*ಸೋಮವಾರಪೇಟೆ (Times Of Coorg)* : ಕೊಡಗು ಜಿಲ್ಲೆಯಲ್ಲಿ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ನೆನ್ನೆ ಸುರಿದ ಭಾರಿ ಮಳೆಗೆ ಸೋಮವಾರಪೇಟೆ ಪಟ್ಟಣ ಸಮೀಪದ ಕಲ್ಕಂದೂರು ಗ್ರಾಮದ ಬಾಣೆ ನಿವಾಸಿ ಕೆ.ಹೆಚ್ ಅಬ್ಬಾಸ್ ಎಂಬುವವರ ಮನೆಯ ಭಾಗಶ: ಕುಸಿದು ಬಿದ್ದಿದೆ. ಮನೆಯಲಿದ್ದ ಪಿಠೋಪಕರಣಗಳಿಗೆ ಹಾನಿಯಾಗಿದ್ದು, ಯಾವುದೇ ಜೀವಹಾನಿ ಸಂಭವಿಸಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಪರಿಹಾರ ದೊರಕಿಸಿಕೊಡಬೇಕಾಗಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.










No comments
Post a Comment