ಕೊಡಗು ಜಿಲ್ಲೆಯಲ್ಲಿ ಇಂದು 33 ಕೋವಿಡ್ ಸೋಂಕು ಪ್ರಕರಣಗಳು ಧೃಢ : ಸೋಂಕಿತರ ಸಂಖ್ಯೆ 217ಕ್ಕೆ ಏರಿಕೆ

No comments

       ಮಡಿಕೇರಿ (Times Of Coorg):-ಜಿಲ್ಲೆಯಲ್ಲಿ ಇಂದು ಹೊಸದಾಗಿ 33 ಕೋವಿಡ್ ಸೋಂಕು ಪ್ರಕರಣಗಳು ವರದಿಯಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.     

       ಮಡಿಕೇರಿ ಪಟ್ಟಣದ ಐ.ಟಿ.ಐ ಜಂಕ್ಷನ್ ಬಳಿ ವಾಸವಿರುವ, ಬಾಗಲಕೋಟೆ ಪ್ರಯಾಣದ ಇತಿಹಾಸ ಇರುವ ಪೆÇಲೀಸ್ ಇಲಾಖೆಯ 32 ವರ್ಷದ ಪುರುಷ ಸಿಬ್ಬಂದಿಯೊಬ್ಬರಿಗೆ  ಸೋಂಕು ದೃಢಪಟ್ಟಿದೆ. ವಿರಾಜಪೇಟೆ ತಾಲ್ಲೂಕು, ಗೋಣಿಕೊಪ್ಪದ ಹೆಚ್.ಸಿ.ಪುರದಲ್ಲಿ ಈ ಹಿಂದೆ ಸೋಂಕು ದೃಢಪಟ್ಟ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 37 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ.  ವಿರಾಜಪೇಟೆ ತಾಲ್ಲೂಕು, ಕರಡಿಗೋಡು ನಿವಾಸಿ ಕೇರಳದ ಕಣ್ಣೂರು ಪ್ರಯಾಣದ ಇತಿಹಾಸವಿರುವ 56 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ. ಸೋಮವಾರಪೇಟೆ ತಾಲ್ಲೂಕು, ನೆಲ್ಲಿಹುದಿಕೇರಿ, ಮಾದಪ್ಪ ಕಾಲೋನಿ ನಿವಾಸಿ 58 ವರ್ಷದ ಮಹಿಳೆ ಆರೋಗ್ಯ ಕಾರ್ಯಕರ್ತರೊಬ್ಬರಿಗೆ ಸೋಂಕು ದೃಢಪಟ್ಟಿದೆ. ಪಿರಿಯಾಪಟ್ಟಣ ತಾಲ್ಲೂಕು, ಚೆನ್ನಕಲ್ ಕೊಪ್ಪ ಗ್ರಾಮದ ನಿವಾಸಿಯಾದ ಜ್ವರ ಲಕ್ಷಣಗಳಿದ್ದ 15 ವರ್ಷದ ಹುಡುಗನಿಗೆ ಸೋಂಕು ದೃಢಪಟ್ಟಿದೆ. ಸೋಮವಾರಪೇಟೆ ತಾಲ್ಲೂಕು, ಕುಶಾಲನಗರದ ದಂಡಿನಪೇಟೆಯ (ಕುಸುಮ ಸ್ಟೋರ್ ಬಳಿ) ನಿವಾಸಿ, ಜ್ವರ ಲಕ್ಷಣಗಳಿದ್ದ 22 ವರ್ಷದ ಮಹಿಳೆಯೊಬ್ಬರಿಗೆ ಸೋಂಕು ದೃಢಪಟ್ಟಿದೆ.

