ವರದಿ : ಮುಸ್ತಫಾ ಸಿದ್ಧಾಪುರ
ಸಿದ್ದಾಪುರ (Times Of Coorg): ಕೊರೋನಾ ಮಹಾಮಾರಿ ಹರಡದಂತೆ ಲಾಕ್ ಡೌನ್ ಮಾಡಿರುವುದರಿಂದ ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿರುವ ಪೊಲೀಸರಿಗೆ ಮಡಿಕೇರಿಯ ವೈದ್ಯರಾದ ನವೀನ್ ಕುಮಾರ್ ಅವರು ಉಚಿತ ವೈದ್ಯಕೀಯ ತಪಾಸಣೆ ನಡೆಸಿದರು.
ದಿನದ 24 ಗಂಟೆಯೂ ಸೇವೆಯಲ್ಲಿ ನಿರತರಾಗಿರುವ ಪೊಲೀಸರ ಆರೋಗ್ಯದ ಹಿತದೃಷ್ಟಿಯಿಂದ ಡಾ. ನವೀನ್ ಕುಮಾರ್ ಅವರು ತಪಾಸಣೆಗೆ ಮುಂದಾಗಿದ್ದಾರೆ.
ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಡಾ. ನವೀನ್ ಕುಮಾರ್ ಮತ್ತು ಅವರ ತಂಡ ಕರ್ತವ್ಯ ನಿರತರಾಗಿರುವ ಪೊಲೀಸರನ್ನು ತಪಾಸಣೆ ಮಾಡಿದ್ದು, ಈಗಾಗಲೇ ಜಿಲ್ಲೆಯಾದ್ಯಂತ ಕರ್ತವ್ಯದಲ್ಲಿರುವ ಪೌರ ಕಾರ್ಮಿಕರನ್ನು ಹಾಗೂ ಪೊಲೀಸರ ಆರೋಗ್ಯ ತಪಾಸಣೆಯಲ್ಲಿ ಡಾ. ನವೀನ್ ಕುಮಾರ್ ನಿರತರಾಗಿದ್ದಾರೆ.
No comments
Post a Comment