ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಉತ್ತರ ಪತ್ರಿಕೆ ಮೌಲ್ಯಮಾಪನ ಕಾರ್ಯಕ್ಕೆ ಆಗಮಿಸಿದ ಶಿಕ್ಷಕರಿಗೆ ಕೋವಿಡ್-19 ಥರ್ಮಲ್ ಪರೀಕ್ಷೆ
ಮಡಿಕೇರಿ (Times Of Coorg):-ನಗರದ ಸಂತ ಮೈಕಲರ ಶಾಲೆಯಲ್ಲಿ ಸೋಮವಾರ ಆರಂಭವಾದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಉತ್ತರ ಪತ್ರಿಕೆ ಮೌಲ್ಯಮಾಪನ ಕಾರ್ಯಕ್ಕೆ ಆಗಮಿಸಿದ ಶಿಕ್ಷಕರಿಗೆ ಕೋವಿಡ್-19 ಥರ್ಮಲ್ ಪರೀಕ್ಷೆ ನಡೆಸಲಾಯಿತು. ಇದರೊಂದಿಗೆ ಉತ್ತರ ಪತ್ರಿಕೆ ಮೌಲ್ಯಮಾಪನಕ್ಕೆ ಆಗಮಿಸಿದ ಪ್ರತೀ ಶಿಕ್ಷಕರಿಗೆ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿತ್ತು, ಶಿಕ್ಷಕರು ಸಾಮಾಜಿಕ ಅಂತರ ಕಾಯ್ದುಕೊಂಡು ಉತ್ತರ ಪತ್ರಿಕೆ ಮೌಲ್ಯಮಾಪನ ನಡೆಸಿದರು. ಈ ಸಂದರ್ಭದಲ್ಲಿ ಡಿಡಿಪಿಐ ಪಿ.ಎಸ್.ಮಚ್ಚಾಡೋ ಇತರರು ಇದ್ದರು.


No comments
Post a Comment