       ಸೋಮವಾರಪೇಟೆ ತಾಲ್ಲೂಕು, ಕುಶಾಲನಗರದ ದಂಡಿನಪೇಟೆಯ (ರೋಟರಿ ಹಾಲ್ ಬಳಿ) ನಿವಾಸಿ, 48 ವರ್ಷದ ಮಹಿಳೆ ಆರೋಗ್ಯ ಕಾರ್ಯಕರ್ತರೊಬ್ಬರಿಗೆ ಸೋಂಕು ದೃಢಪಟ್ಟಿದೆ. ಸೋಮವಾರಪೇಟೆ ತಾಲ್ಲೂಕು, ಕುಶಾಲನಗರದ ಕೂಡ್ಲೂರು ನಿವಾಸಿ ಉಕ್ರೈನ್ ನಿಂದ ಹಿಂದಿರುಗಿದ್ದ 18 ವರ್ಷದ ಹುಡುಗನೊಬ್ಬನಿಗೆ ಸೋಂಕು ದೃಢಪಟ್ಟಿದೆ. ಸೋಮವಾರಪೇಟೆ ತಾಲ್ಲೂಕು ಕುಶಾಲನಗರದ ತೊರೆನೂರು  ನಿವಾಸಿ ಬೆಂಗಳೂರಿನಿಂದ ಹಿಂದಿರುಗಿದ್ದ 25 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ.  ವಿರಾಜಪೇಟೆ ತಾಲ್ಲೂಕು 1ನೇ ರುದ್ರಗುಪ್ಪೆ (ತೋತೇರಿ) ನಿವಾಸಿ ಬೆಂಗಳೂರಿನಿಂದ ಹಿಂದಿರುಗಿದ್ದ 38 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ. ಸೋಮವಾರಪೇಟೆ ತಾಲ್ಲೂಕು ಕುಶಾಲನಗರದ ತೊರೆನೂರು  ನಿವಾಸಿ ಬೆಂಗಳೂರಿನಿಂದ ಹಿಂದಿರುಗಿದ್ದ 25 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ. ಮಡಿಕೇರಿ ಪಟ್ಟಣದ ಪುಟಾಣಿ ನಗರ ನಿವಾಸಿ, ಮಂಗಳೂರಿನಿಂದ ಹಿಂದಿರುಗಿದ್ದ 54 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ.
       ಸೋಮವಾರಪೇಟೆ ತಾಲ್ಲೂಕಿನ ಕುಶಾಲನಗರದ ಜನತಾ ಕಾಲೋನಿಯ ನಿವಾಸಿಯಾದ ಜ್ವರ ಲಕ್ಷಣಗಳಿದ್ದ 17 ವರ್ಷದ ಹುಡುಗಿಗೆ ಸೋಂಕು ದೃಢಪಟ್ಟಿದೆ.

       ವಿರಾಜಪೇಟೆ ತಾಲ್ಲೂಕಿನ ಹಳೆ ಸಿದ್ಧಾಪುರದ ಹೆಚ್.ಎಸ್.ರಸ್ತೆಯ ಜ್ವರ ಲಕ್ಷಣಗಳಿದ್ದ 70 ವರ್ಷದ ಪುರುಷ ಮತ್ತು 43 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಇವರ ಕುಟುಂಬ ಸದಸ್ಯರು ಅಂತರ್ ಜಿಲ್ಲಾ ಪ್ರಯಾಣ ಮಾಡಿರುವ ಹಿನ್ನೆಲೆ ಇದೆ.

       ಅಂತರ್ ರಾಜ್ಯ ಪ್ರಯಾಣದ ಹಿನ್ನೆಲೆ ಇರುವ ಸೋಮವಾರಪೇಟೆ ತಾಲ್ಲೂಕಿನ ಸುಂಟಿಕೊಪ್ಪ ಹೋಬಳಿಯ ಕೊಡಗರಗಳ್ಳಿ ಗ್ರಾಮದ ಕೂರ್ಗ್ ಹಳ್ಳಿ ಎಸ್ಟೇಟ್ ನಲ್ಲಿ ವಾಸವಿರುವ 20 ವರ್ಷದ ಹುಡುಗಿಗೆ ಸೋಂಕು ದೃಢಪಟ್ಟಿದೆ.

