ಶ್ರೀ ಭಗತ್ ಸಿಂಗ್ ಯುವಕ ಸಂಘ ಮಾದಾಪುರ ವತಿಯಿಂದ ಕ್ರಾಂತಿಕಾರಿ ಭಗತ್ ಸಿಂಗ್ ಜನ್ಮದಿನ ಆಚರಣೆ
ಮಾದಾಪುರ (Times Of Coorg) :
ಶ್ರೀ ಭಗತ್ ಸಿಂಗ್ ಯುವಕ ಸಂಘ ಮಾದಾಪುರ ಇವರ ವತಿಯಿಂದ ಕ್ರಾಂತಿಕಾರಿ ಹುತಾತ್ಮ ಭಗತ್ ಸಿಂಗ್ ರವರ 117 ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು ..
ಕಾರ್ಯಕ್ರಮವನ್ನು ಕುರಿತು ಮಾತನಾಡಿದ ಸಂಘದ ಗೌರವ ಸಲಹೆಗಾರ ಬಸವರಾಜು , ಕ್ರಾಂತಿಕಾರಿ ಭಗತ್ ಸಿಂಗ್ ಇವರ ತತ್ವ ಸಿದ್ದಂತ ಆದರ್ಶಗಳು ಇಂದಿನ ಯುವಕರಿಗೆ ಮಾದರಿಯಾಗಬೇಕು. ಎಲ್ಲರು ದೇಶದ ಒಳಿತಿಗಾಗಿ ಶ್ರಮಿಸಿ ಎಂದು ಸಲಹೆ ನೀಡಿದರು . ಸಂಘದ ಸದಸ್ಯ ಉಮರ್ ಸ್ವಾಗತಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಸ ಬಾಲಕೃಷ್ಣ , ಉಪಾಧ್ಯಕ್ಷ ಹರೀಶ್ , ಕಾರ್ಯದರ್ಶಿ ಚೇತನ್ , ಖಜಾಂಜಿ ಪ್ರದೀಶ್ , ದೇವಸ್ಥಾನ ಕಮಿಟಿಯ ಸದಸ್ಯರಾದ ಲವಕುಮಾರ್ , ಕೊರಗಪ್ಪ , ಸಾಮಾಜಿಕ ಕಾರ್ಯಕರ್ತ ಹರೀಶ್ ಮತ್ತು ಸಂಘದ ಸದಸ್ಯರು , ಗ್ರಾಮಸ್ಥರು ಉಪಸ್ಥಿತರಿದ್ದರು.

No comments
Post a Comment