ್ ದಅವಾ ವಿಧ್ಯಾರ್ಥಿಗಳ ಕಲಾ ಸ್ಪರ್ಧೆ ಎನ್ಲಝರ್ ಸಮಾರೋಪ ಸಮಾರಂಭ

1 comment

  ಮಡಿಕೇರಿ (Times Of Coorg) : ಕೊಟ್ಟಮುಡಿ ಮರ್ಕಝ್ ದಅವಾ ಕಾಲೇಜ್ ವಿಧ್ಯಾರ್ಥಿಗಳ 2020,21ನೇ ಸಾಲಿನ "ಎನ್ಲಜರ್" ಓನ್ಲೈನ್ ಕಲಾ ಸ್ಪರ್ಧೆಯು ಅತೀ ವಿಜೃಂಬಣೆಯಿಂದ ನಡೆಸಲಾಯಿತು. ಸುಮಾರು 37 ಕಾರ್ಯಕ್ರಮಗಳೊಂದಿಗೆ ಪ್ರಾರಂಭಗೊಂಡ ಸ್ಪರ್ಧೆಯಲ್ಲಿ 12 ಸರ್ಕಲ್ ಗಳಲ್ಲಿ 100 ರಷ್ಟು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದ ಸಮಾರೋಪ ಸಮಾರಂಭವು  ದಿನಾಂಕ 28/09/2020 ರಂದು ಓನ್ಲೈನ್ ಮೂಲಕ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆಯ ನಾಇಬ್ ಖಾಝಿ ಮಹಮೂದ್ ಉಸ್ತಾದ್ ಪ್ರಾರ್ಥನೆ ಮಾಡಿದರು. ರಾಜ್ಯದ ಪ್ರಸಿದ್ದ ವಾಗ್ಮಿ ಯೂ, ಕರ್ನಾಟಕ ರಾಜ್ಯ ಎಸ್. ಎಸ್. ಎಫ್. ಉಪಾಧ್ಯಕ್ಷರೂ ಆದ ಸುಫ್ಯಾನ್ ಸಖಾಫಿ ಉದ್ಘಾಟಿಸಿದರು.

ಸಂಸ್ಥೆಯ ವ್ಯವಸ್ಥಾಪಕರಾದ ಇಸ್ಮಾಯಿಲ್ ಸಖಾಫಿ
ಅತಿಥಿ ಭಾಷಣ ಮಾಡಿದರು. ಸಂಸ್ಥೆಯ ದಅವಾ ಕಾಲೇಜು ಪ್ರಾಂಶುಪಾಲರಾದ ಶಿಹಾಬುದ್ದೀನ್ ನೂರಾನಿ ಕೆಲವು ಹಿತ ನುಡಿ ಗಳನ್ನಾಡಿದರು. ಫಾರೂಕ್ ಹಾದಿ ವಂದನೆ ಗಳನ್ನರ್ಪಿಸಿದರು. ಜಿದ್ದಾ ಜಿದ್ದಿನ ಈ ಕಲಾಸ್ಪರ್ಧೆಯಲ್ಲಿ 1500 ಅಂಕಗಳೊಂದಿಗೆ ಕೊಂಡಂಗೇರಿ  ಸರ್ಕಲ್ ಪ್ರಥಮ ಸ್ಥಾನವನ್ನು ಪಡೆದುಕೊಂಡರೆ,1470 ಅಂಕದೊಂದಿಗೆ  ವಿರಾಜಪೇಟೆ ಸರ್ಕಲ್ ದ್ವಿತೀಯ ಸ್ಥಾನ ನವನ್ನು ಅಲಂಕರಿಸಿದರು.


1 comment

  1. Masha allah ❤️❤️❤️
    proud to be a student of marakaz coorg

    ReplyDelete