ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ಸಹಕಾರದಲ್ಲಿ ದಾದ ಬಾಯ್ ಪ್ರಾಯೋಜಕತ್ವದ 3ನೇ ಚಾರ್ಟಡ್ ವಿಮಾನ ಇಂದು ದಮ್ಮಾಮ್ ನಿಂದ ಮಂಗಳೂರಿಗೆ
ದಮ್ಮಾಮ್ (Times Of Coorg / ಗಲ್ಫ್ ನ್ಯೂಸ್):-
ದಾದ ಬಾಯ್ ಟ್ರಾವೆಲ್ಸ್ ಪ್ರಯೋಜಕತ್ವದ , ಬ್ಲಡ್ ಡೋನರ್ಸ್ ಸಹಕಾರದೊಂದಿಗೆ ದಮ್ಮಾಮ್'ನಿಂದ ತಾಯ್ನಾಡಿಗೆ ಮಧ್ಯಾಹ್ನ 1 ಘಂಟೆಗೆ ಪ್ರಯಾಣ ಬೆಳೆಸಿದೆ...
ರೋಗಿಗಳ ಪಾಲಿಗೆ ಆಶಾಕಿರಣವಾಗಿದ್ದ ಬ್ಲಡ್ ಡೋನರ್ಸ್ ಮಂಗಳೂರು ಸದ್ಯ ವಿದೇಶದಲ್ಲಿ ಬಾರೀ ಸದ್ದು ಮಾಡುತಿದೆ.ಅದು ರಕ್ತದಾನ ಕ್ಯಾಂಪ್ ಇರಲಿ, ಅನಿವಾಸಿಗಳನ್ನು ಊರಿಗೆ ಕಳುಹಿಸುವ ಕೆಲಸವೂ ಸೇರಿ ಕರಾವಳಿಗರ ಮನೆ ಮಾತಾಗಿದೆ.
ಎಲ್ಲಾ ಪ್ರಯಾಣಿಕರಿಗೆ ಅತ್ಯಾವಶ್ಯಕ ರಿಪ್ರೇಶಮೆಂಟ್ ಕಿಟ್'ನ್ನು ಫೈಝಲ್ ಹುತೈಬಿ ಮಾಲಕರಾದ ಜನಾಬ್ ನಿಸಾರ್ ಅಹ್ಮದ್"ರವರ ಸಹಕಾರದಲ್ಲಿ ನೀಡಲಾಯಿತು.. ದಮ್ಮಾಮ್ ವಿಮಾನ ನಿಲ್ದಾಣದಿಂದ BDM ಕಾರ್ಯನಿರ್ವಾಹಕರಾದ ಫರ್ಝಾನ್ ಸಿದ್ದಕಟ್ಟೆ,ಮುಝಮ್ಮಿಲ್, ಫಯಾಝ್, ನೌಫಲ್ ಬಜ್ಪೆ,ಇರ್ಶಾದ್ ಉಚ್ಚಿಲ,ಫಯಾಝ್ ಮೊಂಟುಗೋಳಿ"ಯವರು ಸಕಲ ವ್ಯವಸ್ಥೆ ಸಿದ್ದಪಡಿಸಿ ಪ್ರಯಾಣಿಕರನ್ನು ಬೀಳ್ಕೊಟ್ಟರು.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಬರಮಾಡಿಕೊಳ್ಳಲು BDM ಸದಸ್ಯರು
ಎಲ್ಲಾ ರೀತಿಯ ಪೂರ್ವ ಸಿದ್ಧತೆಗಳೊಂದಿಗೆ ಯಾತ್ರಿಕರನ್ನು ಬರಮಾಡಿಕೊಳ್ಳಲು ತಯಾರಿ ಮಾಡಿಕೊಂಡಿದ್ದಾರೆ.
ಮಾಧ್ಯಮ ವಿಭಾಗ:ಬ್ಲಡ್ ಡೋನರ್ಸ್ ಮಂಗಳೂರು(ರಿ)



No comments
Post a Comment