ಮೂಸಾ ನಿಗೂಢ ಸಾವು ಪ್ರಕರಣ ; ಆನ್‍ಲೈನಲ್ಲಿ ಸಭೆ ನಡೆಸಿದ ಮುಸ್ಲಿಂ ಮುಖಂಡರು

No comments
          ಪೊನ್ನಂಪೇಟೆ (TIMES OF COORG):  ನಿಗೂಢವಾಗಿ ನಾಪತ್ತೆಯಾಗಿ ಐದು ದಿನಗಳ ಬಳಿಕ ಶವವಾಗಿ ಪತ್ತೆಯಾದ ಗುಂಡಿಕೆರೆಯ  ಎಂ.ಎಂ.ಮೂಸ ಅವರ ಸಾವಿಗೆ ಸಂಬಂಧಿಸಿದಂತೆ ವೀರಾಜಪೇಟೆ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ 'ಅನುಮಾನಸ್ಪದ ಸಾವು' ಪ್ರಕರಣ ದಾಖಲಾಗಿದೆ. 
ಈ ಮಧ್ಯೆ ಮೂಸ ಅವರ ನಿಗೂಢ ಸಾವಿನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲೆಯ ಮುಸ್ಲಿಂ ಮುಖಂಡರು ಶನಿವಾರ ಸಂಜೆ ಆನ್ ಲೈನ್ ಮೂಲಕ ಸಭೆ ನಡೆಸಿದ್ದಾರೆ.
ಮೂಸ ಅವರ ಸಾವಿನ ಬಗ್ಗೆ ವ್ಯಾಪಕ ಸಂಶಯ ಕೇಳಿಬರುತ್ತಿದೆ. ಅಲ್ಲದೆ ಅವರ ಮನೆಯವರು ಕೂಡ ಈ ಬಗ್ಗೆ ತೀವ್ರ ಸಂಶಯ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಮೂಸ ಅವರ ಸಾವು ಕೊಲೆಯಾಗಿದ್ದರೆ ಅದಕ್ಕೆ ಕಾರಣರಾದವರನ್ನು ಪೆÇಲೀಸರು ಪತ್ತೆ ಹಚ್ಚಿ ಶಿಕ್ಷಿಸಬೇಕು. ಎಸ್ಪಿಯವರು ಈ ಪ್ರಕgಣವನ್ನು ಗಂಭೀರವಾಗಿ ಪರಿಗಣಿಸಬೇಕು. ಮೃತರ ಕುಟುಂಬಕ್ಕೂ ನ್ಯಾಯ ದೊರೆಯಬೇಕು ಎಂದು ಅವರುಗಳು  ಆಗ್ರಹಿಸಿದ್ದಾರೆ.
 ಆನ್‍ಲೈನ್ ಸಭೆಯಲ್ಲಿ ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಕೆ.ಎ. ಯಾಕೂಬ್,  ಉಪಾಧ್ಯಕ್ಷ ಕೆ.ಎಂ. ಅಬ್ದುಲ್ ರಹ್ಮಾನ್ (ಬಾಪು),  ಹಿರಿಯ ಮುಖಂಡ ಪಿ.ಎಂ. ಖಾಸಿಂ,  ಜಿಲ್ಲಾ ಪಂಚಾಯತ್ ಸದಸ್ಯ ಅಬ್ದುಲ್ ಲತೀಫ್, ಪ್ರಮುಖ ಅಮೀನ್ ಮೊಹಿಸಿನ್,  ವೀರಾಜಪೇಟೆಯ ಆರ್. ಕೆ.ಸಲಾಂ, ಏಜಾಜ್ ಅಹಮ್ಮದ್, ಹಾಕತ್ತೂರಿನ ಖಾಲಿದ್, ಹೆಚ್.ಎ. ಹಂಸ,  ಎಂ.ಎ.ಮೊಯಿದು  ಮೊದಲಾದವರು ಭಾಗವಹಿಸಿದ್ದರು.

No comments

Post a Comment