ದಕ್ಷಿಣ ಕೊಡಗು ಮುಸ್ಲಿಂ ಸಹಕಾರ ಸಂಘದ ಅವ್ಯವಹಾರ ಆರೋಪ : ಗ್ರಾಹಕರ ಹಣ ಹಿಂದಿರುಗಿಸದಿದ್ದರೆ ಉಗ್ರ ಹೋರಾಟ : ಬಿಜೆಪಿ ಮೈನಾರಿಟಿ ಜಿಲ್ಲಾಧ್ಯಕ್ಷ

No comments

ಮಡಿಕೇರಿ (Times Of Coorg) : ದಕ್ಷಿಣ ಕೊಡಗು ಮುಸ್ಲಿಂ ಪತ್ತಿನ ಸಹಕಾರ ಸಂಘದ ಕೇಳಿ ಬರುತ್ತಿರುವ ಅವ್ಯವ್ಯವಹಾರ ಹಾಗೂ ಮುಂಚೂಣಿ ನಿರ್ದೇಶಕರ ನಡುವಳಿಕೆ ದಿನ -ದಿನಕ್ಕೆ ತುಂಬ ಸಂಶಯಕ್ಕೆ ಆಸ್ಪದ ಕೊಡುತ್ತಿದ್ದು ಹಾಗೂ ಗ್ರಾಹಕರು ತಮ್ಮ ಠೇವಣಿ ಹಿಂತಿರುಗಿಸಿ ನೀಡಲು ಅಭ್ಯರ್ಥಿಸಿದಾಗ ಕೇವಲ ಉಡಾಫೆ ಉತ್ತರಗಳನ್ನು ನೀಡುತ್ತಿದ್ದು ಇದು ಖಂಡನೀಯ .
ಇವರ ನಡುವಳಿಕೆ ಹಾಗೂ ಉಡಾಫೆ ಉತ್ತರ ನೋಡುತಿದ್ದರೆ ಬ್ಯಾಂಕಿನ ನಿರ್ದೇಶಕರಲ್ಲಿ ಮುಂಚೂಣಿ ಪಾತ್ರದಾರಿಗಳೇ ಅವ್ಯವ್ಯವಹಾರದಲ್ಲಿ ಭಾಗಿಯಾಗಿದ್ದಾರೆಯೇ ಎಂಬ ಸಂಶಯಕ್ಕೆ ತುಂಬ ಎಡೆಮಾಡಿಕೊಡುತ್ತಿದೆ .

