ಕಾರ್ಮಿಕರ ಕುಂದು ಕೊರತೆ ವಿಚಾರಿಸಿದ ಅಧಿಕಾರಿಗಳು

      ಮಡಿಕೇರಿ ಏ.08(TIMES OF COORG):- ಕುಶಾಲನಗರದ ಸಮೀಪದ ಬಸವನಹಳ್ಳಿಯ ಹೊಸಕಾಡಿನಲ್ಲಿ ಶೇಡ್‍ನಲ್ಲಿ ವಾಸವಾಗಿರುವ 03 ಸೋಲಿಗ,  04 ಬೆಟ್ಟಕುರುಬ, 02 ಕ್ರಿಶ್ಚನ್  ಮತ್ತು 1 ಜೇನುಕುರುಬ ಕುಟುಂಬದವರು ವಾಸವಿರುವ ಸ್ಥಳಕ್ಕೆ ಹಿರಿಯ ಕಾರ್ಮಿಕ ನಿರೀಕ್ಷಕರಾದಂತಹ ಎಂ.ಎಂ ಯತ್ನಟ್ಟಿ ಅವರು ಭೇಟಿ ನೀಡಿ ಪರಿಶೀಲಿಸಿದರು.
       ಈ ವೇಳೆ ಕುಟುಂಬದವರ ಕೆಲಸದ ಮತ್ತು ರೇಷನ್ ಕುರಿತು ಮತ್ತು ಕಂದು ಕೊರತೆಯ ಬಗ್ಗೆ ಮಾಹಿತಿ ಪಡೆಯಲಾಯಿತು. ಈ ವೇಳೆ ಅಲ್ಲಿನ ಕುಟುಂಬಸ್ಥರು ತಾವು ತೋಟದ ಕೆಲಸಕ್ಕೆ ಹೋಗುವುದಾಗಿ ತಿಳಿಸಿದ್ದಾರೆ. ಅವರೆಲ್ಲರಿಗೂ ಪಡಿತರ ಚೀಟಿ ಇದ್ದು ಅವರಿಗೆ ಪಡಿತರ ದೊರಕಿರುವುದಾಗಿ ತಿಳಿಸಿದ್ದಾರೆ ಎಂದು ಹಿರಿಯ ಕಾರ್ಮಿಕ ನಿರೀಕ್ಷಕರು ತಿಳಿಸಿದರು.
       ಇದೇ ವೇಳೆ ಮಡಿಕೇರಿ ನಗರದ ವಿವಿಧ ಕಡೆ ಭೇಟಿ ನೀಡಿ ಕಾರ್ಮಿಕರ ಕೊಂದು ಕೊರತೆ ವಿಚಾರಿಸಲಾಯಿತು, ನಗರಸಭೆಯ ಹಿಂಭಾಗ ದರ್ಶನ ಚೆಂಗಪ್ಪ ಇವರ ಕಟ್ಟಡ ನಿರ್ಮಾಣದ ಸ್ಥಳದಲ್ಲಿ 13 ಜನ ಮಧ್ಯಪ್ರದೇಶದವರು ಮತ್ತು 05ಜನ ಜಾಖರ್ಂಡ್ ರಾಜ್ಯದ ಕಾರ್ಮಿಕರು ವಾಸವಿದ್ದು, ಇವರಿಗೆ ನಗರಸಭೆ ವತಿಯಿಂದ 06 ಕಿಟ್ ರೇಷನ್ ಒದಗಿಸಿದ್ದಾಗಿ ತಿಳಿಸಿದ್ದಾರೆ ಎಂದು ಹಿರಿಯ ಕಾರ್ಮಿಕ ನಿರೀಕ್ಷಕರು ಮಾಹಿತಿ ನೀಡಿದ್ದಾರೆ.
       ವಿದ್ಯಾನಗರದ ವೆಂಕಟೇಶ ಪ್ರಸಾದ್ ಇವರ ಮನೆಯ ನಿರ್ಮಾಣದ ಸ್ಥಳದಲ್ಲಿರುವ ಜಾಖರ್ಂಡ್ ರಾಜ್ಯದ 07ಜನ ಕಾರ್ಮಿಕರಿಗೆ ನಗರಸಭೆಯಿಂದ 03 ಕಿಟ್ ರೇಷನ್ ನೀಡಿರುವುದಾಗಿ ಕಾರ್ಮಿಕರು ಮಾಹಿತಿ ನೀಡಿದ್ದಾರೆ. ಮಹಾದೇವಪೇಟೆಯ ಅಲಿಮಾ ಕಾಂಪ್ಲೆಕ್ಸ್‍ನಲ್ಲಿ ಇರುವ ಒಟ್ಟು 12 ಜನರಲ್ಲಿ 08 ಜನಕ್ಕೆ ಆಹಾರ ಸಾಮಾಗ್ರಿಯ ಕಿಟ್ ದೊರೆತಿದ್ದು, ಉಳಿದವರಿಗೆ  ತಹಶೀಲ್ದಾರವರಿಂದ ಕಿಟ್ ಪಡೆದು ಪರಿಶೀಲಿಸಿ ಕೊಡುವುದಾಗಿ ಪೌರಾಯುಕ್ತರು ತಿಳಿಸಿದ್ದಾರೆ ಎಂದು ಎಂ.ಎಂ ಯತ್ನಟ್ಟಿ ಅವರು ಮಾಹಿತಿ ನೀಡಿದ್ದಾರೆ.