ನಾಪೋಕ್ಲು - ಬಂದ್ ಗೆ ನೀರಸ ಪ್ರತಿಕ್ರಿಯೆ : ಎಂದಿನಂತೆ ತೆರೆದ ಅಂಗಡಿ ಮುಂಗಟ್ಟುಗಳು
ವರದಿ: ಹಾರಿಸ್ ನಾಪೋಕ್ಲು
ನಾಪೋಕ್ಲು (Times Of Coorg) : ಕೇಂದ್ರ ಸಕಾ೯ರದ ಕಾಮಿ೯ಕ ವಿರೋಧಿ ನೀತಿ ಮತ್ತು ರೈತ ವಿರೋಧಿ ನೀತಿ ಖಂಡಿಸಿ ರಾಜ್ಯ ಸಕಾ೯ರದ ಜನವಿರೋಧಿ ಕ್ರಮಗಳನ್ನು ಖಂಡಿಸಿ, ಸೋಮವಾರ ರಾಜ್ಯವ್ಯಾಪಿ ರೈತ ಸಂಘ ಮತ್ತು ಕಾರ್ಮಿಕ ಸಂಘಟನೆಗಳು ಮತ್ತು ಇತರ ಹಲವು ಸಂಘಟನೆಗಳು ಕರೆ ನೀಡಿರುವ ಈ ದಿನದ ಬಂದ್ ಗೆ ನಾಪೋಕ್ಲುವಿನಲ್ಲಿ ಯಾವುದೇ ಬೆಂಬಲ ಕಂಡುಬಂದಿಲ್ಲ.
ಇಲ್ಲಿನ ಎಲ್ಲಾ ಅಂಗಡಿ ಮುಂಗಟ್ಟುಗಳು ಓಪನ್ ಮಾಡಿದ್ದು ವಾಹನ ಸಂಚಾರ ಮತ್ತು ವಾರದ ಸಂತೆ ವ್ಯಾಪಾರ ಎಂದಿನಂತೆ ಇತ್ತು.
ಬಂದ್ ಕರೆಕೊಟ್ಟ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ನಾಪೋಕ್ಲು ಪೊಲೀಸರು ಪಟ್ಟಣದಾದ್ಯಂತ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿತ್ತು.






No comments
Post a Comment