ಕೊಡ್ಲಿಪೇಟೆ : ಅನಧಿಕೃತ ಸಂತೆ ವ್ಯಾಪಾರ ತೆರವುಗೊಳಿಸಿದ ಅಧಿಕಾರಿಗಳು
ವರದಿ : ಹನೀಪ್ ಕೊಡ್ಲಿಪೇಟೆ
ಕೊಡ್ಲಿಪೇಟೆ (Times Of Coorg) : ಕೊಡ್ಲಿಪೇಟೆ ಯಲ್ಲಿ ಪ್ರತಿ ಭಾನುವಾರ ನಡೆಯುತ್ತಿದ್ದಂತಹ ಸಂತೆಯನ್ನು ಕೋವಿಡ್ ಭೀತಿ ಹಿನ್ನಲೆಯಲ್ಲಿ ಜಿಲ್ಲಾಡಳಿತ ರದ್ದುಪಡಿಸಿದೆ, ಇವತ್ತು ಸೋಮವಾರ ಸಂತೆ ಮಾರುಕಟ್ಟೆಗೆ ತೆರಳುವ ರಸ್ತೆಯ ಎರಡು ಬದಿಯಲ್ಲಿ ಸಂತೆಯ ರೀತಿಯಲ್ಲಿ ಹಲವಾರು ಅಂಗಡಿಗಳನ್ನು ಹಾಕಿ ಯಾವುದೇ ಸಾಮಾಜಿಕ ಅಂತರ ಕಾಪಾಡದೆ ವ್ಯಾಪಾರ ಮಾಡುತ್ತಿದ್ದದ್ದನ್ನು ಗಮನಿಸಿ ಕೊಡ್ಲಿಪೇಟೆ ಗ್ರಾಮ ಪಂಚಾಯತಿಯ ಅಧಿಕಾರಿಗಳು ಮೈಕ್ ಮೂಲಕ ಪ್ರಕಟಣೆ ಮಾಡಿ ತೆರವುಗೊಳಿಸುವಂಥತೆ ಹಾಗೂ ಗ್ರಾಮ ಪಂಚಾಯತಿ ಯಿಂದ ಲೈಸನ್ಸ್ ಪಡೆದು ನಿಗದಿತ ಸ್ಥಳದಲ್ಲಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ವ್ಯಾಪಾರ ಮಾಡುವಂತೆ ನಿರ್ದೆಶಿಸಿದರು. ವ್ಯಾಪಾರಸ್ಥರು ಯಾರು ಸ್ಪಂದಿಸದಿದ್ದರಿಂದ ,
ಗ್ರಾಮ ಪಂಚಾಯತಿ ಆಡಳಿತಾಧಿಕಾರಿ ಲಿಂಗರಾಜಪ್ಪ ,
ಪಂಚಾಯತಿ ಅಭಿವೃದ್ಧಿ ಆದಿಕಾರ ಹರೀಶ್ ,
ಸಿಬ್ಬಂದಿ ದೀಪು , ಪೋಲಿಸ್ ಆದಿಕಾರಿಗಳಾದ ಡಿಂಪಲ್ ,ಪ್ರಶಾಂತ್ ,ವಿನಯ್ ರವರು ಸ್ಥಳಕ್ಕೆ ಬಂದು ತೆರವುಗೊಳಿಸಿದರು. ಬಸವೇಶ್ವರ ದೇವಸ್ಥಾನ ಸಮೀಪದಲ್ಲಿ ಹೊರ ಜಿಲ್ಲೆಯ ತರಕಾರಿ ವ್ಯಾಪಾರಸ್ಥರು ಯಾವುದೇ ಅನುಮತಿ ಪಡೆಯದೇ ವಾಹನದಲ್ಲಿ ವ್ಯಾಪರ ಮಾಡುತ್ತಿದ್ದರು. ಹೊರ ಜಿಲ್ಲೆಯವರು ಇಲ್ಲಿ ಬಂದು ವ್ಯಾಪಾರ ಮಾಡಬಾರದೆಂದು ಸಾರ್ವಜನಿಕರು ಸ್ಥಳಿಯ ವ್ಯಾಪಾರಸ್ಥರು ಆಕ್ಷೇಪ ವ್ಯಕ್ತಪಡಿಸಿದರು.
ಪಂಚಾಯಿತಿ ಅಧಿಕಾರಿಗಳು ವ್ಯಾಪಾರ ಮಾಡಬಾರದೆಂದು ಸೂಚಿಸಿದರು. ಸಹ ಇವರು ಮಾತ್ರ ಸಂಜೆಯವರೆಗೂ ವ್ಯಾಪಾರ ಮಾಡಿದ್ದು ಮಾತ್ರ ಚರ್ಚೆಗೆ ಗ್ರಾಸವಾಗಿದೆ.
ಕೋವಿಡ್ ಸೊಂಕು ಹರಡುವ ಹಿನ್ನಲೆಯಲ್ಲಿ ಹೊರ ಜಿಲ್ಲೆಯ ವ್ಯಾಪರಸ್ಥರಿಗೆ ಗ್ರಾಮ ಪಂಚಾಯತಿ ಅನುಮತಿ ನೀಡಬಾರದೆಂದು ಛೆಂಬರ್ ಆಪ್ ಕಾಮರ್ಸ್ ಸ್ಥಾನಿಯ ಸಮಿತಿ ಅಧ್ಯಕ್ಷರಾದ ಯತೀಶ್ ಕುಮಾರ್ ರವರು ಆಗ್ರಹಿಸಿದ್ದಾರೆ.


No comments
Post a Comment