ಈತ ತಾನು ದುಡಿದ ಹಣದಲ್ಲಿ ಬಣ್ಣವನ್ನು ಖರೀದಿಸಿ ಬಣ್ಣವನ್ನು ಹಚ್ಚುತ್ತಾನೆ ಈತನ ಬಾಡಿಗೆ ಮನೆಯ ಪಕ್ಕದಲ್ಲಿ ಆನೇಕ ಕುಟುಂಬವು ವಾಸವಿದ್ದು ಅವರು ಉಪಯೋಗಿಸಿ ಕಸದಬುಟ್ಟಿಗೆ ಹಾಕುವ ವಸ್ತುಗಳನ್ನು ಬಳಸಿ ಕರ್ನಾಟಕ ರಾಜ್ಯದ ಕೆ ಎಸ್ ಅರ್ ಟಿಸಿ ಬಸ್ ,ಖಾಸಗಿ ಬಸ್,ಜೀಪು,ಲಾರಿ,ಕಾರು,ಬೈಕ್, ಅಲ್ಲದೆ ಆಸ್ಪತ್ರೆ ಯಲ್ಲಿ ಉಪಯೋಗಿಸುವ ಚುಚ್ಚುಮದ್ದು ಹಾಕುವ ಸಿರಂಜ್ ಉಪಯೋಗಿಸಿ ಜೆಸಿಬಿ,ಹಡಗು, ಇನ್ನಿತರ ಆಕರ್ಷಣೆ ಯಾಗುವ ಕಣ್ಣಿಗೆ ಮುದನೀಡುವ ಆಟಿಕೆ ಸಾಮಗ್ರಿಗಳನ್ನು ತಾನೇ ತಯಾರಿಸುತ್ತಾನೆ ಶಾಲೆಯಲ್ಲಿ ಕೂಡ ಉತ್ತಮ ವಿದ್ಯಾರ್ಥಿ ಎಂದು ಭದ್ರಿಯಾ ಶಾಲೆಯ ಶಿಕ್ಷಕಿ ಶ್ರೀ ಮತಿ ಪುಷ್ಪ ತಿಳಿಸಿದರು ಅಲ್ಲದೆ ಶಾಲೆಗೆ ಈತನ ಕೊಡುಗೆ ಅಪಾರ ಎಂದು ತಿಳಿಸಿದರು, ಮುಂದೆ ಹತ್ತನೆ ತರಗತಿಯಾದ ನಂತರ ವಾಣಿಜ್ಯ ಶಾಸ್ತ್ರ ಅದ್ಯಯನ ಮಾಡಲು ಆಸಕ್ತಿ ಇರುವುದಾಗಿ ಪಾಜಿಲ್ ತಿಳಿಸಿದರು ಇತನ ಬೆಂಬಲಕ್ಕೆ ಶಾಲೆ ಯ ಅದ್ಯಕ್ಷ ಪಿ ಕೆ ಅಪ್ಸರ್ ಮತ್ತು ಶಾಲೆ ಯ ಕಾರ್ಯದರ್ಶಿ ಸಿರಾಜ್,ಈತನಿಗೆ ಕಲೆಯಲ್ಲಿ ಉತ್ತಮ ಆಸಕ್ತಿ ಇದೆ ಇವನನ್ನು ಸರ್ಕಾರ ಗುರುತಿಸಿ ಈತನ ಆಸಕ್ತಿ ಗೆ ಬೆಂಬಲಿಸ ಬೇಕಿದೆ ,ಕಲೆಗೆ ಹೆಚ್ಚಿನ ಪ್ರೊತ್ಸಾಹ ನೀಡಬೇಕಿದೆ ಎಂದು ಬದ್ರಿಯ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಪಿ ಕೆ ಅಪ್ಸರ್ ಮಾಧ್ಯಮ ಕ್ಕೆ ತಿಳಿಸಿದರು ಅಲ್ಲದೆ ಸುತ್ತ ಮುತ್ತ ಮನೆಯ ಶಕೀಲ್,ಯಾಹಿಯಾ,ನೌಷದ್,ಜಕ್ರಿಯ,ಸೇರಿದಂತೆ ಅನೇಕ ರ ಈತನ ಪ್ರತಿಭೆ ಗೆ ಮೆಚ್ಚುಗೆ ವ್ಯಕ್ತಪಡಿಸಿದರು..
- ಚಿತ್ರ ಕೃಪೆ : ಜಂಶೀರ್ ಕಲ್ಲುಬಾಣೆ






No comments
Post a Comment