ಕೊಡಗು ಜಿಲ್ಲೆಯಲ್ಲಿ ಇಂದು 25 ಹೊಸ ಕೋವಿಡ್ ಪ್ರಕರಣಗಳು ಧೃಢ
ಮಡಿಕೇರಿ (Times Of Coorg):-ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ 8:30 ರ ವೇಳೆಗೆ 4 ಮತ್ತು ಮಧ್ಯಾಹ್ನ 2 ಗಂಟೆ ವೇಳೆಗೆ 21 ಹೊಸ ಕೋವಿಡ್-19 ಪ್ರಕರಣಗಳು ಸೇರಿ ಒಟ್ಟು 25 ಕೋವಿಡ್ ಪ್ರಕರಣ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಮಡಿಕೇರಿಯ ಆಜಾದ್ ನಗರದ 75 ಮತ್ತು 33 ವರ್ಷದ ಪುರುಷ,27 ವರ್ಷದ ಮಹಿಳೆ. ವಿರಾಜಪೇಟೆಯ ಬೆಕ್ಕೆಸೊಡ್ಲೂರುವಿನ 45 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ಕುಶಾಲನಗರದ ವಾಸವಿ ಮಹಲ್ ಬಳಿಯ 47 ವರ್ಷದ ಮಹಿಳೆ. ಕುಶಾಲನಗರದ ಎಚ್‍ಆರ್‍ಪಿ ಕಾಲೋನಿಯ 45 ವರ್ಷದ ಪುರುಷ. ಕುಶಾಲನಗರದ ಮುಳ್ಳುಸೋಗೆಯ ಕುವೆಂಪು ಬಡಾವಣೆಯ 80 ವರ್ಷದ ಪುರುಷ. ಸೋಮವಾರಪೇಟೆ ಗೌಡಹಳ್ಳಿಯ ದೊಡ್ಡಮಲ್ತೆಯ 23 ವರ್ಷದ ಪುರುಷ. ಸೋಮವಾರಪೇಟೆಯ ರೇಂಜರ್ ಬ್ಲಾಕಿನ 26 ಮತ್ತು 24 ವರ್ಷದ ಪುರುಷ.
ಸೋಮವಾರಪೇಟೆಯ ಪೋಲೀಸ್ ವಸತಿ ಗೃಹದ 27 ವರ್ಷದ ಪುರುಷ. ಸೋಮವಾರಪೇಟೆಯ ಚೆಟ್ಟಳ್ಳಿ ಬಳಿಯ ಚೆಟ್ಟಳ್ಳಿ ಫಾರಂನ 24 ವರ್ಷದ ಮಹಿಳೆ, 2 ಮತ್ತು 3 ವರ್ಷದ ಬಾಲಕಿಯರು. ನೆಲ್ಯಹುದಿಕೇರಿಯ 28 ವರ್ಷದ ಪುರುಷ ಮತ್ತು 49 ವರ್ಷದ ಮಹಿಳೆ. ಸೋಮವಾರಪೇಟೆ ಶನಿವಾರಸಂತೆಯ ಹುಲುಸೆ ಮೂಡರಹಳ್ಳಿಯ 49 ವರ್ಷದ ಪುರುಷ. ಸೋಮವಾರಪೇಟೆಯ ನಾರೂರು ಗ್ರಾಮದ 55 ವರ್ಷದ ಪುರುಷ. ಸೋಮವಾರಪೇಟೆ ತೊರೆನೂರುವಿನ 24 ವರ್ಷದ ಪುರುಷ. ಕುಶಾಲನಗರ ಹೆಬ್ಬಾಲೆಯ ಬಾರ್ ರಸ್ತೆಯ 17 ವರ್ಷದ ಮಹಿಳೆ. ಮಡಿಕೇರಿಯ ಸಂಪಾಜೆಯಲ್ಲಿನ 41 ವರ್ಷದ ಪುರುಷ. ಮಡಿಕೇರಿ ಮಹದೇವಪೇಟೆಯ 36 ವರ್ಷದ ಪುರುಷ.
ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮುಖಾಂತರ ಮಡಿಕೇರಿ ದಾಸವಾಳ ರಸ್ತೆಯ 51 ವರ್ಷದ ಮಹಿಳೆ. ಮಹದೇವಪೇಟೆಯ ಮಖಾನ್ ರಸ್ತೆಯ 48 ಮತ್ತು 21 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ 15 ಹೊಸದಾಗಿ ಕಂಟೈನ್‍ಮೆಂಟ್ ವಲಯಗಳನ್ನು ತೆರೆಯಲಾಗಿದೆ. ಮಜ್ಜಿದ್ ಹತ್ತಿರ ಆಜಾದ್ ನಗರ ಮಡಿಕೇರಿ ಮತ್ತು ಬೆಕ್ಕೆಸೊಡ್ಲೂರು ಕ್ಲಬ್ ಹತ್ತಿರ, ವಿರಾಜಪೇಟೆ. ವಾಸವು ಮಹಲ್ ಎದುರು ಪೊಲೀಸ್ ಮೈದಾನ, ಕುಶಾಲನಗರ. ಎಚ್‍ಆರ್‍ಪಿ ಕಾಲೋನಿ, ಕುಶಾಲನಗರ. ಕುವೆಂಪು ಬಡಾವಣೆ, ಮುಳ್ಳುಸೋಗೆ, ಕುಶಾಲನಗರ. ದೊಡ್ಡಮಳ್ತೆ ಗೌಡಳ್ಳಿ, ಸೋಮವಾರಪೇಟೆ. ಪೊಲೀಸ್ ಕ್ವಾರ್ಟಸ್, ಸೋಮವಾರಪೇಟೆ. ಚೆಟ್ಟಳ್ಳಿ ಫಾರ್ಮ್ ಚೆಟ್ಟಳ್ಳಿ ಸೋಮವಾರಪೇಟೆ. ಮೂದರವಳ್ಳಿ ಅಂಚೆ, ಹುಲುಸೆ, ಶನಿವಾರಸಂತೆ, ಸೋಮವಾರಪೇಟೆ. ನರೂರು ಗ್ರಾಮ, ಚಂಗದಹಳ್ಳಿ ಅಂಚೆ, ಸೋಮವಾರಪೇಟೆ. ಗ್ರಾಮ ಪಂಚಾಯಿತಿ ಎದುರು, ತೊರೆನೂರು, ಸೋಮವಾರಪೇಟೆ. ಬಾರ್ ರಸ್ತೆ ಹೆಬ್ಬಾಲೆ, ಕುಶಾಲನಗರ. ಮುಖ್ಯರಸ್ತೆ ಸಂಪಾಜೆ, ಮಡಿಕೇರಿ. ಕಾಫಿ ಬೋರ್ಡ್ ಹತ್ತಿರ ದಾಸವಾಳ ರಸ್ತೆ, ಮಡಿಕೇರಿ. ಯಮಹ ಶೋ ರೂಂ ಹತ್ತಿರ ಮಕ್ಕನ್ ಸ್ಟ್ರೀಟ್, ಮಹದೇವಪೇಟೆ.
ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 585 ಆಗಿದ್ದು, 342 ಮಂದಿ ಗುಣಮುಖರಾಗಿದ್ದಾರೆ. 233 ಸಕ್ರಿಯ ಪ್ರಕರಣಗಳಿದ್ದು, 10 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 157 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

No comments
Post a Comment