       ಅಂತರ್ ರಾಜ್ಯ ಪ್ರಯಾಣದ ಹಿನ್ನೆಲೆ ಇರುವ ವಿರಾಜಪೇಟೆ ತಾಲ್ಲೂಕಿನ ಸಿದ್ಧಾಪುರದ ಎಂ.ಜಿ ರಸ್ತೆಯ ನಿವಾಸಿಯಾದ 47 ವರ್ಷದ ಮಹಿಳೆಯೊಬ್ಬರಿಗೆ ಸೋಂಕು ದೃಢಪಟ್ಟಿದೆ.
ವಿರಾಜಪೇಟೆ ತಾಲ್ಲೂಕಿನ ಗೋಣಿಕೊಪ್ಪದ ಹೆಚ್.ಸಿ.ಪುರ ನಿವಾಸಿಯಾದ ಜ್ವರ ಲಕ್ಷಣಗಳಿದ್ದ 43 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ.
ವಿರಾಜಪೇಟೆ ತಾಲ್ಲೂಕಿನ ಪೋನ್ನಂಪೇಟೆಯ ಹುದಿಕೇರಿ ರಸ್ತೆಯ ಮುಗುಟಗೇರಿ ನಿವಾಸಿಯಾದ ಜ್ವರ ಲಕ್ಷಣಗಳಿದ್ದ 42 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ.
ಈ ಹಿಂದೆ ಕೋವಿಡ್ ಸೋಂಕು ದೃಢಪಟ್ಟ ಹುಂಡಿ ಗ್ರಾಮದ ವ್ಯಕ್ತಿಯ ಪ್ರಾಥಮಿಕ ಸಂಪರ್ಕಿಗಳಾದ ಹುಂಡಿ ಗ್ರಾಮದ, ಪ್ರಸ್ತುತ ವಿರಾಜಪೇಟೆ ತಾಲ್ಲೂಕಿನ ಬಾಡಗ ಬಾಣಂಗಾಲದಲ್ಲಿ ನೆಲೆಸಿರುವ  10 ವರ್ಷದ ಬಾಲಕ, 15 ವರ್ಷದ ಬಾಲಕ ಮತ್ತು 33 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆಯ ಗುಂಡೂರಾವ್ ಬಡಾವಣೆಯಲ್ಲಿ ಈ ಹಿಂದೆ ಸೋಂಕು ದೃಢಪಟ್ಟ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 20 ವರ್ಷದ ಹುಡುಗನಿಗೆ ಸೋಂಕು ದೃಢಪಟ್ಟಿದೆ.
ಮಡಿಕೇರಿ ಪಟ್ಟಣದ ಮಹದೇವಪೇಟೆಯ (ರವಿ ಪ್ರೆಸ್ ಮಿಲ್ ಹತ್ತಿರ)  ನಿವಾಸಿಯಾದ ಜ್ವರ ಲಕ್ಷಣವಿದ್ದ 52 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಡಪಟ್ಟಿದೆ. ಇವರಿಗೆ ಅಂತರ್ ಜಿಲ್ಲಾ ಪ್ರಯಾಣದ ಹಿನ್ನೆಲೆ ಇರುತ್ತದೆ.
ಸೋಮವಾರಪೇಟೆ ತಾಲ್ಲೂಕು ಕುಶಾಲನಗರದ ತೊರೆನೂರು ಗ್ರಾಮದಲ್ಲಿ (ಗ್ರಾಮ ಪಂಚಾಯತ್ ಕಚೇರಿ ಮುಂಭಾಗ) ಈ ಹಿಂದೆ ಸೋಂಕು ದೃಢಪಟ್ಟಿದ್ದ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 36 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ.

 ಹಿಂದೆ ಸೋಂಕು ದೃಢಪಟ್ಟಿದ್ದ ಸೋಮವಾರಪೇಟೆ ತಾಲ್ಲೂಕಿನ ಕುಶಾಲನಗರ ಹೋಬಳಿ ತೊರೆನೂರು ಶಿರಂಗಾಲ ಗ್ರಾಮದ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 17 ವರ್ಷದ ಹುಡುಗನಿಗೆ ಸೋಂಕು ಧೃಢಪಟ್ಟಿದೆ.
 ಹಿಂದೆ ಸೋಂಕು ದೃಢಪಟ್ಟಿದ್ದ ಸೋಮವಾರಪೇಟೆ ತಾಲ್ಲೂಕಿನ ಕುಶಾಲನಗರ ಹೋಬಳಿ ಶಿರಂಗಾಲ, ಸಾಲುಕೊಪ್ಪಲು ಗ್ರಾಮದ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 44 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ.

ಈ ಹಿಂದೆ ಸೋಂಕು ದೃಢಪಟ್ಟಿದ್ದ ವಿರಾಜಪೇಟೆ ತಾಲ್ಲೂಕಿನ ಗೋಣಿಕೊಪ್ಪದ ಅಚ್ಚಪ್ಪ ಲೇಔಟ್‍ನ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 43 ವರ್ಷದ ಮಹಿಳೆಯೊಬ್ಬರಿಗೆ ಸೋಂಕು ದೃಢಪಟ್ಟಿದೆ. ಮಡಿಕೇರಿ ನಗರದ ರಾಣಿಪೇಟೆಯ ಜ್ವರ ಲಕ್ಷಣವಿದ್ದ 38 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ. ಮಡಿಕೇರಿಯ ತಾಳತ್ತಮನೆಯ ಜ್ವರ ಲಕ್ಷಣವಿದ್ದ 34 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ. ಈ ಹಿಂದೆ ಸೋಂಕು ದೃಢಪಟ್ಟಿದ್ದ ಮಡಿಕೇರಿ ನಗರದ ಗದ್ದುಗೆಯ ವ್ಯಕ್ತಿಯ ಪ್ರಾಥಮಿಕ ಸಂಪರ್ಕದ 22 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ.
 ಹಿಂದೆ ಸೋಂಕು ದೃಢಪಟ್ಟಿದ್ದ ಸೋಮವಾರಪೇಟೆ ತಾಲ್ಲೂಕು ಸುಂಟಿಕೊಪ್ಪದ ಎಮ್ಮೆಗುಂಡಿ ರಸ್ತೆಯ ಪ್ರಾಥಮಿಕ ಸಂಪರ್ಕದ 34 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ. 51 ವರ್ಷದ ಪುರುಷರೊಬ್ಬರು ವಿದೇಶದಿಂದ ಮರಳಿದ್ದು, ಅವರನ್ನು ನೇರವಾಗಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

