ಜಿಲ್ಲಾ ಕಾಂಗ್ರೆಸ್ ಸಮಿತಿ ತೀವ್ರ ಸಂತಾಪ 

No comments

ಮಡಿಕೇರಿ ಆ.27 : ವಿಧಾನ ಪರಿಷತ್ ಮಾಜಿ ಸದಸ್ಯ ಎ.ಕೆ.ಸುಬ್ಬಯ್ಯ ಅವರ ನಿಧನಕ್ಕೆ ಜಿಲ್ಲಾ ಕಾಂಗ್ರೆಸ್ ಸಮಿತಿ ತೀವ್ರ ಸಂತಾಪ ಸೂಚಿಸಿದೆ. ಕೊಡಗು ಜಿಲ್ಲೆಯನ್ನು ಅನೇಕ ಸಂಕಷ್ಟದ ಪರಿಸ್ಥಿತಿಗಳು ಕಾಡಿದಾಗ ಧೈರ್ಯವಾಗಿ ಹೋರಾಟ ನಡೆಸಿ ನ್ಯಾಯ ತಂದುಕೊಡುತ್ತಿದ್ದ ಹಿರಿಯ ಹೋರಾಟಗಾರರೊಬ್ಬರನ್ನು ಕಳೆದುಕೊಂಡು ಜಿಲ್ಲೆ ಬಡವಾಗಿದೆ. 
ಕೆ.ಕೆ.ಮಂಜುನಾಥ್ ಕುಮಾರ್, ಜಿಲ್ಲಾಧ್ಯಕ್ಷರು, ಕಾಂಗ್ರೆಸ್ ಸಮಿತಿ 

========================================= ಯಾವುದೇ ಕ್ಲಿಷ್ಟಕರ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸುತ್ತಿದ್ದರು. ಹೋರಾಟ ಮನೋಭಾವದ ವ್ಯಕ್ತಿಗಳಿಗೆ ಸ್ಫೂರ್ತಿಯಾಗಿದ್ದ ನೇರನುಡಿಯ ಹೋರಾಟಗಾರ ನಮ್ಮನ್ನು ಅಗಲಿರುವುದು ದು:ಖ ತಂದಿದೆ. ಟಾಟುಮೊಣ್ಣಪ್ಪ, ಜಿಲ್ಲಾ ವಕ್ತಾರರು, ಕಾಂಗ್ರೆಸ್ ಸಮಿತಿ 

======================================= ಕಾನೂನಾತ್ಮಕ ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸಿ ಜಿಲ್ಲೆಯ ಬೆಳೆಗಾರರು, ರೈತÀರು ಹಾಗೂ ಬಡವರ್ಗದ ಧ್ವನಿಯಾಗಿ ಕಾರ್ಯನಿರ್ವಹಿಸಿದ ಸುಬ್ಬಯ್ಯ ಅವರ ಆದರ್ಶಗಳು ಇಂದಿಗೂ ಜೀವಂತ  ಹೊಸೂರು ಸೂರಜ್, ಜಿಲ್ಲಾಧ್ಯಕ್ಷರು, ಕಾಂಗ್ರೆಸ್ ಸಾಮಾಜಿಕ ಜಾಲತಾಣ 

No comments

Post a Comment