ಸೋಮವಾರಪೇಟೆ(TIMES OF COORG):- ಕೊಡವರ ಹೊಸ ವರುಷವಾದ ಎಡಮ್ಯಾರ್ ಒಂದನ್ನು ಲಾಕ್'ಡೌನ್ ಹಿನ್ನಲೆಯಲ್ಲಿ ಜೂ಼ಮ್ ವೀಡಿಯೊ ಕಾನ್ಫರೆನ್ಸ್ ಮೂಲಕ ಆಚರಿಸಿ, ಕೊಡವ ಹೊಸ ಕ್ಯಾಲೆಂಡರ್'ನ್ನು ಮಂಗಳವಾರ ಲೋಕಾರ್ಪಣೆ ಮಾಡಲಾಯಿತು. ಕೊಡವಾಮೆರ ಕೊಂಡಾಟ ಕೂಟದ ಅಧ್ಯಕ್ಷ ಚಾಮೆರ ದಿನೇಶ್'ಬೆಳ್ಯಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಹಿರಿಯ ಸದಸ್ಯರಾದ ಮಾಳೇಟಿರ ಶ್ರೀನಿವಾಸ್'ರವರು ಅವರ ಮನೆಯ ನೆಲ್ಲಕ್ಕಿಯಲ್ಲಿ ದೀಪ ಬೆಳಗಿಸಿ ಗುರುಕಾರೋಣರಿಗೆ ಅಕ್ಕಿ ಹಾಕಿ ಪ್ರಾರ್ಥಿಸಿದರು. ಅಂತರಾಷ್ಟ್ರೀಯ ಅಥ್ಲೀಟ್, ಮೋಟಿವೇಷನ್ ಗುರು, ಕೊಡವಾಮೆರ ಕೊಂಡಾಟ ಕೂಟದ ಸದಸ್ಯ ತೀತಮಾಡ ಅರ್ಜುನ್ ದೇವಯ್ಯನವರು ನೂತನ ಕೊಡವ ಕ್ಯಾಲೆಂಡರ್'ನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ಪ್ರಪಂಚದಲ್ಲಿ ವಿಶಿಷ್ಟ ಸಂಸ್ಕೃತಿಯನ್ನು ಹೊಂದಿರುವುದಕ್ಕೆ ಈ ಹೊಸ ವರ್ಷಾಚರಣೆಯೂ ಒಂದು ಸಾಕ್ಷಿ. ಅತ್ಯಂತ ಕಡಿಮೆ ಸಂಖ್ಯೆಯಲ್ಲಿರುವ ನಾವು, ಎಂದಿಗೂ ನಮ್ಮ ತನವನ್ನ ಬಿಡದೆ, ನಮ್ಮ ಸಂಪ್ರದಾಯವನ್ನು ಉಳಿಸಿಬೆಳೆಸುಲು ಒಂದಾಗಬೇಕೆಂದು ಕರೆ ನೀಡಿದರು. ಮುಖ್ಯ ಅಥಿತಿಯಾಗಿದ್ದ ಕೊಡವ ಮಕ್ಕಡ ಕೂಟದ ಮಾಜಿ ಅಧ್ಯಕ್ಷ ಬೊಳ್ಳಾಜಿರ ಅಯ್ಯಪ್ಪ ಅವರು, ಎಡಮ್ಯಾರ್ ಒಂದರ ಮಹತ್ವ ಹಾಗೂ, ಕೊಡವರಿಗೆ ಪ್ರಕೃತಿ ಹಾಗೂ ಗದ್ದೆಯೊಂದಿಗಿರುವ ಅವಿನಾಭಾವ ಸಂಬಂಧದ ಕುರಿತು ಮಾಹಿತಿ ನೀಡಿದರು. ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಮಾತನಾಡಿ, ಈ ಹೊಸ ವರ್ಷಕೆ ಇದೊಂದು ವಿನೂತನ ಪ್ರಯತ್ನವಾಗಿದ್ದು, ಈ ಕ್ಯಾಲೆಂಡರನ್ನು ಜ್ಯೋತಿಷಿ, ಶ್ರೀಮತಿ ಕರೋಟಿರ ಶಶಿ ಸುಬ್ರಮಣಿಯವರ ಮಾರ್ಗದರ್ಶನದಲ್ಲಿ ಸೂರ್ಯ ಸಿದ್ದಾಂತ ಹಾಗೂ ದ್ರಗಣಿತ ಆಧಾರದಲ್ಲಿ ರಚಿಸಲಾಗಿದ್ದು, ಇದರಲ್ಲಿ ಕೊಡವರ ಆಚಾರ, ಹಬ್ಬ ಹರಿದಿನಗಳ ಮಾಹಿತಿಯನ್ನು ನೀಡಲಾಗಿದೆ. ಇದೀಗ ಲಾಕ್ ಡೌನ್ ಇರುವುದರಿಂದ, ಮುದ್ರಣ ಸಾದ್ಯವಾಗಿಲ್ಲ ಮುಂದಿನ ದಿನಗಳಲ್ಲಿ ಇದರ ವ್ಯವಸ್ಥೆಯನ್ನು ಮಾಡಲಾಗುವುದೆಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ, ಕೋಟೆರ ಉದಯ್ ಪೂಣಚ್ಚ, ಆಪಾಡಂಡ ಜಗಮೊಣ್ಣಪ್ಪ, ವೈಲೇಶ್ ಕೊಡಗು, ಅಲ್ಲಾರಂಡ ವಿಠಲ್ ನಂಜಪ್ಪ, ಉಳುವಂಗಡ ಕಾವೇರಿ ಉದಯ, ಚೆರಿಯಪಂಡ ವಿಶುಕಾಳಪ್ಪ, ಚಮ್ಮಟಿರ ಪ್ರವೀಣ್ ಉತ್ತಪ್ಪ, ಮೂಕಳಮಾಡ ರಂಜು ನಾಣಯ್ಯ, ಕುಂಡ್ಯೋಳಂಡ ಉತ್ತಪ್ಪ, ಸೇರಿದಂತೆ ದೇಶ ವಿದೇಶದಿಂದ ಭಾಗವಹಿಸಿದ ಹಲವರು ತಮ್ಮ ಅಭಿಪ್ರಾಯ ಹಂಚಿಕೊಂಡರು. ಕಾರ್ಯಕ್ರಮದ ಆದಿಯಲ್ಲಿ ಉಪಾಧ್ಯಕ್ಷೆ ಮೂವೆರ ರೇಖಪ್ರಕಾಶ್ ಸ್ವಾಗತಿಸಿ, ಸಾಂಸ್ಕೃತಿಕ ಕಾರ್ಯದರ್ಶಿ ಪೋಡಮಾಡ ಭವಾನಿನಾಣಯ್ಯ ವಂದಿಸಿದರೆ, ಸದಸ್ಯ ಮಂದೆಯಂಡ ವನಿತ್'ಸಂಜು ಅವರು ನಿರೂಪಿಸಿ, ನಿರ್ವಹಿಸಿದರು. ಲಾಕ್'ಡೌನ್' ವ್ಯವಸ್ಥೆಯನ್ನು ಸರಿಯಾಗಿ ಬಳಸಿಕೊಂಡು, ನಡೆಸಿದ ವಿನೂತನ ಕಾರ್ಯಕ್ರಮವು ಜನಮನ್ನಣೆಗೆ ಪಾತ್ರವಾಯಿತು.
No comments
Post a Comment