       ಜಿಲ್ಲೆಯಲ್ಲಿ ಹೊಸದಾಗಿ 19 ನಿಯಂತ್ರಿತ ಪ್ರದೇಶಗಳನ್ನು ತೆರೆಯಲಾಗಿದೆ, ಐ.ಟಿ.ಐ ಜಂಕ್ಷನ್, ಮಡಿಕೇರಿ, ಕರಡಿಗೋಡು ಸಿದ್ಧಾಪುರ, ವಿರಾಜಪೇಟೆ ತಾಲ್ಲೂಕು, ಮಾದಪ್ಪ ಕಾಲೋನಿ, ನೆಲ್ಲಿಹುದಿಕೇರಿ, ಸೋಮವಾರಪೇಟೆ ತಾಲ್ಲೂಕು, ದಂಡಿನಪೇಟೆ (ಕುಸುಮ ಸ್ಟೋರ್ ಬಳಿ), ಕುಶಾಲನಗರ, ದಂಡಿನಪೇಟೆ (ರೋಟರಿ ಹಾಲ್ ಬಳಿ), ಕುಶಾಲನಗರ, ಕೂಡ್ಲೂರು, ಕುಶಾಲನಗರ, ಸೋಮವಾರಪೇಟೆ ತಾಲ್ಲೂಕು,  ವಿರಾಜಪೇಟೆ ತಾಲ್ಲೂಕು, 1ನೇ ರುದ್ರಗುಪ್ಪೆ (ತೋತೇರಿ).

       ಜನತಾ ಕಾಲೋನಿ, ಕುಶಾಲನಗರ, ಸೋಮವಾರಪೇಟೆ ತಾಲ್ಲೂಕು. ಹೆಚ್.ಎಸ್. ರಸ್ತೆ, ಹಳೇ ಸಿದ್ಧಾಪುರ, ವಿರಾಜಪೇಟೆ ತಾಲ್ಲೂಕು. ಕೂರ್ಗ್ ಹಳ್ಳಿ ಎಸ್ಟೇಟ್, ಕೊಡಗರಹಳ್ಳಿ, ಸೋಮವಾರಪೇಟೆ ತಾಲ್ಲೂಕು. ಎಂ.ಜಿ.ರಸ್ತೆ, ಸಿದ್ಧಾಪುರ, ವಿರಾಜಪೇಟೆ ತಾಲ್ಲೂಕು. ಹೆಚ್.ಸಿ.ಪುರ (ಜೈ ಹಿಂದ್ ವರ್ಕ್ ಶಾಪ್), ಗೋಣಿಕೊಪ್ಪ, ವಿರಾಜಪೇಟೆ. ಹುದಿಕೇರಿ ರಸ್ತೆ, ಮುಗುಟಗೇರಿ, ಪೆÇನ್ನಂಪೇಟೆ, ವಿರಾಜಪೇಟೆ ತಾಲ್ಲೂಕು. ಬಾಡಗ ಬಾಣಂಗಾಲ, ವಿರಾಜಪೇಟೆ ತಾಲ್ಲೂಕು. ಮಹದೇವಪೇಟೆ (ರವಿ ಪ್ರೆಸ್ ಮಿಲ್ ಹತ್ತಿರ), ಮಡಿಕೇರಿ. ತೊರೆನೂರು (ಗ್ರಾಮ ಪಂಚಾಯತ್ ಕಚೇರಿ ಮುಂಭಾಗ), ಸೋಮವಾರಪೇಟೆ ತಾಲ್ಲೂಕು.
ಸಾಲುಕೊಪ್ಪಲು ಗ್ರಾಮ, ಶಿರಂಗಾಲ, ಕುಶಾಲನಗರ, ಸೋಮವಾರಪೇಟೆ ತಾಲ್ಲೂಕು. ರಾಣಿಪೇಟೆ, ಮಡಿಕೇರಿ. ತಾಳತ್ತಮನೆ, ಮಡಿಕೇರಿ.

      ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಹುಂಡಿ ಗ್ರಾಮದಲ್ಲಿ ತೆರೆಯಲಾಗಿದ್ದ ನಿಯಂತ್ರಿತ ಪ್ರದೇಶವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ.

ಜಿಲ್ಲೆಯಲ್ಲಿ ಒಟ್ಟು 217 ಸೋಂಕಿತ ಪ್ರಕರಣಗಳು, 87 ಬಿಡುಗಡೆಗೊಂಡ ಪ್ರಕರಣಗಳು, 127 ಸಕ್ರಿಯ ಪ್ರಕರಣಗಳು, 03 ಮೃತಪಟ್ಟ ಪ್ರಕರಣಗಳು ಮತ್ತು 95 ನಿಯಂತ್ರಿತ ಪ್ರದೇಶಗಳು ಇರುತ್ತದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

No comments

Post a Comment