ಅವ್ಯವಹಾರವನ್ನು ಕೂಲಂಕುಷವಾಗಿ ವಿಚಾರಣೆಗೆ ಒಳಪಡಿಸದೆ ಕೇವಲ ಗೋಣಿಕೊಪ್ಪ ಶಾಖೆಯ ಮಾನೇಜರ್ ಹಾಗೂ ಬ್ಯಾಂಕ್ ಸಿಬ್ಬಂದಿಗಳ ಮೇಲೆ ಒತ್ತಡ ಹೇರಿ ಜಾರಿಕೊಳ್ಳುವ ಬುದ್ದಿವಂತಿಕೆ ಹಾಗೂ ಬ್ಯಾಂಕಿಗೆ ಮುಸ್ಲಿಂ ಎಂಬ ನಾಮಾ ಪಾಲಕ ಇದ್ದು ಆದಷ್ಟು ಬೇಗನೆ ಪರಿಹಾರ ಕಂಡುಕೊಳ್ಳದೆ ಸಮಾಜಕ್ಕೆ ಕೆಟ್ಟ ಹೆಸರನ್ನು ತರುವ ತಮ್ಮ ಪ್ರಯತ್ನ್ಗಳು ಶೋಭೆ ತರುವಂತದಲ್ಲ ..
ಗ್ರಾಹಕರು ತಮ್ಮ ಹಣ ಕಳೆದುಕೊಳ್ಳುತ್ತಾರೆಯೇ ಎಂಬ ಭಯದಿಂದ ಹಾಕುವ ಒತ್ತಡಕ್ಕೆ ಮಣಿದು ಬಾಂಕಿನ ಸಿಬ್ಬಂದಿಗಳಿಗೆ ಏನಾದರೂ ಸಂಭವಿಸಿದಲ್ಲಿ ಅದಕ್ಕೆ  ನಿರ್ದೇಶಕರುಗಳೇ ನೇರ ಹೊಣೆ ಆಗಿರುತ್ತಾರೆ .ಕಾರ್ಮಿಕರ ಕೂಲಿ ಹಾಗೂ ಬಡ ವ್ಯಾಪಾರಸ್ಥರ ಪರಿಶ್ರಮ
ದೈನಂದಿನ ಪಿಗ್ಮಿ  ಸಂಗ್ರಹ ಬಾಂಕಿನ ಬಂಡವಾಳ ಆದರೆ ಇವರಿಗೆ ತುಂಬಾ  ಅನ್ಯಾಯ ಆಗಿದೆ ತಮ್ಮ ಮಕ್ಕಳ ಫೀಸ್ ಕಟ್ಟಲು  ಹಣ ಡ್ರಾ ಮಾಡಲು ಗ್ರಾಹಕರು ಬ್ಯಾಂಕಿಗೆ ಹೋದರೆ ಹಲವಾರು ನೆಪ . ತಮ್ಮ ಕಷ್ಟ ಯಾರಿಗೋ ಹೇಳಲಾಗದೆ ಬ್ಯಾಕಿನ ಆಡಳಿತ ಮಂಡಳಿಗೆ ಹಿಡಿ ಶಾಪವನ್ನು ಹಾಕುತ್ತಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು ಎಂದು ಮನವಿ ಮಾಡುತ್ತೇನೆ .
ಹಳೇಯ - ಹೊಸ ನಿರ್ದೇಶಕರುಗಳ ಅವ್ಯವಹಾರ  ಪಾತ್ರವಿದ್ದಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸಬೇಕು ಕಾನೂನಿನ ಚೌಕಟ್ಟಿನಲ್ಲಿ ಶಿಕ್ಷೆಯನ್ನು ಕೊಡಿಸಬೇಕು ಅಂತಹವರ ಆಸ್ತಿಯನ್ನು ಮುಟ್ಟುಗೋಲುಗೊಳಿಸಿ ಠೇವಣಿದಾರರ ಹಣವನ್ನು ಹಿಂದಿರುಗಿಸಬೇಕು .. ಕಳೆದ ಹಲವಾರು ವರ್ಷಗಳಿಂದ ಒಳ್ಳೆಯ ರೀತಿಯಲ್ಲಿ ನಡೆದುಬಂದ ಬಾಂಕಿನ ಆಸ್ತಿಯನ್ನು ತಮ್ಮ  ಸ್ವಾರ್ಥಕ್ಕಾಗಿ ಮಾರಿಕೊಳ್ಳುವ ನೆಪ ಸರಿ ಅಲ್ಲ  ಬ್ಯಾಂಕನ್ನು  ವಿಶ್ವಸನೀಯ ರೀತಿಯಲ್ಲಿ ಮುನ್ನೆಡಸಬೇಕು ಎಂದು ಆಗ್ರಹಿಸಿದ್ದಾರೆ.

ಆದಷ್ಟು ಬೇಗನೆ ಬ್ಯಾಂಕಿನ ಸರ್ವಸದಸ್ಯರನ್ನು ಆಹ್ವಾನಿಸಿ ಆದಷ್ಟು ಬೇಗನೆ ತುರ್ತು ಸಭೆಯನ್ನು  ನಡೆಸಬೇಕು
ನಿರ್ದಿಷ್ಟ ಚರ್ಚೆಯೊಂದಿಗೆ ಗ್ರಾಹಕರ ಸಂಶಯಕ್ಕೆ ಅಂತ್ಯ ಇಡಬೇಕು. ಸಂಧರ್ಭವನ್ನು ಅರ್ಥಮಾಡಿಸಿ ಗ್ರಾಹಕರ ಹಣವನ್ನು  ಹಿಂದುರಿಗಿಸಿ ವಿಶ್ವಾಸಪಡೆಯಬೇಕು ..  ಗ್ರಾಹಕರ ಪರಿಶ್ರಮ ಹಣದ ಜೊತೆ ಚೆಲ್ಲಾಟ ಆಡಿದವರ ಮೇಲೆ  ಶಿಕ್ಷೆಯನ್ನು ಕೊಡಿಸಬೇಕು  ಇಲ್ಲಿದಿದ್ದಲ್ಲಿ ಮುಂದಿನ ದಿನಗಳಲ್ಲಿ ಬ್ಯಾಂಕಿನ ಹಾಗೂ ನಿರ್ದೇಶರುಗಳ ಮನೆಯ ಮುಂದೆ ಉಗ್ರ ಹೋರಾಟದ ಜೊತೆ ಧರಣಿ ನಡೆಸಲಾಗುತ್ತದೆ ಎಂದು ಕೊಡಗು ಬಿಜೆಪಿ ಜಿಲ್ಲಾ ಮೈನಾರಿಟಿ ಅಧ್ಯಕ್ಷ ಹಕೀಮ್ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

No comments

Post a Comment