ಕೊಡ್ಲಿಪೇಟೆ ಹೋಬಳಿಯ ಸೀಲ್ ಡೌನ್ ಪ್ರದೇಶಗಳಿಗೆ ತಹಶೀಲ್ದಾರ್ ಭೇಟಿ ಪರಿಶೀಲನೆ
ವರದಿ : ಹನೀಫ್ ಕೊಡ್ಲಿಪೇಟೆ
ಕೊಡ್ಲಿಪೇಟೆ (Times Of Coorg) : ಕೊಡ್ಲಿಪೇಟೆ ಹೋಬಳಿಯಲ್ಲಿ ಸೀಲ್ ಡೌನ್ ಆಗಿರುವ ಮೂರು ಏರಿಯಾಗಳಿಗೆ ಸೋಮವಾರಪೇಟೆ ತಾಲೂಕು ದಂಡಾಧಿಕಾರಿಗಳಾದ ಗೊವಿಂದ್ ರಾಜ್ ರವರು ಬೇಟಿ ನೀಡಿ ಪರಿಶೀಲಿಸಿ ಬೆಸೂರು ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕಟ್ಟೆಪುರ , ಮಲಗನಹಳ್ಳಿ , ಗ್ರಾಮ ಹಾಗೂ ಬ್ಯಾಡಗೊಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಊರುಗುತ್ತಿ ಗ್ರಾಮಗಳಲ್ಲಿ ಮೂವರು ವ್ಯಕ್ತಿಗಳಿಗೆ ಸೊಂಕು ದ್ರಡಪಟ್ಟ ಹಿನ್ನಲೆಯಲ್ಲಿ ಈ ಮೂರು ಏರಿಯಾಗಳನ್ನು ಕಂಟ್ಯೆನ್ ಮೆಂಟ್ ಝೊನ್ ಎಂದು ಘೋಷಣೆ ಮಾಡಿದೆ.
ಟೈಮ್ಸ್ ಆಫ್ ಕೂರ್ಗ್ ಅಂತರ್ಜಾಲ ಸುದ್ದಿವಾಹಿನಿಯೊಂದಿಗೆ ಮಾತನಾಡುತ್ತಾ
ಕಂಟ್ಯೆನ್ ಮೆಂಟ್ ಏರಿಯಾ ನಿವಾಸಿಗಳು ಮನೆಯಿಂದ ಹೊರಬರದೆ ಮಾಸ್ಕ್ ಹಾಗೂ ಸ್ಯಾನಿಟ್ಯೆಸ್ ಉಪಯೋಗಿಸುತ್ತಾ ಜಾಗ್ರತೆ ವಹಿಸಬೇಕು. ಸೋಂಕಿತರ ಸಂಪರ್ಕಿತರು ಸ್ವಯಂ ಪ್ರೇರಿತರಾಗಿ ಕೋವಿಡ್ ಪರೀಕ್ಷೆಗೊಳಪಡಬೇಕು.
ಈ ಪ್ರದೇಶಗಳು 14 ದಿನಗಳ ಕಾಲ ಕಂಟೈಮೆಂಟ್ ಝೋನ್ ಆಗಿರುತ್ತದೆ. ಈ ಅವಧಿಯಲ್ಲಿ ಸದರಿ ಏರಿಯಾಗಳಲ್ಲಿ ಇನ್ನೊಬ್ಬರಿಗೆ ಸೊಂಕು ಧೃಡಪಟ್ಟರೆ ಕ್ಲಷ್ಟರ್ ಝೋನ್ ಎಂದು ಘೋಷಿಸಿ ಸಂಪೂರ್ಣ ಗ್ರಾಮವನ್ನು ಸೀಲ್ ಡೌನ್ ಮಾಡಲಾಗುವುದೆಂದರು.
"ಕೊವಿಡ್ ರೋಗಿಗಳನ್ನು ಮಡಿಕೇರಿ ಕೊವಿಡ್ ಅಸ್ಪತ್ರೆಗೆ ಕರೆದುಕೊಂಡು ಹೊಗುತ್ತಿದ್ದೆವು. ನಾಳೆಯಿಂದ ಕುಶಾಲನಗರ ಸಮೀಪ ಕೂಡಿಗೆಯಲ್ಲಿರುವ ಮೋರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕೊವಿಡ್ ಹೆಲ್ತ್ ಕೇರ್ ಆರಂಬಿಸುತ್ತಿದ್ದು ಸೋಮವಾರಪೇಟೆ ತಾಲೂಕಿನ ಜನರಿಗೆ ಇದರಿಂದ ಅನುಕೂಲವಾಗಲಿದೆ ಎಂದು ಮಾಹಿತಿ ನೀಡಿದರು.
