SSF ಜಿಲ್ಲಾ ಸಮಿತಿಯಿಂದ SYS ಕೊಡಗು ಸಾಂತ್ವನ ವಿಭಾಗಕ್ಕೆ ನಗದು ಹಸ್ತಾಂತರ
ಮಡಿಕೇರಿ (Times Of Coorg) : ಜಿಲ್ಲೆಯ ಹಲವು ಕಡೆಗಳಲ್ಲಿ ಕೋವಿಡ್-19 ಸಂಕಷ್ಟದಲ್ಲಿರುವವರಿಗೆ ಸಹಾಯ ಹಸ್ತಗಳನ್ನು ಚಾಚಿ ಕಾರ್ಯಾಚರಿಸುತ್ತಿರುವ ಕೊಡಗು ಸಾಂತ್ವನ ವಿಭಾಗಕ್ಕೆ ಜಿಲ್ಲೆಯ SSF ಕಾರ್ಯಕರ್ತರಿಂದ ಜಿಲ್ಲಾ ಹೆಲ್ಪ್ ಡೆಸ್ಕ್ ಸಂಗ್ರಹಿಸಿದ ಮೊತ್ತವನ್ನು ಕೊಡಗು ಜಿಲ್ಲಾ ಸಮಿತಿಯ ನಾಯಕರು ಸಾಂತ್ವನ ವಿಭಾಗ ಜಿಲ್ಲಾ ಚೇರ್ಮನ್ ಸಯ್ಯಿದ್ ಇಲ್ಯಾಸ್ ತಙ್ಙಳ್'ರವರಿಗೆ ಹಸ್ತಾಂತರಿಸಿದರು.
ಮರ್ಕಝುಲ್ ಹಿದಾಯ ಕೊಟ್ಟಮುಡಿಯಲ್ಲಿ ನಡೆದ
ಕಾರ್ಯಕ್ರಮದಲ್ಲಿ SYS ಜಿಲ್ಲಾಧ್ಯಕ್ಷರಾದ ಅಬ್ದುಲ್ಲಾ ಸಖಾಫಿ ಕೊಳಕೇರಿ, ಮರ್ಕಝ್ ಮ್ಯಾನೇಜರ್ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ, SYS ಇಸಾಬ ಕನ್ವೀನರ್ ಅಬೂಬಕರ್ ಕಡಂಗ, SSF ಜಿಲ್ಲಾಧ್ಯಕ್ಷರಾದ ಅಬ್ದುಲ್ ಅಝೀಝ್ ಸಖಾಫಿ ಕೊಡ್ಲಿಪೇಟೆ, ಉಪಾಧ್ಯಕ್ಷರಾದ ಶಾಫಿ ಸಅದಿ ಸೋಮವಾರಪೇಟೆ, ಶರೀಫ್ ಹೊಸತೋಟ, ಅಶ್ಕರ್ ಸಖಾಫಿ, ರಫೀಖ್ ಲತೀಫಿ, ಝುಬೈರ್ ಸಅದಿ, ಹಂಝ ರಹ್ಮಾನಿ, ರಾಶಿದ್ ಮಾಲ್ದಾರೆ ಹಾಜರಿದ್ದರು.


No comments
Post a Comment