ಕೊಡಗು ಜಿಲ್ಲೆಯಲ್ಲಿ ಮಾದಕ ವಸ್ತುಗಳ ಮಾರಾಟ ಪ್ರಕರಣ : ಮೂರು ಜನ ಆರೋಪಿಗಳು ಡಿಸಿಐಬಿ ಪೋಲಿಸರ ವಶಕ್ಕೆ

No comments

ಮಡಿಕೇರಿ (Times Of Coorg) : ಕೊಡಗು ಜಿಲ್ಲೆಯಲ್ಲಿ ಮಾದಕ ವಸ್ತುಗಳ ಮಾರಾಟದ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ವಿದೇಶಿ ಪ್ರಜೆಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಡಿಸಿಐಬಿ ಘಟಕದ ಪೊಲೀಸರು ಯಶಸ್ವಿಯಾಗಿದ್ದಾರೆ
   
      ದಿನಾಂಕ 28-08-2020ರಂದು ರಾತ್ರಿ ಮಡಿಕೇರಿ ನಗರ ಠಾಣಾ ವ್ಯಾಪ್ತಿಯ ರಾಜಾಸೀಟ್  ಸಮೀಪದ ಮುಖ್ಯ ರಸ್ತೆಯಲ್ಲಿ  ಬೆಂಗಳೂರಿನಿಂದ ಕಾರಿನಲ್ಲಿ ಬಂದು ಸ್ಥಳೀಯ ಅಯ್ಯಂಗೇರಿಯ ವ್ಯಕ್ತಿಗಳಿಗೆ  ಲಕ್ಷಾಂತರ ಮೌಲ್ಯದ  ಮಾದಕ ವಸ್ತು “ Ampetamine”  ಸರಬರಾಜು ಮಾಡುತ್ತಿದ್ದ ವ್ಯಕ್ತಿಗಳ ಬಗ್ಗೆ ಮಾಹಿತಿ ಕಲೆಹಾಕಿ  ಮಾಲು ಸಮೇತ ಪತ್ತೆಹಚ್ಚಿ ಮೂರು ಜನ ಆರೋಪಿಗಳನ್ನು ಡಿಸಿಐಬಿ ಪೊಲೀಸರು  ವಶಕ್ಕೆ ಪಡೆದುಕೊಂಡಿದ್ದರು. ಘಟನೆಯ ಸಮಯದಲ್ಲಿ ಮಾದಕ ವಸ್ತು ಸರಬರಾಜಿಗೆ ಬಳಸಿದ ಕಾರು ಸಮೇತ ಇತರ ಆರೋಪಿಗಳು  ತಪ್ಪಿಸಿಕೊಂಡಿದ್ದರು. ಈ ಬಗ್ಗೆ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದಲ್ಲಿ ಸ್ಥಳಿಯ ಆರೋಪಿಗಳೊಂದಿಗೆ  ಬೆಂಗಳೂರು , ಕಲ್ಕತ್ತಾ ಹಾಗೂ ಕೇರಳ ರಾಜ್ಯ  ಮತ್ತು ವಿದೇಶಿ ಪ್ರಜೆ ಬಾಗಿಯಾಗಿರುವ ಬಗ್ಗೆ ಮಾಹಿತಿಗಳಿದ್ದುದರಿಂದ ಪ್ರಕರಣವನ್ನು  ವಿಶೇಷ ಪ್ರಕರಣವೆಂದು ಪರಿಗಣಿಸಿದ ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳನ್ನು ಪತ್ತೆಹಚ್ಚಿ ತನಿಖೆ ನಡೆಸುವ ಬಗ್ಗೆ ಡಿಸಿಐಬಿ  ನಿರೀಕ್ಷಕರ ತಂಡಕ್ಕೆ ಸೂಚಿಸಲಾಗಿತ್ತು.

     ಪ್ರಕರಣದ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿದ  ಡಿಸಿಐಬಿ ನಿರೀಕ್ಷಕರವರ ತಂಡ ದಿನಾಂಕ  14-09-2020ರಂದು ಬೆಂಗಳೂರಿನ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು,   ಇಂದು ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ವಿದೇಶಿ ಪ್ರಜೆ  ಒಪೊಂಗ್ ಸ್ಯಾಮ್ಪ್ಸನ್, ತಂದೆ ಒಪೊಂಗ್, 29 ವರ್ಷ ವೆಯಿಟ್ ಲಿಪ್ಟಿಂಗ್ ಸ್ಪೋಟ್ಸ್,  ವಾಸ 24 ನೇ ಎಚಿವರ್ಡ್  ಕಾಲೋನಿ, ಹೊರಮಾವು ಬೆಂಗಳೂರು. ಸ್ವಂತ ಊರು ಎಕ್ರ ರಾಜ್ಯ ಕುಂಸ್ಸೆ ಗ್ರಾಮ ಘಾನ ವೆಸ್ಟ್ ಆಫ್ರೀಕಾ  ಎಂಬಾತನ್ನು ಬೆಂಗಳೂರಿನ ಹೊರಮಾವಿನಲ್ಲಿ ಪತ್ತೆಹಚ್ಚಿ ಬಂಧಿಸಿರುತ್ತಾರೆ.
ಕಾರ್ಯಾಚರಣೆಯಲ್ಲಿ ಡಿಸಿಐಬಿ ಪಿ.ಐ. ಕುಮಾರ ಆರಾಧ್ಯ, ಪಿ.ಎಸ್.ಐ. ವಿ.ಚಂದ್ರಶೇಖರ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದು, ಇವರ ಕಾರ್ಯವನ್ನು ಶ್ಲಾಘಿಸಿ ಬಹುಮಾನ ಘೋಷಿಸಲಾಗಿದೆ.

    ಕೊಡಗು ಜಿಲ್ಲೆಯಲ್ಲಿ ಮಾದಕ ವಸ್ತುಗಳ ಮಾರಾದ, ಸಾಗಣಿಕೆ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದ್ದು, ಈ ಬಗ್ಗೆ ಮಾಹಿತಿ ಇದ್ದಲ್ಲಿ ಸಾರ್ವಜನಿಕರು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ  ಗುಪ್ತವಾಗಿ ಮಾಹಿತಿಯನ್ನು ನೀಡಿ ಮಾದಕ ವಸ್ತುಗಳ ಬಳಕೆ ಮತ್ತು ಮಾರಾಟಕ್ಕೆ ಕಡಿವಾಣ ಹಾಕಲು ಸಹಕರಿಸುವಂತೆ ಕೋರಲಾಗಿದೆ.

No comments

Post a Comment