ಇವತ್ತು 36 ವರ್ಷದ ಕೆ.ಎಸ್.ಅರ್.ಟಿ.ಸಿ. ನೌಕರರೊಬ್ವರಿಗೆ ಸೊಂಕು ಧೃಢಪಟ್ಟ ಮಲಗನಹಳ್ಲಿ ಗ್ರಾಮಕ್ಕೆ ತಹಶೀಲ್ದಾರರು ಭೇಟಿ ನೀಡಿದಾಗ ಸೊಂಕಿತ ವ್ಯಕ್ತಿ ಊರೆಲ್ಲಾ ಓಡಾಡಿರುವುದರಿಂದ ಸ್ಯಾನಿಟ್ಯೆಸ್ ಮಾಡುವಂತೆ ಸಾರ್ವಜನಿಕರು ಕೇಳಿಕೊಂಡಾಗ ಸ್ಥಳದಲ್ಲಿಯೇ ಇದ್ದ ಬೆಸೂರು ಪಂಚಾಯತಿ ಪಿ.ಡಿ.ಒ. ರವರಿಗೆ ಸ್ಯಾನಿಟ್ಯೆಸ್ ಮಾಡುವಂತೆ ಸೂಚಿಸಿದರು.
ಕೊಡ್ಲಿಪೇಟೆ ಹೋಬಳಿ ಕೊವಿಡ್ ನೊಡಲ್ ಆದಿಕಾರ ಗಳು ಕೊಡ್ಲಿಪೇಟೆ ,ಬ್ಯಾಡಗೊಟ್ಟ , ಬೆಸೂರು ಗ್ರಾಮ ಪಂಚಾಯತಿ ಆಡಳಿತಾದಿಕಾರಿಗಳಾದ ಲಿಂಗರಾಜಪ್ಪ ರವರ ಮೇಲುಸ್ತುವಾರಿ ಯಲ್ಲಿ ಕರೋನಾ ನಿಯಂತ್ರಣ ಕಾರ್ಯಚಟುವಟಿಕೆಗಳು ನಡೆಯಲಿದೆ ಎಂದರು.
ಕೊಡ್ಲಿಪೇಟೆ ಹೋಬಳಿಯಲ್ಲಿ ಸತತವಾಗಿ ಮೂರು ದಿನಗಳಲ್ಲಿ ಮೂರು ಪ್ರಕರಣ ಧೃಢಪಟ್ಟಿದೆ .
ಶನಿವಾರ ಬೆಸೂರು ಪಂಚಾಯತಿ ವ್ಯಾಪ್ತಿಯ ಕಟ್ಟೆಪುರ ಗ್ರಾಮದ 30 ವರ್ಷದ ಬ್ಯಾಂಕ್ ಉದ್ಯೋಗಿ ಯಾದ ಪುರುಷರೊಬ್ಬರಿಗೆ ಸೋಂಕು ಧೃಡಪಟ್ಟ ಹಿನ್ನಲೆಯಲ್ಲಿ ಅವರ ಮನೆಯಿರುವ ಏರಿಯಾ ಮಾತ್ರ ಸೀಲ್ ಡೌನ್ ಮಾಡಲಾಗಿದೆ.
ಭಾನುವಾರ ಬ್ಯಾಡಗೊಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಊರುಗುತ್ತಿ ಗ್ರಾಮದ ಮಹಾರಾಷ್ಟ್ರದಲ್ಲಿ ಸೇವೆಯಲ್ಲಿ ರುವ ಯೋಧರ ತಾಯಿ 63 ವರ್ಷದ ಮಹಿಳೆಯೊಬ್ಬರಿಗೆ ಸೊಂಕು ಧೃಡಪಟ್ಟಿದ್ದು ಅವರ ಮನೆಯಿರುವ ಒಳ ರಸ್ತೆಯನ್ನು ಮಾತ್ತ ಸೀಲ್ ಡೌನ್ ಮಾಡಲಾಗಿದೆ.
ಇವತ್ತು ಬೆಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ನಿರುಗುಂದ ಸಮೀಪದ ಮಲಗನ ಹಳ್ಳಿ ಗ್ರಾಮದ ಕೆ.ಎಸ್.ಆರ್.ಟಿಸಿ. ನೌಕರರಾದ 30 ವರ್ಷದ ಯುವಕನಿಗೆ ಸೊಂಕು ಧೃಡಪಟ್ಟಿತ್ತು. ಇವರ ಊರೆಲ್ಲಾ ಓಡಾಡಿರುವುದರಿಂದ ಅವರ ಮನೆಯಿರುವ ಏರಿಯಾ ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ.
ಕೋವಿಡ್ ನೋಡೆಲ್ ಅಧಿಕಾರಿಗಳಾದ ಲಿಂಗರಾಜಪ್ಪ ,
ಉಪತಹಶಿಲ್ದಾರ್ ಪುರುಷೊತ್ತಮ, ಕಂದಾಯ ಪರಿವೀಕ್ಷಕರಾದ ಮನು ,ಗ್ರಾಮ ನಿರೀಕ್ಷಕರಾದ ಪ್ರಕೃತಿ ,ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಹರೀಶ್,ಕಂದಾಯ ಕಚೇರಿ ಸಿಬ್ಬಂದಿ ಬಿಮೇಶ್ , ಹಾಗೂ ಆರೋಗ್ಯ ಇಲಾಖಾಧಿಕಾರಿಗಳು ಹಾಜರಿದ್ದರು.


No comments
Post a Comment