ಅಮ್ಮತ್ತಿ:- ಎನ್.ಸಿ.ಟಿ ಟೂರ್ಸ್ & ಟ್ರಾವೆಲ್ ವತಿಯಿಂದ ಏರ್ಪಡಿಸಲಾಗಿದ್ದ ವಿಶೇಷ ವಿಮಾನದಲ್ಲಿ ಸೌದಿ ಅರೇಬಿಯಾದ ರಿಯಾದಿನಿಂದ ಬೆಂಗಳೂರಿಗೆ ನೂರಎಪ್ಪತೈದು ಕನ್ನಡಿಗರು ಇಂದು ತಾಯ್ನಾಡಿಗೆ ಮರಳಿದರು. ಇಪ್ಪತ್ತು ಕೊಡಗಿನವರು ಒಳಗೊಂಡ ತಂಡವು ಇಂದು ಬೆಂಗಳೂರು ತಲುಪಿದ್ದು ಕ್ವಾರೆಂಟೈನ್ ಮುಗಿಸಿ ತಮ್ಮ ಊರಿಗೆ ಹಿಂದಿರುವರು ಎಂದು ಎನ್.ಸಿ.ಟಿ ಟೂರ್ಸ್ & ಟ್ರಾವೆಲ್ಸ್‌ನ ಮಾಲಿಕರಾದ ಅಕ್ಕಾಳತಂಡ ಮೊಯ್ದು ಅವರು ಪತ್ರಿಕಾ ಹೇಳಿಕೆ ನೀಡಿರುತ್ತಾರೆ.
ಲಾಕ್‌ಡೌನ್ ಮುಂದುವರೆಯುತ್ತಿರುವ ಈ ಸಂಧರ್ಭದಲ್ಲಿ ಅನಿವಾಸಿ ಭಾರತೀಯರು ಕೆಲಸ ಕಳೆದುಕೊಂಡು ತಾಯ್ನಾಡಿಗೆ ವಾಪಸಾಗುವ ಚಿಂತೆಯಲ್ಲಿದ್ದಾರೆ , ಅಂತವರಿಗೆ ಎನ್.ಸಿ.ಟಿ ವಿಶೇಷ ವಿಮಾನವೊಂದನ್ನು ಏರ್ಪಡಿಸಿದೆ ಎಂದು ಅವರು ತಿಳಿಸಿದರು.
No comments
Post a Comment