ವರದಿ : ಶರಫುದ್ದೀನ್ ಗೋಣಿಕೊಪ್ಪ
ಗೋಣಿಕೊಪ್ಪಲು: ಇಂದು ಗೋಣಿಕೊಪ್ಪ ವೃತ ನಿರೀಕ್ಷರಾದ ರಾಮ ರೆಡ್ಡಿ ರವರ ನೇತೃತ್ವದಲ್ಲಿ ಗೋಣಿಕೊಪ್ಪಲು ಹಾಗೂ ಸುತ್ತ ಮುತ್ತಲಿರುವ ವಿವಿಧ ಕೋಮಿನ ಮುಖಂಡರುಗಳೊಂದಿಗೆ ಶಾಂತಿ ಸಭೆ ನಡೆಯಿತು
ಕೋರೋಣ ಮಹಾಮಾರಿಯಿಂದ ಲೋಕ್ ಡೌನ್ ಹಿನ್ನೆಲೆಯಲ್ಲಿ ಸರ್ಕಾರದ ಆದೇಶವನ್ನು ತಪ್ಪದೆ ಪಾಲಿಸಿ ಹಾಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ ಅನವಶ್ಯಕವಾಗಿ ಯಾರು ಕೂಡ ಮನೆಯಿಂದ ಹೊರಗಡೆ ಸುತ್ತಾಡೋದು ಬೇಡಿ ಹಾಗೂ ಶುಚಿತ್ವ ಕಾಪಡಿಕೊಳ್ಳಿ ರಂಜಾನ್ ಮಾಸಾಚಾರಣೆಯ ಪ್ರಾರ್ಥನೆ ಹಾಗೂ ಇಫ್ತಾರ್ ಕೂಡ ಮನೆಯಲ್ಲೇ ನಿರವೇರಿಸಿ ಎಂದು ರಾಮ ರೆಡ್ಡಿ ರವರು ಮನವಿ ಮಾಡಿದರು
ಗೋಣಿಕೊಪ್ಪ ಠಾಣಾ ಅಧಿಕಾರಿ ಸುರೇಶ್ ಬೊಪ್ಪಣ್ಣ ಮಾತನಾಡಿ ಮುಸಲ್ಮಾನರ ಪವಿತ್ರವಾದ ಹಬ್ಬ ರಂಜಾನ್ ಮಾಸಾಚಾರಣೆಯನ್ನು ಮನೆಯ ಚೌಕಟ್ಟಿನಲ್ಲಿ ನಡೆಯಲಿ ಗುಂಪು ಪ್ರಾರ್ಥನಾಗಳಿಗೆ ಯಾವುದೇ ಅವಕಾಶ ಇರುವುದಿಲ್ಲ ಸಾಮೂಹಿಕ ಇಫ್ತಾರ್ ಕೂಟಕೆ ಅವಕಾಶ ನೀಡುವುದಿಲ್ಲ.
ಮೇ 3ನೇ ತಾರೀಕು ತನಕ ಸರ್ಕಾರದ ಆದೇಶವನ್ನು ಪಾಲಿಸೋಣ ಎಲ್ಲರೂ ಶುಚಿತ್ವನ್ನು ಕಾಪಾಡಿಕೊಳ್ಳುವ ಮೂಲಕ ಕೊರೊಣ ಎಂಬ ಮಹಾಮಾರಿಯನ್ನು ದೂರ ಮಾಡಲು ಸಾಧ್ಯ ಎಂದು ಅಭಿಪ್ರಾಯ ಪಟ್ಟಿದ್ದಾರೆ
ಈ ಸಂದರ್ಭ ಪೊನ್ನಂಪೇಟೆ ಠಾಣಾ ಅಧಿಕಾರಿ ಡಿ ಕುಮಾರ್ ಹಾಗು ಸಿಬ್ಬಂದಿಗಳಾದ ಮೊಹಮ್ಮದ್ ಅಲಿ ಮಣಿಕಂಠ ಹಾಗೂ ಗೋಣಿಕೊಪ್ಪ ಮತ್ತು ಪೊನ್ನಂಪೇಟೆಯ ವಿವಿಧ ಕೋಮಿನ ಮುಖಂಡರುಗಳು ಉಪಸ್ಥಿತರಿದ್ದರು.
No comments
Post a Comment