"ಹಸಿದ ಹೊಟ್ಟೆಗೆ ತಣಿವು ಪೆಟ್ಟಿಗೆ" ಆಹಾರ ನಿಧಿಗೆ ನೆರವಿನ ಮಹಾಪೂರ : ರೆಸಾರ್ಟ್ ಮಾಲೀಕನಿಂದ 1.5೦ ಲಕ್ಷ ಮೌಲ್ಯದ ಪಡಿತರ ಸಾಮಗ್ರಿ ಹಸ್ತಾಂತರ

No comments
ಮಡಿಕೇರಿ (Times Of Coorg) : ಕೊರೊನಾ ವೈರಸ್ ಹಿನ್ನೆಲೆಯಲ್ಲಿ ರಾಷ್ಟ್ರಾದ್ಯಾಂತ ಲಾಕ್‍ಡೌನ್ ಜಾರಿಯಲ್ಲಿದ್ದು; ಕೊಡಗು ಜಿಲ್ಲೆಯಲ್ಲೂ ಮುಂದು ವರೆದಿದೆ. ಲಾಕ್‍ಡೌನ್ ಇರುವ ದರಿಂದ ಸಂಕಷ್ಟಕ್ಕೊಳ ಗಾದವರ ನೆರವಿಗೆ ಧಾವಿಸಲು ಸರಕಾರ ಪರಿಹಾರ ನಿಧಿ ಸ್ಥಾಪನೆ ಮಾಡಿದೆ. ಜಿಲ್ಲೆಯಲ್ಲಿ ಹಸಿದವರ ಹೊಟ್ಟೆ ತಣಿಸಲು ತಣಿವು ಪೆಟ್ಟಿಗೆ ಎಂಬ ಯೋಜನೆ ರೂಪಿಸಿದ್ದು; ಜಿಲ್ಲೆಯ ಸಹೃದಯರಿಂದ ನೆರವು ಹರಿದು ಬರುತ್ತಿದೆ.ಪಡಿತರ ಸಾಮಗ್ರಿ ಹಸ್ತಾಂತರಲಾಕ್‍ಡೌನ್ ಹಿನ್ನೆಲೆ ಜಿಲ್ಲಾಡಳಿತ ವತಿಯಿಂದ ನಿರ್ಮಿಸಲಾಗಿರುವ ಹಸಿದ ಹೊಟ್ಟೆಗೆ ತಣಿವು ಪೆಟ್ಟಿಗೆಗೆ ನಾರ್ನೆ ಹೊಟೇಲ್ ಮತ್ತು ರೆಸಾರ್ಟ್‍ನ ಮಾಲೀಕ ರಾಜಶೇಖರ ರೆಡ್ಡಿ ಅವರು ಸುಮಾರು 1.50 ಲಕ್ಷ ಮೌಲ್ಯದ ಪಡಿತರ ಸಾಮಗ್ರಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸುಮನ್ ಡಿ.ಪಿ. ಅವರ ಮುಖಾಂತರ ಹಸ್ತಾಂತರಿಸಿದರು.ನಗರದ ಹಳೆಯ ಖಾಸಗಿ ಬಸ್ ನಿಲ್ದಾಣ ಬಳಿ ಸ್ಥಾಪಿಸಲಾಗಿರುವ ಹಸಿದ ಹೊಟ್ಟೆಗೆ ತಣಿವು ಪೆಟ್ಟಿಗೆಗೆ  ಅಕ್ಕಿ, ಬೇಳೆ, ಎಣ್ಣೆ ಸೇರಿದಂತೆ ಮತ್ತಿತರ ಪಡಿತರ ಸಾಮಗ್ರಿಗಳನ್ನು ರಾಜಶೇಖರ ರೆಡ್ಡಿ ಅವರು ಹಸ್ತಾಂತರಿಸಿದರು. ರಾಜಶೇಖರ್ ರೆಡ್ಡಿ ಅವರ ಸಾಮಾಜಿಕ ಕಳಕಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭ ಮಡಿಕೇರಿ ತಾಲೂಕು ಪಂಚಾಯಿತಿ ಇಒ ಲಕ್ಷ್ಮಿ,  ಡಿವೈಎಸ್ಪಿ ದಿನೇಶ್, ಸಿಪಿಐ ಅನೂಪ್ ಮಾದಪ್ಪ, ಮೇದಪ್ಪ ಇತರರು ಇದ್ದರು.

No comments

Post a Comment